ಇಂಡಿಯನ್ಸ್ ಹೊರದಬ್ಬಿದ ಇಂಗ್ಲೆಂಡ್ ಹೋಟೆಲ್

ರೂಮ್ ಕೀ ಪಡೆಯಲು ಮುಂದಾದ ಭಾರತದ ಶೂಟರ್ ಗಳಿಗೆ ಕೀ ನೀಡಲು ಹೊಟೇಲ್ ಸಿಬ್ಬಂದಿ ನಿರಾಕರಿಸಿದ್ದಾರೆ. ಅಷ್ಟೇ ಅಲ್ಲದೆ ಹೊಟೇಲ್ ರೂಮ್ ಅಡ್ವಾನ್ಸ್ ಹಣವನ್ನು ಕೂಡಾ ಹಿಂತಿರುಗಿಸಲಾಗಿದೆ.
ಹೊಟೇಲ್ ಸಿಬ್ಬಂದಿಗಳ ಈ ರೀತಿ ವರ್ತನೆಗೆ ಸರಿಯಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಶೂಟಿಂಗ್ ಫೆಡರೇಷನ್ ಅಧಿಕಾರಿಗಳು ಭಾರತೀಯ ರಾಯಭಾರಿ ಕಚೇರಿ ನೆರವಿನಿಂದ ಇನ್ನೊಂದು ಹೊಟೆಲ್ ನಲ್ಲಿ ರೂಮ್ ಪಡೆದು ಆಟಗಾರರಿಗೆ ಉಳಿದುಕೊಳ್ಳುವ ವ್ಯವಸ್ಥೆ ಕಲ್ಪಿಸಿದ್ದಾರೆ.
ಹೊಟೇಲ್ ವಿರುದ್ಧ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಹಾಗೂ ಭಾರತೀಯ ಒಲಿಂಪಿಕ್ ಸಮಿತಿಗೆ ಶೂಟರ್ಸ್ ದೂರು ನೀಡಿದ್ದಾರೆ. ಒಲಿಂಪಿಕ್ಸ್ ಕ್ರೀಡೆಗಳು ಲಂಡನ್ ನಲ್ಲಿ 27 ಜುಲೈ 2012 ರಿಂದ 12 ಆಗಸ್ಟ್ 2012 ರವರೆಗೂ ನಡೆಯಲಿದೆ.












Click it and Unblock the Notifications