ಜಗನ್‌ ಆಸ್ತಿಪಾಸ್ತಿ ಮುಟ್ಟುಗೋಲಿಗೆ ಸಕಲ ಸಿದ್ಧತೆ

andhra-govt-may-confiscate-jagan-properties
ಹೈದರಾಬಾದ್, ಏ. 30: ಅಕ್ರಮ ಆಸ್ತಿ ಪ್ರಕರಣ ಸಂಬಂಧ ವೈ.ಎಸ್. ಜಗನ್‌ಮೋಹನ ರೆಡ್ಡಿ ವಿರುದ್ಧ ಸಿಬಿಐ ಆರೋಪಪಟ್ಟಿ ದಾಖಲಿಸಿದ್ದು ಸ್ವತಃ ಜಗನ್‌ A1 ಆಗಿ ದಾಖಲಾಗಿದ್ದಾರೆ. ಈ ಮಧ್ಯೆ Criminal Law Amendment Ordinance-1944 ಅನುಸಾರ ಜಗನ್ ಸಂಪಾದಿಸಿರುವ ಅಕ್ರಮ ಆಸ್ತಿಪಾಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಆಂಧ್ರ ಸರಕಾರ ಸಕಲ ಸಿದ್ಧತೆ ನಡೆಸುತ್ತಿದೆ.

ಗುಪ್ತ ಮೂಲಗಳ ಪ್ರಕಾರ ಜಗನ್ ಸಕಲಾಸ್ತಿಯೂ ಅದರಲ್ಲೂ ಜಗತಿ ಪ್ರಕಾಶನ ಸಂಸ್ಥೆಗೆ ಸೇರಿದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದಕ್ಕೆ ಅನುವು ಮಾಡಿಕೊಡಲು ಕೋರ್ಟಿನಲ್ಲಿ ಅರ್ಜಿ ಸಲ್ಲಿಸುವಂತೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐಗೆ ರಾಜ್ಯ ಸರಕಾರ ಸೂಚನೆ ನೀಡಿದೆ ಎನ್ನಲಾಗಿದೆ. ಸಿಬಿಐ ಆರೋಪಪಟ್ಟಿ ಪ್ರಕಾರ ಜಗನ್ ಬಳಿ 1,246 ಕೋಟಿ ರು. ಅಕ್ರಮ ಆಸ್ತಿಯಿದೆ.

ಅಪರಾಧವೆಸಗಿ ಆಸ್ತಿ ಕ್ರೋಢೀಕರಣ ಮಾಡಿಕೊಂಡಿದ್ದರೆ ಅಂತಹ ಆಸ್ತಿಯನ್ನು ರಾಜ್ಯ ಅಥವಾ ಕೇಂದ್ರ ಸರಕಾರ ಮುಟ್ಟುಗೋಲು ಹಾಕಿಕೊಳ್ಳುವುದಕ್ಕೆ ಮೇಲೆ ತಿಳಿಸಿದ ಕಾನೂನಲ್ಲಿ ಅವಕಾಶವಿದೆ. ಪ್ರಕರಣದ ಸಂಬಂಧ ಕೋರ್ಟ್ ತನ್ನದೇ ಆದಂತಹ ತೀರ್ಪು ನೀಡುವುದಕ್ಕೂ ಮುನ್ನವೇ ಸಂಬಂಧಪಟ್ಟ ಸರಕಾರ ಅಂತಹ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳಬಹುದು. ಜಗನ್ ತಮ್ಮ ಅಪ್ಪ ವೈಎಸ್ ರಾಜಶೇಖರ ರಡ್ಡಿ ಅವರು ಮುಖ್ಯಮಂತ್ರಿಯಾಗಿದ್ದಾಗ ಅಧಿಕಾರ ದುರುಪಯೋಗ ಪಡಸಿಕೊಂಡು ಸಂಪತ್ತು ಗುಡ್ಡೆ ಹಾಕಿದ್ದಾರೆ ಎಂದು ಸಿಬಿಐ ಆರೋಪಪಟ್ಟಿ ತಿಳಿಸಿದೆ.

ಕೋರ್ಟ್ ಕೇಸು ಪೂರ್ಣವಾಗುವವರೆಗೂ ಜಗನ್ ಆಸ್ತಿ ರಾಜ್ಯ ಸರಕಾರಕ್ಕೆ ಪರಭಾರೆಯಾಗುವುದಕ್ಕೆ ಅನುವು ಮಾಡಿಕೊಡಲು ಸಿಬಿಐ ತನ್ನ ಬಳಿಯಿರುವ ಜಗನ್ ಆಸ್ತಿಪಾಸ್ತಿಯ ಕೂಲಂಕಷ ವರದಿಯನ್ನು ಸರಕಾರಕ್ಕಾಗಿ ಸಿದ್ಧಪಡಿಸುತ್ತಿದೆ. 18 ಅಸೆಂಬ್ಲಿ ಮತ್ತು 1 ಲೋಕಸಭೆ ಉಪ ಚುನಾವಣೆಗಾಗಿ ಅಧಿಸೂಚನೆ ಪ್ರಕಟವಾಗುವುದಕ್ಕೂ ಮುನ್ನವೇ, ಶೀಘ್ರದಲ್ಲೇ ಈ ವಿವರ ಸಲ್ಲಿಕೆಯಾಗುವ ಅಂದಾಜಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+