ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ವೀಟ್ ಮಾಡಿ 86 ಲಕ್ಷ ದಂಡ ಕಟ್ಟಿದ ಪತ್ರಕರ್ತ

By Mahesh
|
Google Oneindia Kannada News

Journalist ordered to pay damages over tweets
ಕೌಲಾಲಂಪುರ, ಏ.29: ಸ್ಥಳೀಯ ಉದ್ಯಮಿ ವಿರುದ್ಧ ಅವಹೇಳನಕಾರಿಯಾಗಿ ಟ್ವೀಟ್‌ ಮಾಡಿದ್ದಕ್ಕಾಗಿ ಭಾರತೀಯ ಮೂಲದ ಪತ್ರಕರ್ತನಿಗೆ ಮಲೇಷ್ಯಾದ ಕೋರ್ಟ್‌ ಭಾರಿ ದಂಡ ವಿಧಿಸಿದೆ.

ಭಾರತೀಯ ಮೂಲದ ಪತ್ರಕರ್ತ ನಾದೇಶ್ವರನ್ ಅವರಿಗೆ 86 ಲಕ್ಷ ರು. ದಂಡ ಕಟ್ಟುವಂತೆ ಜಡ್ಜ್ ಹಾಂಗ್ ಜೂಗ್ ಆದೇಶಿಸಿದ್ದಾರೆ.

ಅವಮಾನಕಾರಿ ಟ್ವೀಟ್‌ ಮಾಡಿದ್ದಕ್ಕಾಗಿ ದಂಡ ಕಟ್ಟುವ ಪ್ರಸಂಗ ಇದೇ ಮೊದಲು ಎನ್ನಲಾಗಿದೆ. ಈತ ಟ್ವೀಟರ್‌ ಖಾತೆಯಲ್ಲಿ 4 ಸಾವಿರ ಫಾಲೋವರ್‌ಗಳನ್ನು ಹೊಂದಿರುವುದರಿಂದ ಏನೇ ಬರೆದರೂ ಸಹಜವಾಗಿಯೇ ಇತರರ ಮೇಲೆ ಪರಿಣಾಮ ಬೀರುತ್ತದೆ ಎಂದು ನ್ಯಾ. ಹಾಂಗ್ ಜೂಗ್ ಅಭಿಪ್ರಾಯಪಟ್ಟಿದ್ದಾರೆ.

'ಸಿಟಿಜನ್ ನಾದೇಶ್' ಎಂದು ಜನಪ್ರಿಯವಾಗಿರುವ ಪತ್ರಕರ್ತ ನಾದೇಶ್ವರನ್ ಈಗ ಮಹಮ್ಮದ್ ಸಲೀಂ ಫತೇ ದಿನ್ ಅವರಿಗೆ RM 300,000 ಹಾಗೂ RM 200,000 ಹಣ ನೀಡಬೇಕಿದೆ.

ಒಟ್ಟು RM 500,000( 86 ಲಕ್ಷ ರು) ನಷ್ಟವನ್ನು ಸಲೀಂಗೆ ತುಂಬಿಸಬೇಕಿದೆ. ಅಲ್ಲದೆ ಇದೆ ತಪ್ಪನ್ನು ಮತ್ತೆ ಮಾಡುವಂತಿಲ್ಲ ಎಂದು ಕೋರ್ಟ್ ಹೇಳಿದೆ.

ಗಪೂರ್ಣ ಸಮೂಹ ಸಂಸ್ಥೆದ ಮೂಲಕ ಸಲೀಂ ರಿಯಲ್ ಎಸ್ಟೇಟ್ ಮನೆ ಮಾರಾಟ ಅಕ್ರಮ ದಂಧೆ ನಡೆಸುತ್ತಿದ್ದಾರೆ ಎಂದು ನಾದೇಶ್ವರನ್ ಟ್ವೀಟ್ ಮಾಡಿದ್ದರು.

English summary
A Malaysian court has ordered a senior ethnic Indian journalist to pay about Rs. 86 lakh in damages to a businessman for defaming him on Twitter. Judge Amelia Tee Hong Geok ordered R Nadeswaran, popularly known as "Citizen Nades"
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X