ಮದ್ಯ ಕುಳಗಳಿಂದ ರಾಜ್ಯಪಾಲ ಭಾರದ್ವಾಜ್ ಗೆ 3 ಕೋಟಿ ಲಂಚ?

ರಾಜೀವ್ ಗಾಂಧೀ ಆರೋಗ್ಯ ವಿಜ್ಞಾನಗಳ ವಿವಿ ಕುಲಾಧಿಪತಿಯೂ ಆಗಿರುವ ರಾಜ್ಯಪಾಲ ಭಾರದ್ವಾಜ್ ಸಿಂಡಿಕೇಟ್ ಸದಸ್ಯರನ್ನು ನೇಮಿಸಲು ಭಾರೀ ಮೊತ್ತದ ಲಂಚ ಪಡೆದಿದ್ದಾರೆ. ಹಾಲಿ ಸಿಂಡಿಕೇಟ್ ಸದಸ್ಯರ ಅವಧಿ ಇನ್ನೂ ಎರಡು ತಿಂಗಳಿದ್ದರೋ ಮದ್ಯ ಕುಳಗಳ ಸಂಬಂಧಿಕರನ್ನು ನೇಮಿಸಲು ಶಿಫಾರಸು ಮಾಡಿದ್ದಾರೆ. ಸಾಂವಿಧಾನಿಕ ಹುದ್ದೆಯಲ್ಲಿದ್ದು ಲಂಚ ಸ್ವೀಕರಿಸಿರುವ ರಾಜ್ಯಪಾಲರನ್ನು ತಕ್ಷಣ ವಜಾಗೊಳಿಸಬೇಕೆಂದು ಎಬಿವಿಪಿ ಆಗ್ರಹಿಸಿದೆ.
ರಾಜ್ಯಪಾಲರು ಶಿಫಾರಸು ಮಾಡಿರುವ ಸದಸ್ಯರಿಂದ ವಿವಿ ಆಡಳಿತ ಏರುಪೇರಾಗಲಿದೆ. ಶೈಕ್ಷಣಿಕ ವ್ಯವಸ್ಥೆಯೂ ಹಾಳಾಗುತ್ತದೆ. ಅಲ್ಲದೇ, ವಿದ್ಯಾರ್ಥಿಗಳ ಭವಿಷ್ಯ ಮಂಕಾಗುತ್ತದೆ. ಕಾನೂನು ಬಾಹಿರವಾಗಿ ನೇಮಕ ಮಾಡುವ ಸಂಬಂಧ ಕಳೆದ ಏಪ್ರಿಲ್ 21ರಂದು ವಿಶ್ವವಿದ್ಯಾಲಯ ಕುಲಪತಿ ಅವರನ್ನು ರಾಜಭವನಕ್ಕೆ ಕರೆಸಿಕೊಂಡು ರಾಜ್ಯಪಾಲರು ನಿರ್ದೇಶನ ನೀಡಿದ್ದಾರೆ ಎಂದು ಎಬಿವಿಪಿ ಟೀಕಿಸಿದೆ.
ರಾಜ್ಯಪಾಲರನ್ನು ಭೇಟಿ ಮಾಡಿದ ಮೂರೇ ದಿನದಲ್ಲಿ ಅವರ ನಿರ್ದೇಶನದ ಮೇರೆ ಪಟ್ಟಿಯನ್ನು ರವಾನಿಸಲಾಗಿದೆ ಎಂದು ಎಬಿವಿಪಿ ರಾಜ್ಯಪಾಲರ ವಿರುದ್ದ ಆರೋಪ ಮಾಡಿದೆ.












Click it and Unblock the Notifications