ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

SSLC: ಶಿಕ್ಷಕ ಶಿವರಾಮು ಹೃದಯಾಘಾತಕ್ಕೆ ಬಲಿ

By Srinath
|
Google Oneindia Kannada News

mandya-teacher-shivram-dead-sslc-valuation
ಮಂಡ್ಯ, ಏ.25: ಪಾಂಡವಪುರ ತಾಲೂಕು ಚಿನಕುರುಳಿ ಸರಕಾರಿ ಪ್ರೌಢಶಾಲೆ ಸಮಾಜ ವಿಜ್ಞಾನ ಶಿಕ್ಷಕ ಶಿವರಾಮು (59) ಅವರು ಉತ್ತರ ಪತ್ರಿಕೆ ವೌಲ್ಯಮಾಪನ ಸಂದರ್ಭದಲ್ಲಿ ತೀವ್ರ ಹೃದಯಾಘಾತದಿಂದ ಮಂಗಳವಾರ ಸಾವನ್ನಪ್ಪಿದ್ದಾರೆ. ಇವರು ಪಾಂಡವಪುರ ಪಟ್ಟಣದ ನಿವಾಸಿ. ಮೃತ ಶಿವರಾಮು ಅವರಿಗೆ ಪತ್ನಿ, ಇಬ್ಬರು ಪುತ್ರರು, ಒಬ್ಬ ಪುತ್ರಿ ಇದ್ದಾರೆ.

ಏಪ್ರಿಲ್ 19ರಂದು ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಬೆಂಗಳೂರಿಗೆ ಆಗಮಿಸಿದ್ದ ಗೌರಿಬಿದನೂರಿನ ಸರಕಾರಿ ಕಾಲೇಜಿನ ಇಂಗ್ಲಿಷ್ ಉಪನ್ಯಾಸಕ ಅಶ್ವತ್ಥ ರೆಡ್ಡಿ (52) ಅವರು ಹೃದಯಾಘಾತದಿಂದ ಅಸುನೀಗಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು. ಆ ಸಂದರ್ಭದಲ್ಲಿ 50 ವರ್ದ ದಾಟಿದವರಿಗೆ ಮೌಲ್ಯಮಾಪನ ಕಾರ್ಯಭಾರ ಕಡ್ಡಾಯಗೊಳಿಸುವುದನ್ನು ನಿಲ್ಲಿಸಬೇಕು ಎಂಬ ಮಾತುಗಳು ಕೇಳಿಬಂದಿದ್ದವು.

ನಗರದ ಲಕ್ಷ್ಮೀ ಜನಾರ್ದನ ಶಾಲೆಯಲ್ಲಿ SSLC ಪರೀಕ್ಷೆಯ ಸಮಾಜ ಉತ್ತರ ಪತ್ರಿಕೆಯನ್ನು ಶಿವರಾಮು ವೌಲ್ಯಮಾಪನ ಮಾಡುತ್ತಿದ್ದಾಗ ಮಧ್ಯಾಹ್ನ 12ರ ಸಮಯದಲ್ಲಿ ಹಠಾತ್ ಹೃದಯಾಘಾತಕ್ಕೊಳಗಾಗಿ ಕುಸಿದು ಬಿದ್ದರು.

ಕೂಡಲೇ ಅವರನ್ನು ಹತ್ತಿರದ ವಿಕ್ರಂ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಶವಪರೀಕ್ಷೆ ನಂತರ ಪಾಂಡವಪುರಕ್ಕೆ ರವಾನಿಸಲಾಯಿತು ಎಂದು ಎಂದು ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಎಚ್.ಬಿ. ನಾಗೇಂದ್ರರಾವ್ ತಿಳಿಸಿದ್ದಾರೆ.

English summary
SSLC Social Studies teacher Shivramu (59) has succumbed to heart attack while he was in Mandya for SSLC valuation at Lakshmi Janardhana School.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X