84ರ ಸಿಖ್ ವಿರೋಧಿ ದಂಗೆ, ಕಾಂಗ್ರೆಸ್ಸಿಗರ ಕೈವಾಡ

ಈ ಘಟನೆ ನಿರ್ದಿಷ್ಟ ಜನಾಂಗವೊಂದನ್ನು ಮಾತ್ರ ಗುರಿ ಇರಿಸಲಾಗಿತ್ತು. ಇದು ಆಕಸ್ಮಿಕ ಘಟನೆಯಲ್ಲ. ಪೊಲೀಸ್ ಹಾಗೂ ವ್ಯವಸ್ಥೆಯ ಬೆಂಬಲದ ಕಾರ್ಯಾಚರಣೆಯಾಗಿತ್ತು ಎಂದು ಸಿಬಿಐ ಹೇಳಿದೆ.
ಪೊಲೀಸರು ಕೂಡ ಪ್ರಕರಣ ದಾಖಲಿಸದಿರುವ ಹಾಗೂ ಬೀದಿಗಳಿಂದ ಮೃತದೇಹಗಳನ್ನು ತೆರವುಗೊಳಿಸದಿದ್ದ ಕಾರಣ ಅವರು ಸಹ ಆರೋಪಿಗಳಾಗಿದ್ದಾರೆಂದು ಸಿಬಿಐ ಆರೋಪಿಸಿದೆ.
ದಿಲ್ಲಿಯ ರಾಜ್‌ನಗರದಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಸಜ್ಜನಕುಮಾರ್ ಮಾಡಿದ್ದ ಭಾಷಣವೊಂದನ್ನು ಉಲ್ಲೇಖಿಸಿದ ತನಿಖೆ ಸಂಸ್ಥೆ, ಅವರು ದಂಗೆಕೋರರಿಗೆ ಪ್ರಚೋದನೆ ನೀಡಿದ್ದರು. ಒಬ್ಬನೇ ಒಬ್ಬ ಸಿಖ್ಖನೂ ಉಳಿಯಬಾರದು. ಸಿಖ್ಖರಿಗೆ ಆಶ್ರಯ ನೀಡಿದವರಿಗೆ ಬೆಂಕಿ ಹಚ್ಚಬೇಕೆಂದು ಅವರು ಪ್ರಚೋದಿಸಿದ್ದರೆಂದು ಆಪಾದಿಸಿದೆ.[ ಹೆಚ್ಚಿನ ಓದಿಗೆ ಕ್ಲಿಕ್ ಮಾಡಿ]
ಪೊಲೀಸರು ರಾಜ್‌ನಗರ ಗುರುದ್ವಾರದ ನಿವಾಸಿಗಳಿಗೆ ತಮ್ಮ ಆಯುಧಗಳನ್ನು ಒಪ್ಪಿಸುವಂತೆ ಆದೇಶಿಸಿದ್ದರು. ದಂಗೆಯ ವೇಳೆ ಸಜ್ಜನ ಕುಮಾರ್ ಬೀದಿ ಬೀದಿ ತಿರುಗಿ ಉದ್ರಿಕ್ತರಿಗೆ ಪ್ರಚೋದನೆ ನೀಡುತ್ತಿದ್ದರೆಂಬುದು ಪ್ರತ್ಯಕ್ಷ ಸಾಕ್ಷಿಗಳಿಂದ ದೃಢಪಟ್ಟಿದೆ. 1984ರ ಸಿಖ್ ವಿರೋಧಿ ದಂಗೆಯ ವೇಳೆ ಪೊಲೀಸರು ಪೂರ್ವಯೋಜಿತ ರೀತಿಯಲ್ಲಿ ವರ್ತಿಸಿದ್ದರು.
ಎಂದು ಸಿಬಿಐ ಪರ ವಕೀಲ ಆರ್ ಎಸ್ ಚೀಮಾ ಹೆಚ್ಚುವರಿ ಸತ್ರ ನ್ಯಾ. ಜೆ ಆರ್ ಆರ್ಯನ್‌ರ ಮುಂದೆ ವಾದಿಸಿದರು. ದಂಗೆಯ ಕುರಿತಾಗಿ ಸುಮಾರು 150 ದೂರುಗಳನ್ನು ನೀಡಲಾಗಿತ್ತು. ಆದರೆ, ಪೊಲೀಸರು ಕೇವಲ 5 ಎಫ್‌ಐಆರ್ ಮಾತ್ರ ದಾಖಲಾಗಿದೆ.












Click it and Unblock the Notifications