ವಿರೋಧಿಗಳು ನನಗೆ ಶರಣಾಗುತ್ತಾರೆ: ಯಡಿಯೂರಪ್ಪ

5 ವರ್ಷ ಅಧಿಕಾರವನ್ನು ಮಾಡಲು ಬಿಡದೆ ನನ್ನ ವಿರುದ್ಧ ಗೆಲುವು ಸಾಧಿಸಿದೆ ಎಂದು ವಿರೋಧಿಗಳು ಖುಷಿ ಪಡುವ ಕಾಲ ಸದ್ಯದಲ್ಲೇ ಕೊನೆಗೊಳ್ಳಲಿದೆ. ನಾನು ಯಾರ ಮನೆ ಬಾಗಿಲಿಗೆ ಹೋಗುವುದಿಲ್ಲ. ನನ್ನ ವಿರೋಧಿಗಳು ಅಚ್ಚರಿ ಪಡುವಂತೆ ನಾನು ಸಂಪೂರ್ಣವಾಗಿ ಬದಲಾಗುತ್ತೇನೆ ಎಂದು ಯಡಿಯೂರಪ್ಪ ಹೇಳಿದ್ದಾರೆ.
ನಾನು ಒಂದು ಹೆಜ್ಜೆ ಮುಂದಿಟ್ಟರೆ, ವಿರೋಧಿಗಳು ನಾಲ್ಕು ಹೆಜ್ಜೆ ನನ್ನ ಕಾಲುಗಳನ್ನು ಕಟ್ಟಿಹಾಕಲು ಯತ್ನಿಸಿದರು. ಎಲ್ಲಾ ಕ್ಷೇತ್ರಗಳಲ್ಲೂ ಕರ್ನಾಟಕವನ್ನು ನಂ.1 ಸ್ಥಾನಕ್ಕೇರಿಸಬೇಕೆಂಬ ನನ್ನ ಯೋಜನೆಗೆ ಅವಕಾಶ ಸಿಗಲಿಲ್ಲ. ಶ್ರೀಗಳ ಹಾಗೂ ಜನತೆ ಆಶೀರ್ವಾದ ಇದ್ದರೆ ನಾಡಿನ ಸೇವೆ ಸಲ್ಲಿಸುವ ಸೌಭಾಗ್ಯ ಮತ್ತೆ ಸಿಗುತ್ತದೆ ಎಂದರು.
ಮೂಡಲ ಪಾಳ್ಯದಲ್ಲಿ ಬಸವೇಶ್ವರ ಸೇವಾ ಸಮಿತಿ ಹಮ್ಮಿಕೊಂಡಿದ್ದ ಶತಾಯುಷಿ ಡಾ. ಶಿವಕುಮಾರ ಸ್ವಾಮೀಜಿ ಅವರ 105ನೇ ಗುರುವಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಡಿಯೂರಪ್ಪ ಮಾತನಾಡಿದರು.
ಯಾವುದೇ ಪಕ್ಷ, ಯಾರ ಹೆಸರು ಹೇಳದೆ ವಿರೋಧಿಗಳಿಗೆ ಯಡಿಯೂರಪ್ಪ ಎಚ್ಚರಿಕೆ ನೀಡಿದರು. ಕಾಂಗ್ರೆಸ್ ಪಕ್ಷ ಸೇರುವ ಊಹಾಪೋಹ ಸುದ್ದಿಯನ್ನು ಅಲ್ಲಗೆಳೆದರು.












Click it and Unblock the Notifications