ಪಾಕ್ ಪತ್ರಿಕೆ ಡಾನ್ ಪತ್ರಕರ್ತನ ಭೀಕರ ಹತ್ಯೆ
ಕರಾಚಿ,
ಏ.20: ಪಾಕಿಸ್ತಾನದ ಪ್ರಸಿದ್ದ ದಿನಪತ್ರಿಕೆ 'ಡಾನ್'ನ ಹಿರಿಯ ಸಹಾಯಕ ಸಂಪಾದಕ ಮುರ್ತಝ ರಜ್ವಿ (47) ಅವರನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. id="toptextpromo">ಡಾನ್
ಮ್ಯಾಗಜೀನ್ ವಿಭಾಗದ ಮುಖ್ಯಸ್ಥರಾಗಿದ್ದ ರಜ್ವಿ ಅವರ ಕೈಕಾಲುಗಳನ್ನು ಕಟ್ಟಿ, ಚಿತ್ರಹಿಂಸೆ ನೀಡಿ ಗುರುವಾರ ಬೆಳಗ್ಗೆ ಹತ್ಯೆ ಮಾಡಲಾಗಿದೆ. ರಜ್ವಿ ದೇಹ ಅವರ ಗೆಳೆಯ, ಚಿತ್ರಕಾರ ಶಹೀದ್ ರಸ್ಸಂ ಅವರ ಸ್ಟುಡಿಯೋದಲ್ಲಿ ಪತ್ತೆಯಾಗಿದೆ. ಹತ್ಯೆಗೆ ಕಾರಣವೇನೆಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಪ್ರಕರಣದಲ್ಲಿ ಪೊಲೀಸರು ಯಾರನ್ನೂ ಬಂಧಿಸಿಲ್ಲ. id='are-slot-1' class='oiad oi-axt oiadv'> id='top-searched-articles'>ಸ್ವತಃ
ರಜ್ವಿ ಅವರೇ ರಸ್ಸಂ ಅವರಿಂದ ಸ್ಟುಡಿಯೋದ ಬೀಗಕೈಯನ್ನು ಕೇಳಿ ಪಡೆದಿದ್ದರು. ಗುರುವಾರ ಬೆಳಗ್ಗೆ ರಜ್ವಿ ಮೊಬೈಲಿಗೆ ಕರೆ ಮಾಡಿದಾಗ ಸ್ವಿಚ್ ಆಫ್ ಆಗಿತ್ತು. ಪತ್ರಿಕಾ ಕಚೇರಿಯನ್ನು ಸಂಪರ್ಕಿಸಿದರೆ ಅಲ್ಲೂ ರಜ್ವಿ ಇರಲಿಲ್ಲ ಎಂದು ರಸ್ಸಂ ಪೊಲೀಸರಿಗೆ ತಿಳಿಸಿದ್ದಾರೆ. ರಜ್ವಿ ಪತ್ನಿ ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ. ರಜ್ವಿ ಅಂತ್ಯಕ್ರಿಯೆ ಶುಕ್ರವಾರ ನೆರವೇರಲಿದೆ. [ಹತ್ಯೆಯಾದ ರಜ್ವಿಗೆ ಡಾನ್ ಸಹೋದ್ಯೋಗಿಗಳ ಶ್ರದ್ಧಾಂಜಲಿ]











Click it and Unblock the Notifications