ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

KSRTC ಬಸ್ಸಿನಲ್ಲಿ ಇನ್ನು ಸಕಲ ಸೇವಾಭಾಗ್ಯ

By Srinath
|
Google Oneindia Kannada News

ಬೆಂಗಳೂರು, ಏ.20: ಇನ್ನು ಮುಂದೆ KSRTC ಬಸ್ಸಿನಲ್ಲಿ ಸಕಲ ಸೇವೆ ಪ್ರಾಪ್ತಿಯಾಗಲಿದೆ. ಇದೀಗ ಅಡುಗೆ ಮನೆ, ಶೌಚಾಲಯ ಸೌಲಭ್ಯವೂ ಬಸ್ಸಿನಲ್ಲಿ ಲಭ್ಯ. ಅಂದರೆ ಶಯ್ಯಾಗೃಹವೊಂದನ್ನು ಬಿಟ್ಟು ಮತ್ತೆಲ್ಲ ಸೇವೆಗಳು ಪ್ರಯಾಣಿಕರಿಗೆ ಬಸ್ಸಿನಲ್ಲಿ ಸಿಗಲಿವೆ. ಸುಮಾರು 80 ಲಕ್ಷ ರೂ. ಬೆಲೆಯ ಈ ಬಸ್‌ ಮೇ 1ರಿಂದ ಪ್ರಾಯೋಗಿಕವಾಗಿ ರಸ್ತೆಗಿಳಿಯಲಿದೆ.

ದೂರದ ಪ್ರದೇಶಗಳಿಗೆ ಪ್ರಯಾಣ ಮಾಡುವವರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಇಂಥದೊಂದು ಬಸ್ ಸೌಲಭ್ಯವನ್ನು ರಾಜ್ಯಕ್ಕೆ ಪರಿಚಯಿಸಲಾಗುತ್ತಿದೆ. ಈ ಸೇವೆಗಳು ಇದುವರೆಗೆ ರೈಲು, ವಿಮಾನ, ಹಡಗುಗಳಲ್ಲಿ ಮಾತ್ರವೇ ಸಿಗುತ್ತಿತ್ತು. ಇನ್ನು ಕಾಫಿ, ಚಹಾ, ಹಾಲು, ಸಂಸ್ಕರಿತ ಆಹಾರ ಪ್ರಯಾಣಿಕರಿಗೆ ಕಡಿಮೆ ಬೆಲೆಯಲ್ಲಿ ಲಭ್ಯವಾಗಲಿದೆ. ಈ ಬಸ್‌ಗಳಲ್ಲಿ ಆಧುನಿಕ ಶೌಚಾಲಯ ಅಳವಡಿಸಲಾಗುವುದು ಎಂದು ಸಾರಿಗೆ ಸಚಿವ ಆರ್. ಅಶೋಕ್ ಗುರುವಾರ ತಿಳಿಸಿದ್ದಾರೆ.

'ಆರಂಭದಲ್ಲಿ ಒಂದು ಬಸ್ ಸಂಚರಿಸಲಿದೆ. ಪ್ರಯಾಣಿಕರ ಸ್ಪಂದನೆ ಗಮನಿಸಿ, ಮುಂದಿನ ದಿನಗಳಲ್ಲಿ ಈ ಮಾದರಿಯ ಒಟ್ಟು 25 ಬಸ್ ಖರೀದಿಸುವ ಇರಾದೆಯಿದೆ. ಸಾರಿಗೆ ಸಂಸ್ಥೆಯ 'ಸ್ಲೀಪರ್ ಕೋಚ್' ಬಸ್ಸುಗಳಿಗೆ ಉತ್ತಮ ಸ್ಪಂದನೆ ದೊರೆಯುತ್ತಿದೆ. ಹಾಗಾಗಿ ಇನ್ನೂ 50 ಸ್ಲೀಪರ್ ಕೋಚ್ ಬಸ್ಸುಗಳನ್ನೂ ಖರೀದಿ ಮಾಡಲಾಗುವುದು. ತುಮಕೂರು, ಮೈಸೂರು, ಹುಬ್ಬಳ್ಳಿ-ಧಾರವಾಡದಲ್ಲಿ ಯಶಸ್ವಿಯಾಗಿ ಕಾರ್ಯಾಚರಿಸುತ್ತಿರುವ ಸಿಟಿ ಬಸ್ ಸೌಕರ್ಯವನ್ನು ಗುಲ್ಬರ್ಗ ನಗರದಲ್ಲೂ ಶೀಘ್ರ ಆರಂಭಿಸಲಾಗುವುದು' ಎಂದು ಅಶೋಕ ಹೇಳಿದರು.

ದೇಶದ ಯಾವುದೇ ರಾಜ್ಯಗಳ ಇಂತಹ ಹೈಟೆಕ್‌ ಸೌಲಭ್ಯಗಳಿರುವ ಸರ್ಕಾರಿ ಬಸ್‌ಗಳು ಇಲ್ಲ. ಹೀಗಾಗಿ, ಕರ್ನಾಟಕ ಈ ರೀತಿಯ ಐಷಾರಾಮಿ ಸೌಲಭ್ಯ ಹೊಂದಿರುವ ಬಸ್‌ಗಳನ್ನು ರಸ್ತೆಗಳಿಸುವಲ್ಲಿ ಮೊದಲ ರಾಜ್ಯವಾಗಲಿದೆ

English summary
The Karnataka State Road Transport Corporation (KSRTC) is set to introduce buses with built-in pantry and toilet facilities for passengers says Home and Transport Minister R Ashok.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X