ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಫಿ ಸಿಇಓ ಶಿಬು ಮಾಮಾನಿಗೆ ಬಹಿರಂಗ ಪತ್ರ

By * ಪಕ್ಷಿರಾಜ ಟೊಂಕಬಾಜ, ಬೆಂಗಳೂರು
|
Google Oneindia Kannada News

S.D. Shibulal, Infosys CEO
ಪ್ರೀತಿಯ ಶಿಬು ಮಾಮ,

ಅದೇನ್ ಮಾಮ ಹಿಂಗೆ ಮಾಡ್ಬಿಟ್ಟೆ? ಏನೇನೋ ಅಸೆ ಮಾಡ್ಕೊಂಡಿದ್ದೆ, ಇನ್ಕ್ರಿಮೆಂಟ್ ಇಲ್ಲ ಮತ್ತೆ ಪ್ರೊಮೋಷನ್ ಸದ್ಯಕ್ ಇಲ್ಲ ಅಂತ ಹೇಳಿ ಎಲ್ಲಾ ಆಸೆಗೆ ತಣ್ಣೀರು ಎರಚಿಬಿಟ್ಟೆ! ಅಲ್ಲಾ... ನಿನ್ನ ಕಂಪನಿಗೆ ಲಾಸ್ ಏನೂ ಆಗಿಲ್ಲ, ಲಾಭ ಕಮ್ಮಿ ಆಗಿದೆ ಅಷ್ಟೇಯಾ! ಅಲ್ಲಾ ಈ ಕ್ವಾರ್ಟರ್ ಲಾಭ ಎಷ್ಟು ಅಂತೀನಿ? 2316 ಕೋಟಿ, ಕಳೆದ ವರ್ಷಕ್ಕೆ ಹೋಲಿಸಿದರೆ 27.4% ಜಾಸ್ತಿ ಮುಂದಿನ ವರ್ಷನೂ 8-10% ಬೆಳಿತೈತೆ ಅಂತ ಬೇರೆ ಹೇಳಿದ್ದಿಯ... ಇಷ್ಟೆಲ್ಲಾ ಆದ್ರು ಎಂಪ್ಲಾಯಿಸ್-ಗೆ ಇನ್ಕ್ರಿಮೆಂಟ್ ಇಲ್ಲ ಅಂತ ಕೈ ಎತ್ತಿಬಿಟ್ರೆ ಹೆಂಗೆ, ಮಾಮ?

ಕಳೆದ ಒಂದು ವರ್ಷದಲ್ಲಿ ಪೆಟ್ರೋಲ್ ಬೆಲೆ, ಸಾಲದ್ದು ಬಡ್ಡಿ ದರ ಎಷ್ಟು ಸಲ ಜಾಸ್ತಿ ಆಯ್ತು, ಅಂತ ನಿಂಗೆ ಗೊತ್ತಾ ಮಾಮ? ಹೋಗ್ಲಿ ಅಕ್ಕಿ ಬೇಳೆ ಬೆಲೆ... ಅದು ಹಾಳಾಗ್ಲಿ ನಮ್ಮ ದೇಶದ್ದು ಇನ್‌ಫ್ಲೇಶನ್ ಎಷ್ಟು ಅಂತ ನಿಮ್ಗೆ ಗೊತ್ತಾ, ಮಾಮ?

ಅಲ್ಲ ಮಾಮ, ಶೇರ್ ಹೊಲ್ಡರ್ಸ್-ಗೆ ಪ್ರತಿ ಶೇರ್-ಗೆ ರೂ.10 ಡಿವಿಡೆಂಡ್ ಕೊಡಕ್ಕೆ ದುಡ್ಡು ಐತೆ... ನಮಗೆ ಇಲ್ವ್ರ? ಅದೇ ಶೇರ್ ಹೋಲ್ಡರ್ಸ್ ಅಂದ್ರೆ ಯಾರು ಅಂತೀನಿ? ಅದೇ ಎಂಕ, ಸೀನ, ನಾಣಿ ಅಂತ ನೀವು ನೀವೇ ಅಲ್ವ್ರ? ಆ ಕಡೆ ಬಾಂಬೆ ಸೇಟುಗಳು, ಅಲ್ಪ ಸ್ವಲ್ಪ ಹಳೆ ಎಂಪ್ಲಾಯಿಸ್ ಅಷ್ಟೆಯಾ... ನಿಮ್ಮದು ನೀವು ಚೆನ್ನಾಗಿ ನೋಡ್ಕಂತಿರ... ನಮ್ಮನ್ ನೋಡರ್ ಯಾರು, ಮಾಮ? ಮಳೆಗಾಲಕ್ಕೆ, ಕಷ್ಟಕ್ಕೆ ಇರ್ಲಿ ಅಂತ ಎಷ್ಟೂ ಸಾವಿರ ಕೋಟಿ ಬ್ಯಾಂಕಲ್ಲಿ ಭದ್ರವಾಗಿ ಎತ್ತಿ ಇಟ್ಟಿದ್ದಿರಾ? ಕಷ್ಟಕ್ಕೆ ಅಂದ್ರೆ ಯಾರ ಕಷ್ಟಕ್ಕೆ? ಎಂಪ್ಲಾಯಿಸ್ ಕಷ್ಟ ನಿಮ್ಮ ಕಷ್ಟ ಅಲ್ವ್ರ?

ಅಲ್ಲಾ, ತೆಲುಗಲ್ಲಿ ಒಂದು ಮಾತ್ ಐತೆ 'ಎಲ್ಲಾದ್ರೂ ಮಾಮ ಅನ್ನು... ಮಾವಿನ ತೊಟ್ದಾಕೆ ಮಾತ್ರ ಮಾಮ ಅನ್ನಬೇಡ!' ಯಾಕೆಂದ್ರೆ ಆ ಮಾತಿಗೆ, ಪೀರುತಿಗೆ, ಸಂಬಂಧಕ್ಕೆ ಕಟ್ಟುಬಿದ್ದು ಮಾವಿನಕಾಯಿ ಕೊಡ ಬೇಕಾಗುತ್ತೆ ನೋಡು... ಇಷ್ಟು ದಿನ ಸುಮ್ಕಿದ್ದು ಇನ್ಕ್ರಿಮೆಂಟ್ ಟೈಮಲ್ಲಿ ಮಾತ್ರ ಕಷ್ಟ ಕಷ್ಟ ಅಂತ ಮುಲುಕುತಿದ್ದಿಯಾ... ಅಲ್ಲಾ ಆ ಗಂಟು ಮುಸುಡಿ ಯಾಕೆ ಅಂತೀನಿ?! ಎಲ್ಲಿ ನಕ್ಕರೆ ದುಡ್ಡು ಬಿಚ್ಚ ಬೇಕಾಯಿತದೆ ಅಂತನಾ... ಅಲ್ಲಾ ಅಷ್ಟು ಜಾಣ ಅಂತ ಅಲ್ಲಿ ಕುಡ್ಸವ್ರೆ... ನೀನು ಕ್ವಾರ್ಟರ್ ಮಧ್ಯೇನೆ ರಿವ್ಯೂ ಮಾಡಿ ಎಲ್ಲಾ ಸಂಬಂಧ ಪಟ್ಟವರನ್ನ ಯಾಕೆ ಬೆಂಡು ಎತ್ತಲಿಲ್ಲಾ ನೀನೂ?

ನೀನು ಬಲೆ ಕಿಲಾಡಿ ಮಾಮ! ಲಾಭ ಕಮ್ಮಿ ಆಗಿದ್ದಕ್ಕೆ ಮಾರುಕಟ್ಟೆ ವಾತಾವರಣ ಕಾರಣ ಅಂತಿಯ... ಆದ್ರೆ ಬರೆ ಮಾತ್ರ ಎಂಪ್ಲಾಯಿಸ್-ಗೆ ಹಾಕಿದೀಯ... ಹಂಗ್ ಮಾಡಿ ಕಂಪನಿ ಮ್ಯಾನೇಜ್ಮೆಂಟ್ ಎಮ್ಮೆ ಅಂತ ಪ್ರೂವ್ ಮಾಡಿಬಿಟ್ಟೆ ನೋಡು ಮತ್ತೆ... ನೀವು ಕ್ಯಾಪ್ಟನ್ ಆಫ್ ದಿ ಕಂಪನಿ ಅಲ್ವ್ರ... ನೀವು ಇನ್ನೂ ವಸಿ ಹೆಚ್ಚು ಜವಾಬ್ಧಾರಿ ಹೊತ್ಕುರೀ ಮಾಮ...

ಅಲ್ಲ ಮಾಮ, ಗೊತ್ತಿಲ್ಲದೇ ಕೇಳ್ತೀನಿ... ಮುಂದಿನ ವರ್ಷ ಯಾಪಾರ ಕಮ್ಮಿ ಅಂತಿಯ ಆದ್ರೆ 35 ಸಾವಿರ ಜನ ರೆಕ್ರುಟ್ ಮಾಡ್ತೀನಿ ಅಂತಿಯ... ಅದ್ ಹೆಂಗೆ? ಯಾಕೋ ನೀನು ಪಿಸಿ ಸರ್ಕಾರ್ ಥರ ಮ್ಯಾಜಿಷಿಯನ್ ಮಾಡ್ತೀಯಾ ಬಿಡು.

ಅವತ್ತು ಸಿ.ಇ.ಓ ಆದಾಗ ಸಂತೋಷದಿಂದ ನಿನ್ನ ಕಣ್ಣಲ್ಲಿ ಬಳ ಬಳ ಅಂತ ನೀರು ಬಂದಿತ್ತು... ನಿನ್ನ ನಾಣಪ್ಪ.. ಮತ್ತೆ ನೀನೂ ಆವಯ್ಯನ ಹೊಗಳಿದ್ದೇ ಹೊಗಳಿದ್ದು... ನಿನ್ನ ನಂಬಿದ್ದಕ್ಕೆ ಇವತ್ತು ನಮ್ಗೂ ಕಪಾಳಕ್ಕೆ ಕಣ್ಣೀರು ಇಳಿತು ಬಿಡು ಮತ್ತೆ...

ಆ ನಾಣಪ್ಪನ, ನಂದನಪ್ಪನ ಕಾಲ್ದಾಗೆ ಬೇಷಿತ್ತು ಬಿಡು... ಆ ಯಪ್ಪಾ, ಆ ವಯ್ಯ ಎಂದು ಎಂಪ್ಲಾಯಿಸ್ ಹಗುರ ಕಾಣಲಿಲ್ಲ, ಮೋಸ ಮಾಡಲಿಲ್ಲ... ನೀನೂ ಮತ್ತೆ ಆ ಕಿಸ್ನಪ್ಪ ಏನ್ ಅಂದ್ರು ಅಷ್ಟಕ್ ಅಷ್ಟೇಯಾ... ಯಾವುದಕ್ಕೂ ಹುಷಾರು ಮಾಮ, ಬಿಜಿ ಶ್ರೀನಿ, ಆ ಅಶೋಕ ಕಾದು ಕುಂತವರೆ... ನೀನು ಸ್ವಲ್ಪ ಯಾಮಾರಿದ್ರು ಕುರ್ಚಿ ಕಿತ್ಕೊಂಡು ಬಿಡ್ತಾರಷ್ಟೆಯಾ...

ಏನಾದ್ರೂ ಹಾಳಾಗಿ ಹೋಗ್ಲಿ... ಇದೇ ಬೇಜಾರಲ್ಲಿ ಇವತ್ತು ರಾತ್ರಿ ನೈಂಟಿ ಹೊಡ್ದು ಮಲ್ಕೊಂತೀನಿ... ನಾಳೆ ಬೇರೆ ಬೇಗ ಏಳಬೇಕು... ಯಾಕಂದ್ರೆ ನಾಳೆ ಜಾಸ್ತಿ ಕೆಲಸ... ಪರ್ಸನಲ್ ಕೆಲಸ ಏನಲ್ಲಾ ನಿನ್ನ ಕಂಪನಿದೆಯಾ... ತಿಳ್ಕ!

ಮಾಮ, ಮಾಮ ವಸಿ ಮಲಯಾಳಿ ಮಂತ್ರ ಕಲ್ತು (ಎಟ್ ಅಂದ್ರು ನೀವು ಆ ಕಡೆಯೋರ್ ಅಲ್ವ್ರ) ಮುಂದಿನ ಕ್ವಾರ್ಟರ್ ಅದ್ರು ಏನಾದ್ರೂ ಮಾಜಿಕ್ ಮಾಡು ಮಾಮ!?

ಇಂತಿ ನಿನ್ನ ಪೀರುತಿಯ,
ನೊಂದ ನಾಣಿ, ಸಾಫ್ಟ್ವೇರ್ ಮಾಣಿ, ಇನ್ಫಾರ್ಮೇಶನ್ ಇಂದ್ರ, ಬಿ.ಪಿ.ಓ ಭಾಗ್ಯ ಮತ್ತು ಸಹ ಕೆಲಸಗಾರರು
(ಎಲ್ರೂ ಎಲ್ಡ್ ಎಲ್ಡ್ ಸಲ ಹೆಬ್ಬೆಟ್ಟು ಒತ್ತವ್ರೆ)

English summary
A couple of infoseans together review companys policy decision curbing increment and promotions to Infosys employees for the financial year 2012-13. The company has 1.30 lakh employees all over the world. Compared to last year, Infy has posted Rs 2316 Crore in profits, a jump of 27.4%. Also the management predicts healthy 8-10 growth. Further the company has declared Rs 10 dividend to share holders. Its only the employees who are denied their due share. So, whats the problem? where the buck has stopped, Mr Shibulalji?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X