ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋಡಿಮಠ ಸ್ವಾಮೀಜಿ ನುಡಿದರು ಭಯಂಕರ ಭವಿಷ್ಯವಾ

By Srinath
|
Google Oneindia Kannada News

kodimutt-seer-predicts-terrifying-future-gadag
ಕುಕನೂರು (ಗದಗ), ಏ.17: ಕೋಡಿಮಠ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಸೋಮವಾರ ಮತ್ತೆ ಭವಿಷ್ಯ ಹೇಳಿದ್ದಾರೆ. ಮೊನ್ನೆ ಭೂಕಂಪವಾಗುವ ಹಿಂದಿನ ದಿನವಷ್ಟೇ (ಏಪ್ರಿಲ್ 10) ಭವಿಷ್ಯ ನುಡಿದು ಭೂಕಂಪ ಆಗಲಿದೆ ಎಂದಿದ್ದರು. ಈಗ ಅದಕ್ಕಿಂತ ಭಯಾನಕ ಭವಿಷ್ಯತ್ತನ್ನು ಅವರು ಕಂಡಿದ್ದಾರೆ.

ಭೀಕರ ರೈಲು ಅಪಘಾತ: ಈ ವರ್ಷ ದೇಶದಲ್ಲಿ ಮಳೆ ಆಗುತ್ತಿದೆಯಾದರೂ ಎಲ್ಲೆಡೆ ಆಗುವುದು ಕಡಿಮೆ, ಸುರಿದಲ್ಲೇ ಮತ್ತೆ ಸುರಿಯುತ್ತದೆ, ರೈತರು ಕಷ್ಟಪಟ್ಟು ದುಡಿದರೆ ಮಾತ್ರ ಬೆಳೆ ಬರುತ್ತದೆ. ಜಗತ್ತಿನ ದೊಡ್ಡ ನಗರಗಳಲ್ಲಿ ಆಕಸ್ಮಿಕ ಅಗ್ನಿ ಅನಾಹುತಗಳು ಸಂಭವಿಸಬಹುದು. ಭಾರಿ ಪ್ರಮಾಣದ ರೈಲು ಅಪಘಾತದಿಂದ ನೂರಾರು ಜನರು ಪ್ರಾಣ ಕಳೆದುಕೊಳ್ಳಬಹುದು.

ಇದು ಉಗ್ರರ ಅಟ್ಟಹಾಸದಿಂದ, ಭೂಕಂಪನದಿಂದ ಯಾವುದಾದರಿಂದಲೂ ಆಗಬಹುದು ಎಂದು ಅವರು ತಿಳಿಸಿದ್ದಾರೆ. ಸೋಮವಾರ ನಗರದಲ್ಲಿ ಮೃತ್ಯುಂಜಯ ಸಂಕೇಶ್ವರ ಎಂಬ ಭಕ್ತರೊಬ್ಬರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಗೌಡರಿಗೆ ಮಾತ್ರ ಒಳ್ಳೆ ಯೋಗ, ಇತರರಿಗೆ ಜೈಲು ಮಾರ್ಗ:
'ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರಿಗೆ ಬಹಳಷ್ಟು ವಿರೋಧ ವ್ಯಕ್ತವಾಗುತ್ತದೆ. ಆದರೂ 2013ರ ವರೆಗೆ ಅವರಿಗೆ ಒಳ್ಳೆಯ ಯೋಗವಿದೆ' ಎಂದು ಸ್ವಾಮೀಜಿ ನುಡಿದಿದ್ದಾರೆ.

ಆದರೆ ಇತರೆ ಜನನಾಯಕರಿಗೆ ಆತಂಕ ತರುವ ವಿಷಯವೆಂದರೆ 'ಮತ್ತಷ್ಟು ರಾಜಕೀಯ ಮುಖಂಡರು ಜೈಲಿಗೆ ಹೋಗಲಿದ್ದಾರೆ' ಎಂದೂ ಕೋಡಿಮಠ ಮಹಾಸ್ವಾಮೀಜಿ ಭಯದ ಮಡುವಿಗೆ ತಳ್ಳಿದ್ದಾರೆ.

ದಿನಾ 2 ನಿಮಿಷ ಪ್ರಾರ್ಥನೆ: ಪ್ರಾಕೃತಿಕ ವಿಕೋಪ ಹೆಚ್ಚಳಕ್ಕೆ ಮನುಷ್ಯ ದೈವಿ ಶಕ್ತಿ, ಭಕ್ತಿ ಮರೆತು ಸಾಗುತ್ತಿರುವುದೇ ಕಾರಣ. ಪೂಜೆ, ಪುನಸ್ಕಾರ, ದೇವರ ಧ್ಯಾನ ಎಲ್ಲವೂ ಆಡಂಬರ, ಯಾಂತ್ರಿಕವಾಗಿವೆ. ಗುರು-ಗುರಿಯ ಸ್ಪಷ್ಟತೆ ನಾಡನಾಳುವವರಿಗೂ ಇಲ್ಲ, ನಾಡವರಿಗೂ ಇಲ್ಲ. ಎಲ್ಲ ಸಮಸ್ಯೆಗಳಿಗೆ ಪರಿಹಾರ ಇದೆ ನಿಜ. ಈ ಭೂಮಿ ಆಕಾಶ ನೀರು ಕರುಣಿಸಿದ ದೇವನೊಬ್ಬನಿಂದ ಇದು ಸಾಧ್ಯ. ಆದ್ದರಿಂದ ಎಲ್ಲರೂ ಈ ಭೂಮಿ, ದೇಶ, ನೆಲ-ಜಲ ಜೀವಸಂಕುಲ ರಕ್ಷಣೆಗೆ ಭಗವಂತನಲ್ಲಿ ಪ್ರತಿನಿತ್ಯ 2 ನಿಮಿಷವಾದರೂ ಪ್ರಾರ್ಥನೆ ಮಾಡಬೇಕು ಇದರಿಂದ ಒಳಿತನ್ನು ಕಾಣಬಹುದಾಗಿದೆ ಎಂದು ಸ್ವಾಮೀಜಿ ನುಡಿದರು.

English summary
The Kodimutt Seer Shivananda Rajendra Swamiji on April 16 at Gadag has predicted terrifying future for the world as whole. There will be huge fire rain, earth quake, rail accidents.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X