ಕುಮಾರಸ್ವಾಮಿಗೆ ಇಂದು ಏನು ಕಾದಿದೆಯೋ...?

denotification-if-no-bail-in-hc-hdk-may-be-arrest
ಬೆಂಗಳೂರು, ಏ.17: 'ಅರ್ಕಾವತಿ ಬಡಾವಣೆಯ ಬಿಡಿಎ ನಿವೇಶನಗಳ ಅಕ್ರಮ ಡಿನೋಟಿಫಿಕೇಶನ್ ಪ್ರಕರಣದಲ್ಲಿ ಕುಮಾರಸ್ವಾಮಿ ಅಕ್ರಮ ಸಾಬೀತಾಗಿದೆ' ಎಂದು ಅತ್ತ ಲೋಕಾಯುಕ್ತ ಪೊಲೀಸರು ಸೋಮವಾರ ಚಾರ್ಜ್ ಷೀಟ್ ಸಲ್ಲಿಸುತ್ತಿದ್ದಂತೆ ಇತ್ತ ಬಂಧನದ ಭೀತಿಗೊಳಗಾದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಕ್ಷಣ ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟಿಗೆ ಅರ್ಜಿ ಹಾಕಿಕೊಂಡಿದ್ದಾರೆ.

ಇದು ಇಂದು ವಿಚಾರಣೆಗೆ ( ಮಂಗಳವಾರ) ಬರಲಿದೆ. ಪ್ರಕರಣದಲ್ಲಿ A1ಆಗಿರುವ ಜಾಮೀನು ಸಿಗದಿದ್ದರೆ ಕುಮಾರಸ್ವಾಮಿಗೆ ಭಾರಿ ಹಿನ್ನಡೆಯಾಗಲಿದೆ. ಇನ್ನು, A2 ಮಾಜಿ ಸಚಿವ ಚನ್ನಿಗಪ್ಪ ಅವರಿಗೂ ಸಂಕಷ್ಟ ಎದುರಾಗಲಿದೆ.

ಅಗತ್ಯಬಿದ್ದಲ್ಲಿ ಸ್ವತಃ ಲೋಕಾಯುಕ್ತ ಪೊಲೀಸರು ಬಂಧಿಸಬಹುದು ಅಥವಾ ಲೋಕಾಯುಕ್ತ ಕೋರ್ಟ್ ಕುಮಾರಸ್ವಾಮಿ ಬಂಧನಕ್ಕೆ ಆದೇಶಿಸಬಹುದು. ಗಮನಾರ್ಹವೆಂದರೆ 'ಅಕ್ರಮ ಸಾಬೀತಾಗಿದೆ' ಎಂದು ಆರೋಪಪಟ್ಟಿ ದಾಖಲಿಸಿರುವುದು ಸ್ಪಷ್ಟವಾಗಿರುವಾಗ ಹೈಕೋರ್ಟ್ ಸಹ ಜಾಮೀನು ನೀಡಲು ಮುಂದಾಗುವುದಿಲ್ಲ.

ಥಣಿಸಂದ್ರ ಗ್ರಾಮದಲ್ಲಿನ 3.08 ಎಕರೆ ಭೂಮಿಯನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟ ಪ್ರಕರಣದಲ್ಲಿ ಕುಮಾರಸ್ವಾಮಿ ಸಿಲುಕಿದ್ದಾರೆ. ಪ್ರಕರಣದಲ್ಲಿ ಅವರ ವಿರುದ್ಧ ಲೋಕಾಯುಕ್ತ ಪೊಲೀಸರು ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸುತ್ತಿದ್ದಂತೆ ತಮ್ಮನ್ನು ಪೊಲೀಸರು ಬಂಧಿಸಬಹುದು ಎಂಬ ಭಯದಿಂದ ಅವರು ಹೈಕೋರ್ಟ್ ಮೊರೆ ಹೋಗಿದ್ದಾರೆ. ಪೊಲೀಸರು ತಮ್ಮನ್ನು ಬಂಧಿಸದಂತೆ ಆದೇಶಿಸಬೇಕು ಎಂದು ಅವರು ಅರ್ಜಿಯಲ್ಲಿ ಕೋರಿದ್ದಾರೆ.

ಇದೇ ವೇಳೆ ಕಾಕತಾಳೀಯವೋ ಎಂಬಂತೆ ಮತ್ತಷ್ಟು ರಾಜಕೀಯ ಮುಖಂಡರು ಜೈಲಿಗೆ ಹೋಗಲಿದ್ದಾರೆ ಎಂದು ಕೋಡಿಮಠ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಅವರು ಕೊಪ್ಪಳದ ಕುಕನೂರುನಲ್ಲಿ ಸೋಮವಾರ ಭವಿಷ್ಯ ನುಡಿದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+