ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಂಕಿತ ವಿದ್ಯಾರ್ಥಿ ವಿಠಲನಿಗೆ ಪರೀಕ್ಷೆ ಬರೆಯಲು ಅವಕಾಶ

By Mahesh
|
Google Oneindia Kannada News

AR Infant DG IGP
ಉಡುಪಿ, ಏ.17: ವಿಠಲ್‌ಗೆ ಪರೀಕ್ಷೆ ಬರೆಯಲು ಅವಕಾಶ ನೀಡಿ ಎಂದು ಕೋರ್ಟ್ ಆದೇಶ ನೀಡಿದೆ. ಇದಕ್ಕೆ ಪೊಲೀಸರು ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ ಎಂದು ಡಿಜಿ ಐಜಿಪಿಇನ್ಫಾಂಟ್ ಸ್ಪಷ್ಟಪಡಿಸಿದ್ದಾರೆ.

ನಕ್ಸಲ್ ಬೆಂಲಿತ ಎಂಬ ಆಪಾದನೆ ಅಡಿಯಲ್ಲಿ ಬಂಧಿತನಾಗಿರುವ ಮಂಗಳೂರು ವಿವಿ ಪತ್ರಿಕೋದ್ಯಮ ವಿದ್ಯಾರ್ಥಿ ವಿಠಲ ಅವರಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲು ಬೆಳ್ತಂಗಡಿ ನ್ಯಾಯಾಲಯ ಒಪ್ಪಿಗೆ ಸೂಚಿಸಿದೆ.

ಕಳೆದ ಶುಕ್ರವಾರರ ಸಲ್ಲಿಸಿದ ಅರ್ಜಿಯನ್ನು ಕೈಗೆತ್ತಿಗೊಂಡ ನ್ಯಾಯಾಲಯ ವಿಠಲ್‌ಗೆ ವಿವಿಯ ಆಂತರಿಕ ಪರೀಕ್ಷೆಗೆ ಹಾಜರಾಗಲು ಅನುಮತಿ ನೀಡಬಹುದು.ಜೈಲು ಅಧಿಕಾರಿಗಳು ಬೆಂಗಾವಲ ಪಡೆಯೊಂದಿಗೆ ವಿಠಲನನ್ನು ಕಳುಹಿಸಿ ಕೊಡಬಹುದು ಎಂದು ನಿರ್ದೇಶನ ನೀಡಿದೆ.

ಜೈಲು ಅಧಿಕಾರಿಗಳಿಗೆ ಈಗಾಗಲೇ ಫ್ಯಾಕ್ಸ್ ಮೂಲಕ ಇದನ್ನು ರವಾನಿಸಲಾಗಿದೆ. ವಿಠಲ್ ಕೂಡ ಪರೀಕ್ಷೆ ಬರೆಯಲು ಉತ್ಸುಕನಾಗಿದ್ದಾನೆ. ಜೈಲಿನಲ್ಲಿ ಸಮಯ ಸಿಕ್ಕಾಗಲೆಲ್ಲ ಓದಿನಲ್ಲಿ ಮುಳುಗಿರುತ್ತಾನೆ ಎಂದು ತಿಳಿದು ಬಂದಿದೆ.

ಕಳೆದ ವಾರ ಪುತ್ತೂರು ಫಾಸ್ಟ್ ಟ್ರ್ಯಾಕ್ ಕೋರ್ಟ್ ಕಾನೂನು ವಿರೋಧಿ ಚಟುವಟಿಕೆ ತಡೆ ಕಾಯ್ದೆಯಡಿ ಬಂಧಿತನಾಗಿರುವ ವಿಠಲನಿಗೆ ಜಾಮೀನು ನೀಡಲು ನಿರಾಕರಿಸಿತ್ತು.

ಪತ್ರಿಕೋದ್ಯಮ ವಿದ್ಯಾರ್ಥಿ ಕುತ್ಲೂರಿನ ವಿಠಲ ಮಲೆಕುಡಿಯ ಬಂಧನದಲ್ಲಿ ಪೊಲೀಸರು ಯಾವುದೇ ತಪ್ಪು ಎಸೆಗಿಲ್ಲ. ವಿಠಲ ನಕ್ಸಲ್ ಚಟುವಟಿಕೆಯನ್ನು ಬೆಂಬಲಿಸುತ್ತಿದ್ದ. ಆತನನ್ನು ಇದೇ ಕಾರಣಕ್ಕೆ ಬಂಧಿಸಲಾಗಿದೆ ಎಂದು ಡಿಜಿ ಐಜಿಪಿ ಎಆರ್ ಇನ್ಫಾಂಟ್ ಸ್ಪಷ್ಟಪಡಿಸಿದ್ದರು.

English summary
DG IGP AR Infant has recenlty defended police move in detention of Mangalore university journalism student Vittala Malekudiya. Now Vittala is allowed to write exams without any problem sadi Udupi Police.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X