ಲಕ್ಕಿ ಕುಮಾರಣ್ಣನಿಂದ ಆರ್ ಆರ್ ಗೋಲ್ಡ್ ಉದ್ಘಾಟನೆ

RR Gold Palace Jayanagar
ಬೆಂಗಳೂರು, ಏ.17: ಆರ್ ಆರ್ ಗೋಲ್ಡ್ ಪ್ಯಾಲೇಸ್ ಪಾಲಿಗೆ ಲಕ್ಕಿ ಚಾರ್ಮ್ ಆಗಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರು ತಮ್ಮ ಬಿಡುವಿರದ ರಾಜಕೀಯ ಚಟುವಟಿಕೆ ನಡುವೆ ಏ.18ರಂದು ಜಯನಗರದಲ್ಲಿ ಆಭರಣ ಮಳಿಗೆ ಉದ್ಘಾಟನೆಗೆ ಬರುತ್ತಿದ್ದಾರೆ.

2006, ಜುಲೈ 9 ರಂದು ಮಲ್ಲೇಶ್ವರದಲ್ಲಿ ಮಳಿಗೆ ಉದ್ಘಾಟಿಸಿದ್ದ ಕುಮಾರಸ್ವಾಮಿ ಅವರು ಬುಧವಾರ(ಏ.18) ಜಯನಗರದ ಮೂರನೇ ಬ್ಲಾಕಿನ ಆನೆಬಂಡೆ ರಸ್ತೆಯಲ್ಲಿರುವ ಒನ್ ಇಂಡಿಯಾ ಕಚೇರಿ ಕಟ್ಟಡದ ಕೆಳ ಅಂತಸ್ತಿನಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಆರ್ ಆರ್ ಗೋಲ್ಡ್ ಪ್ಯಾಲೇಸ್ ಮಳಿಗೆ ಉದ್ಘಾಟಿಸಲಿದ್ದಾರೆ.

'ಕುಮಾರಸ್ವಾಮಿ ಅವರು ನಮ್ಮ ಸಂಸ್ಥೆಗೆ ಅದೃಷ್ಟಕರವಾಗಿದ್ದಾರೆ. ಹಾಗಾಗಿ ಕುಮಾರಸ್ವಾಮಿ ಅವರನ್ನೇ ಕಾರ್ಯಕ್ರಮಕ್ಕೆ ಆಹ್ವಾನಿಸಿದೆವು. ನಟ ದರ್ಶನ್, ರಮೇಶ್ ಅರವಿಂದ್, ಪೇಜಾವರ ಶ್ರೀಗಳು ಕಾರ್ಯಕ್ರಮಕ್ಕೆ ಬರುತ್ತಿದ್ದಾರೆ' ಎಂದು ಮಳಿಗೆ ಮಾಲೀಕ ರಮೇಶ್ ಹೇಳಿದರು.

100% ಬಿಐಎಸ್ ಹಾಲ್ ಮಾರ್ಕ್ ಮಳಿಗೆಯಲ್ಲಿ ವಿವಿಧ ಶೈಲಿಯ ಚಿನ್ನ, ಪ್ಲಾಟಿನಂ ಹಾಗೂ ಡೈಮಂಡ್ ಆಭರಣಗಳು ಲಭ್ಯವಿದೆ. ಬೆಂಗಳೂರಿನ ಹವಾನಿಯಂತ್ರಿತ ಆಭರಣ ಮಳಿಗೆಗಳಲ್ಲಿ ಜಯನಗರ ಆರ್ ಆರ್ ಗೋಲ್ಡ್ ಪ್ಯಾಲೇಸ್ ಅತಿದೊಡ್ಡ ಮಳಿಗೆ ಎನಿಸಲಿದೆ. 3000 ಚ.ಅಡಿ ವಿಸ್ತೀರ್ಣದ ಮಳಿಗೆಯಲ್ಲಿ ಚಿನ್ನ, ಬೆಳ್ಳಿ, ವಜ್ರ, ಹರಳುಗಳಿಗೆ ಪ್ರತ್ಯೇಕ ವಿಭಾಗಗಳಿದೆ.

ಚೆನ್ನೈಗೆ ಹೋಗಬೇಡ: ಕಡಿಮೆ ದರದಲ್ಲಿ ಚಿನ್ನ ಸಿಗುತ್ತದೆ ಎಂದು ಬೆಂಗಳೂರಿಗರು ಚೆನ್ನೈಗೆ ಹೋಗುವುದು ಮಾಮೂಲಿಯಾಗಿದೆ. ಇನ್ಮುಂದೆ ಈ ತೊಂದರೆ ಬೇಡ. ಚೆನ್ನೈನಲ್ಲಿ ದೊರೆಯುವ ದರದಲ್ಲೇ ಆರ್ ಆರ್ ಗೋಲ್ಡ್ ಪ್ಯಾಲೇಸ್ ನೀಡಲು ಸಿದ್ಧವಿದೆ. ಪ್ರತಿ ಗ್ರಾಹಕರು ಖರೀದಿಸುವ ಪ್ರತಿ ಗ್ರಾಂನ ಮೇಲೆ 25 ರು ಕಡಿತಗೊಳಿಸಗೊಳಿಸಲು ನಾವು ಸಿದ್ಧ ಎಂದು ಮಾಲೀಕ ರಮೇಶ್ ಅವರು ಒನ್ ಇಂಡಿಯಾ ಪ್ರತಿನಿಧಿಗೆ ಹೇಳಿದ್ದಾರೆ.

ಆರ್ ಆರ್ ಗೋಲ್ಡ್ ಪ್ಯಾಲೇಸ್ ನಲ್ಲಿ ಖರೀದಿಸುವ ಚಿನ್ನ ಹಾಗೂ ಬೆಳ್ಳಿ ಮೇಲೆ ಮೇಕಿಂಗ್ ಚಾರ್ಜ್ ಹಾಗೂ ವೇಸ್ಟೇಜ್ ಚಾರ್ಜ್ ಹಾಕುವುದಿಲ್ಲ. ಆರಂಭದಲ್ಲಿ ವಜ್ರದ ಮೇಲೆ ಶೇ 10, ಪ್ಲಾಟಿನಮ್ ಮೇಲೆ ಶೇ 2, ಪಚ್ಚೆ ಹವಳ ಹರಳುಗಳ ಮೇಲೆ ಶೇ 60 ರಷ್ಟು ರಿಯಾಯಿತಿ ನೀಡಲು ಸಂಸ್ಥೆ ಮುಂದಾಗಿದೆ.

ಇದಲ್ಲದೆ, ಸುಲಭ ಯೋಜನೆಗಳನ್ನು ಗ್ರಾಹಕರಿಗೆ ಹೊತ್ತು ತರುತ್ತಿರುವ ಆರ್ ಆರ್ ಗೋಲ್ಡ್ ಬಗ್ಗೆ ಹೆಚ್ಚಿನ ಮಾಹಿತಿಗೆ ಮಲ್ಲೇಶ್ವರದ ಕೇಂದ್ರ ಕಚೇರಿ ದೂರವಾಣಿ ಸಂಖ್ಯೆಗೆ 41137751 ಗೆ ಡಯಲ್ ಮಾಡಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+