ಬೀಫ್ ಫೆಸ್ಟಿವಲ್ ಗೆ ವಿರೋಧ, ವಿವಿಗೆ ಬೆಂಕಿ

ಕೆಲ ಪುಂಡ ವಿದ್ಯಾರ್ಥಿಗಳು ಗಲಭೆಯನ್ನು ಚಿತ್ರಿಸಲು ಬಂದಿದ್ದ ಜನಪ್ರಿಯ ಖಾಸಗಿ ವಾಹಿನಿಯ ಲಕ್ಷಾಂತರ ರು ಬೆಲೆ ಬಾಳುವ OB ವಾಹನವನ್ನು ಕುಟ್ಟಿ ಪುಡಿ ಮಾಡಿದ್ದಾರೆ. ಕಲ್ಲುಗಳ ತೂರಾಟದಿಂದ ಹಲವರಿಗೆ ಗಾಯಗಳಾಗಿದೆ ಎಂದು ಒಸ್ಮಾನಿಯಾ ವಿವಿ ಪೊಲೀಸ್ ಠಾಣಾಧಿಕಾರಿ ಹೇಳಿದ್ದಾರೆ.
NRSH ಹಾಸ್ಟೆಲ್ ನ ದಲಿತ ವಿದ್ಯಾರ್ಥಿಗಳು ಭಾನುವಾರ ಸಂಜೆ ವೇಳೆಗೆ ಕಾಲೇಜು ಕ್ಯಾಂಪಸ್ ನಲ್ಲಿ ದನದ ಮಾಂಸ ತಿಂದು ಸಂಭ್ರಮಾಚರಣೆ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಸುಮಾರು 1,500 ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಮೂಲಕ ತಮ್ಮ ಆಹಾರ ಸಂಸ್ಕೃತಿಯನ್ನು ವಿಶ್ವಕ್ಕೆ ಸಾರುವ ಹುಮ್ಮಸ್ಸಿನಲ್ಲಿದ್ದರು.
ಆದರೆ, ನಡೆದಿದ್ದೇ ಬೇರೆ. ಬೀಫ್ ಫೆಸ್ಟಿವಲ್ ಗೆ ವಿರೋಧಿಸಿದ ಗುಂಪೊಂದು ಏಕಾಏಕಿ ದಾಳಿ ನಡೆಸಿ ಕಾರ್ಯಕ್ರಮವನ್ನು ನಿಲ್ಲಿಸಿಬಿಟ್ಟರು.
ಸುಮಾರು 300 ವಿದ್ಯಾರ್ಥಿಗಳು ದಾಳಿ ನಡೆಸಿ ಕ್ಯಾಂಪಸ್ ನಲ್ಲಿ ನಿಲ್ಲಿಸಿದ್ದ ವಾಹನಗಳನ್ನು ಜಖಂಗೊಳಿಸಿದರು. ಈ ಸಂದರ್ಭದಲ್ಲಿ ಪೊಲೀಸರು ತಡೆ ಹಿಡಿದಾಗ, ಕಲ್ಲು ತೂರಾಟ ನಡೆಸಿದರು.
ಲಾಠಿ ಚಾರ್ಚ್, ಟಿಯರ್ ಗ್ಯಾಸ್ ಗೂ ಬಗ್ಗಲಿಲ್ಲ. ಖಾಸಗಿ ವಾಹಿನಿಯ ವಾಹನ ಕೂಡಾ ಜಖಂಗೊಂಡಿದೆ ಆದರೆ, ಯಾವುದೇ ಅಧಿಕೃತ ದೂರು ಇದುವರೆವಿಗೂ ಬಂದಿಲ್ಲ ಎಂದು ಪೊಲೀಸ್ ಇನ್ಸ್ ಪೆಕ್ಟರ್ ಪಿ ಅಶೋಕ್ ಕುಮಾರ್ ಹೇಳಿದ್ದಾರೆ.












Click it and Unblock the Notifications