ಕಟ್ಟೆಚ್ಚರ! 380 ಉಗ್ರ ಖೈದಿಗಳು ಎಸ್ಕೇಪ್

ಭಾನುವಾರ(ಏ.15) ರಂದು ತಾಲಿಬಾನಿಗಳ ದಾಳಿ ನಂತರ 380-400 ಖೈದಿಗಳು ಜೈಲಿನಲ್ಲಿ ಕಾಣುತ್ತಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಖೈಬರ್ ನ ವಾಯುವ್ಯಕ್ಕೆ ಇರುವ ಬನ್ನು ಎಂಬ ನಗರದಲ್ಲಿರುವ ಜೈಲಿನ ಮೇಲೆ ಭಾನುವಾರ ಮುಂಜಾನೆ ತಾಲಿಬಾನಿಗಳು ದಾಳಿ ಮಾಡಿದ್ದಾರೆ. ದಾಳಿ ಕಾರಣ ಸರಿಯಾಗಿ ತಿಳಿದು ಬಂದಿಲ್ಲ, ಎಸ್ಕೇಪ್ ಆದ ಖೈದಿಗಳಲ್ಲಿ ಎಷ್ಟು ಜನ ಉಗ್ರರು ಎಂಬುದು ಇನ್ನೂ ಪಾಕಿಸ್ತಾನ ಸರ್ಕಾರಕ್ಕೆ ಸ್ಪಷ್ಟವಾಗಿ ತಿಳಿಯುತ್ತಿಲ್ಲ.
ಪಾಕಿಸ್ತಾನಿ ತಾಲಿಬಾನ್ ಸಂಘಟನೆಯ ವಕ್ತಾರ ಅಸಿಮುಲ್ಲಾ ಮೆಹ್ಸೂದ್ ಮಾತನಾಡಿ, 1,200 ಜನರ ಗುಂಪನ್ನು ಹೊರಕ್ಕೆ ಬಿಡಲಾಗಿದೆ ಎಂದಿದ್ದಾರೆ.
ಸುಮಾರು 150 ಕ್ಕೂ ಅಧಿಕ ಮಂದಿ ಉಗ್ರರು ಜೈಲಿನ ಮೇಲೆ ಏಕಾಏಕಿ ದಾಳಿ ನಡೆಸಿದ್ದು ಪಾಕಿಸ್ತಾನ ಬೆಚ್ಚುವಂತೆ ಮಾಡಿದೆ. ತಾಲಿಬಾನಿಗಳ ಕೈಲಿ ಗ್ರೇನೇಡುಗಳು, ಆಧುನಿಕ ಶಸ್ತ್ರಾಸ್ತ್ರಗಳು ಇತ್ತು ಎಂದು ತಿಳಿದು ಬಂದಿದೆ.












Click it and Unblock the Notifications