ಪ್ರಸನ್ನ ವೀರಾಂಜನೇಯ ಮುಜರಾಯಿ ವಶಕ್ಕೆ

Prasanna Veeranjaneya Temple chaos
ಬೆಂಗಳೂರು, ಏ.15: ಕಳೆದ ಎರಡು ಮೂರು ದಿನಗಳಿಂದ ಗೊಂದಲ ಸೃಷ್ಟಿಸಿದ್ದ ಮಹಾಲಕ್ಷ್ಮಿ ಲೇಔಟ್ ನ ಶ್ರೀಪ್ರಸನ್ನ ವೀರಾಂಜನೇಯ ದೇವಸ್ಥಾನ ವಿವಾದಕ್ಕೆ ಮುಜರಾಯಿ ಇಲಾಖೆ ಇತಿಶ್ರೀ ಹಾಡಿದೆ. ಟ್ರಸ್ಟ್ ನಡೆಸಿಕೊಂಡು ಬರುತ್ತಿದ್ದ ದೇಗುಲ ಈಗ ಸರ್ಕಾರದ ಅಣತಿಯಂತೆ ಕಾರ್ಯ ನಿರ್ವಹಿಸಲಿದೆ.

ಸುಮಾರು 40 ವರ್ಷ ದೇಗುಲದ ಹುಂಡಿ ಹಾಗೂ ಟ್ರಸ್ಟ್ ನ ಕಚೇರಿಗೆ ಬೀಗ ಜಡಿಯಲಾಗಿದೆ. ಏ.13ರಂದು ಸರ್ಕಾರ ನೀಡಿದ ಆದೇಶದ ಮೇರೆಗೆ ಕ್ರಮ ಜರುಗಿಸಲಾಗಿದೆ. ವೀರಾಂಜನೇಯ ಟ್ರಸ್ಟ್ ಕಮಿಟಿ ವಿಸರ್ಜನೆ ಗೊಳ್ಳಲಿದೆ. ಸರ್ಕಾರದ ಕ್ರಮವನ್ನು ಭಕ್ತ ಸಮೂಹ ಕೂಡಾ ಸ್ವಾಗತಿಸಿದೆ ಎಂದು ಮುಜರಾಯಿ ಇಲಾಖೆ ಅಧಿಕಾರಿ ಹಿರೇಮಠ್ ಹೇಳಿದ್ದಾರೆ.

ಟ್ರಸ್ಟಿಗಳ ಪ್ರತಿಭಟನೆ: ಪ್ರಸನ್ನ ವೀರಾಂಜನೇಯ ದೇವಾಲಯ ಟ್ರಸ್ಟ್ ವತಿಯಿಂದ ಗ್ರಂಥಾಲಯ, ಆಸ್ಪತ್ರೆ ಸೇರಿದಂತೆ ಹತ್ತು ಹಲವು ಸಾಮಾಜಿಕ ಕಾರ್ಯಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ವಾರ್ಷಿಕ ಲೆಕ್ಕಪತ್ರಗಳು ಕೂಡಾ ಸರಿಯಾಗಿದೆ.

ಆದರೂ, ನಗರ ಜಿಲ್ಲಾಧಿಕಾರಿ ಮತ್ತು ಮುಜರಾಯಿ ಇಲಾಖೆ ಅಧಿಕಾರಿಗಳು ದೇವಸ್ಥಾನವನ್ನು ವಶಕ್ಕೆ ತೆಗೆದುಕೊಂಡಿರುವುದು ಸರಿಯಲ್ಲ. ಇದರ ಹಿಂದೆ ರಾಜಕೀಯ ಉದ್ದೇಶ ಅಡಗಿರುವುದು ಸ್ಪಷ್ಟವಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿ ವಕ್ತಾರ ಮೋಹನ್ ಗೌಡ ಆರೋಪಿಸಿದ್ದಾರೆ.

ವಾರ್ಷಿಕವಾಗಿ ಸುಮಾರು 1 ಕೋಟಿ ರು.ಗೂ ಅಧಿಕ ಆದಾಯವನ್ನು ಪ್ರಸನ್ನ ವೀರಾಂಜನೇಯ ದೇಗುಲ ಹೊಂದಿದೆ. 22 ಅಡಿ ಎತ್ತರದ ಆಂಜನೇಯ ಸ್ವಾಮಿ ಮೂರ್ತಿ ಅನೇಕ ಚಲನಚಿತ್ರಗಳಲ್ಲೂ ರಾರಾಜಿಸಿದೆ. 1973ರಲ್ಲಿ ಜಾರಿಗೆ ಬಂದ ದೇಗುಲದ ಟ್ರಸ್ಟ್ 13 ಎಕರೆ ಪ್ರದೇಶ ಸೇರಿದಂತೆ ಇತರೆ ಕಟ್ಟಡಗಳ ನಿರ್ವಹಣೆ ಮಾಡುತ್ತಿದೆ. ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಕೂಡಾ ಟ್ರಸ್ಟಿಯಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+