ಸೋಮವಾರ ಹೂ, ತರಕಾರಿ ಪೂರೈಕೆ ವ್ಯತ್ಯಯ?

ಸೋಮವಾರ ಮಧ್ಯಾಹ್ನ 12 ರಿಂದ 2 ಗಂಟೆಗಳವರೆಗೂ ಮಳಿಗೆಗಳು ಬಂದ್ ಆಗಲಿದೆ. ಈ ಸಾಂಕೇತಿಕ ಮುಷ್ಕರದಿಂದ ನಾಗರಿಕರಿಗೆ ತೊಂದರೆಯಾಗಬಹುದು. ಆದರೆ, ಬಿಬಿಎಂಪಿಗೆ ನಮ್ಮ ಪ್ರತಿಭಟನೆ ಬಿಸಿ ಮುಟ್ಟಲೇಬೇಕು ಎಂದು ವರ್ತಕರು ಹೇಳಿದ್ದಾರೆ.
ಕೃಷ್ಣರಾಜ ಮಾರುಕಟ್ಟೆಯ ತಳ ಮಹಡಿಯಲ್ಲಿ ಸುಮಾರು 300 ಮಳಿಗೆಗಳಿದ್ದು, ಇದರಲ್ಲಿ 120 ಹೂವಿನ ಅಂಗಡಿ ಇದೆ. ಆದರೆ, ಇತ್ತೀಚೆಗೆ ಪ್ರವೇಶದ್ವಾರ ಒತ್ತುವರಿ ಮಾಡಿಕೊಂಡ ಮಳಿಗೆಗಳು ನಿರ್ಮಾಣವಾಗಿದೆ. ಇದರಿಂದ ಸರಿಯಾಗಿ ಗಾಳಿ ಬೆಳಕು ಬರುತ್ತಿಲ್ಲ ಎಂದು ಸಂಘದ ಅಧ್ಯಕ್ಷ ರಘುಕುಮಾರ್ ಆರೋಪಿಸಿದ್ದಾರೆ.
ಪಾಲಿಕೆ ಸ್ಥಾಯಿ ಸಮಿತಿ ಸುಮಾರು 9 ರಿಂದ 10 ಮಳಿಗೆಗಳ ನಿರ್ಮಾಣಕ್ಕೆ ಅನುಮತಿ ನೀಡಿದೆ. ಎಲ್ಲವೂ ಅನಧಿಕೃತ ಕಟ್ಟಡಗಳಾಗಿದೆ. ಹಾಲಿ ಸ್ಥಾಯಿ ಸಮಿತಿ ಅಧ್ಯಕ್ಷೆ ರೂಪಾ ರಮೇಶ್ ಕೂಡಾ ಇದಕ್ಕೆ ಬೆಂಬಲ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಯಾವುದೇ ಮೂಲ ಸೌಕರ್ಯಗಳಿಲ್ಲ: ಕೆಆರ್ ಮಾರುಕಟ್ಟೆಯಲ್ಲಿ ಸುಮಾರು 1,800 ಮಳಿಗೆಗಳಿದೆ. ಕುಡಿಯುವ ನೀರಿನ ಸೌಲಭ್ಯವಿಲ್ಲ. ತುರ್ತು ಪರಿಹಾರ ಕಾರ್ಯಕ್ಕೆ ವ್ಯವಸ್ಥೆಯಿಲ್ಲ. ಶೌಚಾಲಯವಂತೂ ಮೊದಲೇ ಇಲ್ಲ. ಅನಧಿಕೃತ ಕಟ್ಟಡ ನಿರ್ಮಾಣಕ್ಕೆ ಅಧಿಕಾರಿಗಳೇ ಸಾಥ್ ನೀಡುತ್ತಿದ್ದಾರೆ ಎಂದು ವರ್ತಕರು ಹೇಳಿದ್ದಾರೆ.












Click it and Unblock the Notifications