ನಾನೊಬ್ಬ ಬ್ರಾಹ್ಮಣ: ರಾಹುಲ್ ಗಾಂಧಿ
ನವದೆಹಲಿ,
ಏ.14: ಜಾತಿ ರಾಜಕಾರಣದ ತವರೂರಾದ ಉತ್ತರಪ್ರದೇಶದಲ್ಲಿ ಹೀನಾಯ ಸೋಲು ಅನುಭವಿಸಿದ ಬಳಿಕ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ತಮ್ಮ ವರಸೆಯನ್ನು ಬದಲಿಸಿದ್ದಾರೆ.ಇತರೆ ಹಿಂದುಳಿದವರು, ದಲಿತರು ಮತ್ತು ಮೇಲ್ವರ್ಗದ ಜನಗಳ ಮಧ್ಯೆ ಕಾಂಗ್ರೆಸ್ ಸದೃಢವಾಗಿ ಎದ್ದು ನಿಲ್ಲುವುದು ಹೇಗೆ ಎಂದು ಪಕ್ಷದ ಕಾರ್ಯಕರ್ತರು ಚಿಂತಾಕ್ರಾಂತರಾಗಿದ್ದಾರೆ. ಆದರೆ ಈ ಬಗ್ಗೆ ಬ್ರಾಹ್ಮಣರು ತಮ್ಮ ಬಲವೇನು ಎಂಬುದನ್ನು ಮೊನ್ನೆ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ತೋರಿಸಿದ್ದಾರೆ. id="toptextpromo"> id='are-slot-1' class='oiad oi-axt oiadv'>
id='top-searched-articles'>ಇದನ್ನೇ ಮುಂದಿಟ್ಟುಕೊಂಡು ಇತ್ತೀಚೆಗೆ ಪಕ್ಷದ ಸಭೆ ನಡೆದಿದ್ದಾಗ ಉತ್ತರಪ್ರದೇಶದ ಸ್ಥಳೀಯ ನಾಯಕರೊಬ್ಬರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಅದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಯುವರಾಜ ರಾಹುಲ್ ಗಾಂಧಿ 'ನಾನು ಬ್ರಾಹ್ಮಣ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ' ಎಂದು ಎದೆಯುಬ್ಬಿಸಿಕೊಂಡು ಹೇಳಿದರು. ಇದರಿಂದ ಪಕ್ಷಕ್ಕೆ ಏನು ಪ್ರಯೋಜನವಾಯಿತೋ ತಕ್ಷಣಕ್ಕೆ ತಿಳಿದುಬಂದಿಲ್ಲ. ಆದರೆ ಒಂದಷ್ಟು ವಿವಾದವನ್ನೂ ಸೃಷ್ಟಿಸಿದೆ.
ಉತ್ತರಪ್ರದೇಶದಲ್ಲಿ
ಈ ಹಿಂದೆ ಬಹುಸಂಖ್ಯೆಯಲ್ಲಿದ್ದ ಬ್ರಾಹ್ಮಣರು ಈಗ ಕಾಣೆಯಾಗುತ್ತಿದ್ದಾರೆ. ಇರುವ ಕೆಲವೇ ಬ್ರಾಹ್ಮಣ ನಾಯಕರು ತಮ್ಮ ಅಧಿಪತ್ಯ ಸ್ಥಾಪಿಸಿದ್ದಾರೆ. ಇದು ಪಕ್ಷಕ್ಕೆ ತಲೆನೋವಾಗಿದೆ. 2014ರ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರಾಹುಲ್ ಗಾಂಧಿ ಎಲ್ಲ ವರ್ಗದವರನ್ನೂ ಈಗಿನಿಂದಲೇ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕು ಎಂದು ಪಕ್ಷದ ಚಿಂತಕತ ಚಾವಡಿ ಆಲೋಚಿಸಿದೆ.











Click it and Unblock the Notifications