ಶ್ರೀರಾಮುಲು ಬಿಜೆಪಿಗೆ ಮರಳುವುದು ಗ್ಯಾರಂಟಿ

ಏನಪಾ ಅಂದರೆ... ಮಾಜಿ ಸಚಿವ, ಬಳ್ಳಾರಿ ಶಾಸಕ ಬಿ. ಶ್ರೀರಾಮುಲು ಸದ್ಯದಲ್ಲೇ ತಮ್ಮ ಮಾತೃಪಕ್ಷಕ್ಕೆ ಮರಳಲಿದ್ದಾರೆ. ಸದ್ಯದಲ್ಲೇ ಈ ಆಶ್ಚರ್ಯಕರ ಬೆಳವಣಿಗೆ ನಡೆಯಬಹುದು ಎಂದು ಕೆ. ಕರುಣಾಕರ ರೆಡ್ಡಿ ಭವಿಷ್ಯ ನುಡಿದಿದ್ದಾರೆ.
ತಾವು ಪ್ರತಿನಿಧಿಸುವ ಹರಪನಹಳ್ಳಿ ಕ್ಷೇತ್ರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಕರುಣಾಕರ ರೆಡ್ಡಿ ಅವರು 'ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳು ಯಶಸ್ವಿಯಾಗಿಲ್ಲ. ಈ ಬಗ್ಗೆ ಶ್ರೀರಾಮುಲುಗೆ ಈ ಹಿಂದೆಯೇ ತಿಳಿಯ ಹೇಳಿದ್ದೇನೆ. ಅಲ್ಲದೆ, ಬಿಜೆಪಿಗೆ ಮರಳುವಂತೆಯೂ ಬುದ್ದಿವಾದ ಹೇಳಿದ್ದೇನೆ' ಎಂದರು.
'ಹಾಲಿ ಪರಿಸ್ಥಿತಿಯಲ್ಲಿ ಅವರಿಗೆ ಮನವೊಲಿಸುವುದು ಕಷ್ಟ. ಆದರೆ ಮುಂದೊಂದು ದಿನ ಅವರು ಪಕ್ಷಕ್ಕೆ ಮರಳಲಿದ್ದಾರೆ ಎಂಬ ದೃಢ ವಿಶ್ವಾಸ ನನಗಿದೆ' ಎಂದರು. ಇದೇ ವೇಳೆ ತಾವು ಬಿಜೆಪಿಯನ್ನು ತೊರೆದು ಮತ್ಯಾವುದೋ ಪಕ್ಷವನ್ನು ಸೇರುವುದಿಲ್ಲ ಎಂದು ಕರುಣಾಕರ ರೆಡ್ಡಿ ಸ್ಪಷ್ಟಪಡಿಸಿದರು.












Click it and Unblock the Notifications