Q4: ಇನ್ಫೋಸಿಸ್ ಲಾಭ ಕುಸಿತ, ಷೇರು ಗೋತಾ

ಆದರೆ ಕಂಪನಿಯ ಲಾಭ ಪ್ರಮಾಣ ಸ್ವಲ್ಪ ಮಟ್ಟಿಗೆ ಚೇತೋಹಾರಿಯಾಗಿದೆ. ತೆರಿಗೆ ನಂತರದ ಸಂಚಿತ ಲಾಭ ( PAT) ಶೇ. 2ರಷ್ಟು ಕುಸಿದಿದ್ದು, 2,316 ಕೋಟಿ ರೂ.ಗೆ ಬಂದು ನಿಂತಿದೆ. ಕಳೆದ ತ್ರೈಮಾಸಿಕದಲ್ಲಿ 2,372 ಕೋಟಿ ರೂ. ಇತ್ತು. ಸಂಚತ ಮಾರಾಟ ಪ್ರಮಾಣವೂ ಶೇ. 4.7ರಷ್ಟು ಕುಸಿದಿದೆ. ಡಿಸೆಂಬರ್ ತ್ರೈಮಾಸಿಕದಲ್ಲಿ ಈ ಪ್ರಮಾಣ 9,298 ಕೋಟಿ ರೂ. ಇದ್ದಿದ್ದು ಈ ಬಾರಿ 8,852 ಕೋಟಿ ರೂ ಮಾರಾಟ ಕಂಡಿದೆ.
ಡಿವಿಡೆಂಡ್ ಗೆ ಮೋಸವಿಲ್ಲ: ಡಿವಿಡೆಂಡ್ ಗೆ ಯಾವುದೇ ಮೋಸವಿಲ್ಲದೆ 2012ರ ಆರ್ಥಿಕ ವರ್ಷಕ್ಕೆ ಷೇರುದಾರರು ಒಟ್ಟು ಶೇ. 22ರಷ್ಟು ಲಾಭಾಂಶ ಪಡೆಯಬಹುದಾಗಿದೆ. ಇದರಲ್ಲಿ ಶೇ. 10ರ ವಿಶೇಷ ಡಿವಿಡೆಂಡ್ ಅಡಕವಾಗಿದೆ.
ಈ ಫಲಿತಾಂಶದ ಹಿನ್ನೆಲೆಯಲ್ಲಿ ಮುಂಬರುವ ಆರ್ಥಿಕ ವರ್ಷ ಐಟಿ ಸೇವೆಗಳಿಗೆ ಸವಾಲಿದ್ದಾಗಿರುತ್ತದೆ. ವಿಶ್ವ ಮಾರುಕಟ್ಟೆ ಅಸ್ಥಿರತೆ ಮುಂದುವರಿಯಲಿದೆ. ವಿದೇಶಿ ವಿನಿಮಯ ಅಸ್ಥಿರತೆ ಉದ್ಯಮಕ್ಕೆ ಬಾಧಕವಾಗಲಿದೆ ಎಂದು ಇನ್ಫಿ ಹೇಳಿದೆ.












Click it and Unblock the Notifications