ಭರ್ಜರಿ ಬೇಟೆ : ಬೆಂಗಳೂರಲ್ಲಿ 13 ದರೋಡೆಕೋರರ ಬಂಧನ

ಆರು ಜನರಿದ್ದ ಒಂದು ತಂಡವನ್ನು ಪರಪ್ಪನ ಅಗ್ರಹಾರದ ವ್ಯಾಪ್ತಿಯಲ್ಲಿ ಬರುವ ರಾಮಸಂದ್ರದಲ್ಲಿ ಬಂಧಿಸಲಾಗಿದ್ದರೆ, ಏಳು ಜನರಿದ್ದ ಇನ್ನೊಂದು ತಂಡವನ್ನು ಕುಮಾರಸ್ವಾಮಿ ಬಡಾವಣೆ ವ್ಯಾಪ್ತಿಯ ಇಲಿಯಾಸ್ ನಗರದ ಪೈಪ್ ಲೈನ್ನ ಗಂಗಮ್ಮ ದೇವಸ್ಥಾನದ ಬಳಿ ದರೋಡೆಗೆ ಸಜ್ಜಾಗಿದ್ದವರನ್ನು ಬಂಧಿಸಿದ್ದಾರೆ.
ರಾಮಸಂದ್ರದ ಅಮೃತ್ ಕಾಲೇಜು ರಸ್ತೆಯಲ್ಲಿ ದರೋಡೆಗೆ ಸಿದ್ಧರಾಗಿದ್ದ ಮಲ್ಲಸಂದ್ರದ ಶ್ರೀನಿವಾಸ, ಪ್ಯಾಲೇಸ್ ಗುಟ್ಟಹಳ್ಳಿಯ ದಿಲೀಪ್, ಮಲ್ಲೇಶ್ವರದ ಉಮೇಶ್, ಮುನೇಶ್ವರ ಬ್ಲಾಕ್ನ ಪೆರುಮಾಳ್, ಮಲ್ಲೇಶ್ ಪೈಪ್ ಲೈನ್ನ ವೆಂಕಟೇಶ್, ಮಲ್ಲೇಶ್ವರ ಜಲಮಂಡಳಿ ಕ್ವಾರ್ಟರ್ಸ್ ನಿವಾಸಿ ರಾಜುಗೌಡ ಬಂಧಿತರಾಗಿದ್ದಾರೆ.
ಬಂಧಿತರಿಂದ ಚಾಕು, ಲಾಂಗ್, ಕಬ್ಬಿಣದ ರಾಡ್, ಮರದ ದೊಣ್ಣೆ ಮುಂತಾದ ಮಾರಕಾಸ್ತ್ರಗಳು, 7 ಮೊಬೈಲ್ ಫೋನ್ ಗಳು ಮತ್ತು ಮೂರು ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇವರಲ್ಲಿ ಶ್ರೀನಿವಾಸ ತಂಡದ ನಾಯಕನಾಗಿದ್ದು, ಮಲ್ಲೇಶ್ವರ, ಶೇಷಾದ್ರಿಪುರ, ವೈಯಾಲಿ ಕಾವಲ್ ಪ್ರದೇಶದಲ್ಲಿ ಅನೇಕ ದರೋಡೆ, ಕೊಲೆಯತ್ನ ಪ್ರಕರಣಗಳಲ್ಲಿ ಭಾಗಿಯಾಗಿದ್ದ.
ಇಲಿಯಾಸ್ ನಗರದಲ್ಲಿ ಬಂಧಿತರಾಗಿರುವವರು ಉಲ್ಲಾಳ ಉಪನಗರದ ಕಾರ್ತಿಕ್, ಬನಶಂಕರಿ 2ನೇ ಹಂತದ ನಿವಾಸಿ ಮುಬಾರಕ್, ಆನಂದಮಣಿ, ನಾಯಂಡಹಳ್ಳಿಯ ದೀಪಕ್, ಪಂತರಪಾಳ್ಯದ ಗಿರೀಶ್, ಬನಶಂಕರಿ ಭವಾನಿ ನಗರದ ಅಮ್ಮು ಮತ್ತು ಯಾರಬ್ ನಗರದ ಹಸನ್ ಅಹ್ಮದ್ ಬಂಧಿತ ದರೊಡೆಕೋರರು. ಇವರು ಕೂಡ ಅನೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರ ವಾಂಟೆಡ್ ಪಟ್ಟಿಯಲ್ಲಿದ್ದರು.
-
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
Horoscope March 17; ಈ ರಾಶಿಯವರ ಅದೃಷ್ಟ ಇಂದು ಬದಲಾಗಬಹುದು -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
Prem: ಅಂದು ಮೇಲುಕೋಟೆ ಹುಡುಗಿ, ಇಂದು ಸೆರಗ ಸರ್ಸೆ: ವಿವಾದಕ್ಕೆ ಕಾರಣವಾದ ಪ್ರೇಮ್ ಸಿನಿಮಾ ಹಾಡುಗಳು -
ಶಿಕ್ಷಕಿಯರು ಹೆರಿಗೆ ರಜೆಗಾಗಿ ಅರ್ಜಿ ಸಲ್ಲಿಸಿದ 15 ದಿನಗಳ ಒಳಗೆ ಮಂಜೂರು; 5 ವರ್ಷ ಇಚ್ಛಿಸಿದ ಶಾಲೆಯಲ್ಲೇ ಕೆಲಸಕ್ಕೆ ಅವಕಾಶ -
SSLC Exam 2026 : ಮಾರ್ಚ್ 18ರಿಂದ ಪರೀಕ್ಷೆ; ವಿದ್ಯಾರ್ಥಿಗಳೇ, ನಿಮ್ಮ ಕೊನೆ ಕ್ಷಣದ ಸಿದ್ಧತೆಗೆ ಹೀಗಿರಲಿ -
Puneeth Rajkumar Birthday: ಇಂದು ನಟ ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬ; ಅಭಿಮಾನಿಗಳಿಂದ ವಿಶೇಷ ನಮನ, ಶುಭಾಶಯಗಳ ಮಹಾಪೂರ -
SSLC ವಿದ್ಯಾರ್ಥಿಗಳ ಗಮನಕ್ಕೆ: ಮಾರ್ಚ್ 18ಕ್ಕೆ ಪ್ರಥಮ ಭಾಷೆ ಕನ್ನಡ ಪರೀಕ್ಷೆ; ಪಾಸಾಗಲು ಈ ಪ್ರಮುಖ ಅಂಶಗಳನ್ನು ಗಮನಿಸಿ -
ಸಿನಿಮಾ ಕಥೆಗೆ ವಿರುದ್ಧವಾಗಿ ಕುಂಭಮೇಳ ಮೊನಾಲಿಸಾ ಮದುವೆ, 10 ಕೋಟಿ ರೂ. ಸಾಲ ಮಾಡಿದ್ದೇನೆ: ನಿರ್ದೇಶಕ ಸನೋಜ್ ಮಿಶ್ರಾ ಆತಂಕ -
Shame on You: ಸೆರಗ ಸರ್ಸೆ ಡಬಲ್ ಮೀನಿಂಗ್ ಹಾಡಿಗೆ ಕನ್ನಡಿಗರ ಆಕ್ರೋಶ-ಶೋಭಾ ಮಳವಳ್ಳಿ ಬರಹ -
ನಾಳೆಯಿಂದ ರಾಜ್ಯಾದ್ಯಂತ SSLC ಪರೀಕ್ಷೆ: ಟೆನ್ಷನ್ ಬಿಡಿ, ರಿಲಾಕ್ಸ್ ಆಗಿರಿ; ಕೊನೆಯ ಕ್ಷಣದ ಸಿದ್ಧತೆಗೆ ಇಲ್ಲಿವೆ ಟಿಪ್ಸ್ -
Bengaluru Rain: ಬೆಂಗಳೂರಿನ ವಿವಿಧ ಭಾಗಗಳಲ್ಲಿ ಧಾರಾಕಾರ ಮಳೆ: ಯುಗಾದಿಗೆ ಮೊದಲ ಮಳೆ; ರಾಜ್ಯಕ್ಕೆ ಶುಭಸೂಚಕ












Click it and Unblock the Notifications