'ಸ್ವಯಂಕೃಷಿ' ಬಾಬು ಮೇಲೆ ಬಿತ್ತು ಮತ್ತೊಂದು ಕೇಸು

ವೀರೇಂದ್ರಬಾಬುವಿನ ಎರಡನೆಯ ಪತ್ನಿ ಚಂದ್ರಿಕಾ ಎಂಬ ಹೆಣ್ಣುಮಗಳು ಎರಡು ದಿನದಿಂದ ಮಾಧ್ಯಮಗಳಲ್ಲಿ ವೀರೇಂದ್ರಬಾಬುವಿನ ಲಂಪಟತನಗಳು ಬಿತ್ತರವಾಗುತ್ತಿದ್ದಂತೆ ಆತಂಕಕ್ಕೊಳಗಾಗಿ ಪೊಲೀಸರ ಮೊರೆ ಹೋಗಿದ್ದಾರೆ.
ಎಂಬಿಎ ಪದವೀಧರೆಯಾದ ಚಂದ್ರಿಕಾ ನಿನ್ನೆ ಮಾಧ್ಯಮವೊಂದರಲ್ಲಿ ಮಾತನಾಡುತ್ತಾ ಬಾಬುಗೆ ಈಗಾಗಲೇ ಎರಡು ಮದುವೆಯಾಗಿದೆ ಎಂದು ತಿಳಿಸಿದ್ದರು. ಸೌಭಾಗ್ಯ ಎಂಬ ಹೆಂಡತಿಯಿದ್ದರೂ ನನ್ನನ್ನೂ ಮದುವೆಯಾಗಿದ್ದ. ಇದೀಗ 23 ವರ್ಷದ ಪಾರ್ವತಿಯನನ್ನು ಮದುವೆಯಾಗಲು ಹೊರಟಿದ್ದಾನೆ ಎಂದು ಆಪಾದಿಸಿದ್ದರು.
ಈ ಬಗ್ಗೆ ಮಾಹಿತಿ ಪಡೆದ ಸ್ತ್ರೀಲೋಲ ವೀರೇಂದ್ರಬಾಬು ತಕ್ಷಣ ಚಂದ್ರಿಕಾರನ್ನು ಸಂಪರ್ಕಿಸಿದ್ದಾನೆ. ನನ್ನ ಮಾನ ಮರ್ಯಾದೆಯೆಲ್ಲ ಹರಾಜು ಹಾಕುತ್ತಿದ್ದೀಯಾ ಎಂದು ಕೂಗಾಡಿದ್ದಾನೆ. ಜತೆಗೆ ಬೆದರಿಕೆಯೂ ಹಾಕಿದ್ದಾನೆ. ವರದಕ್ಷಿಣೆಗೂ ಬೇಡಿಕೆಯಿಟ್ಟಿದ್ದಾನೆ ಎಂದು ಚಂದ್ರಿಕಾ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ತಕ್ಷಣ ಇಂದು ಬೆಳಗ್ಗೆ ಯಲಹಂಕ ಉಪನಗರ ಪೊಲೀಸ್ ಠಾಣೆಗೆ ತೆರಳಿದ ಚಂದ್ರಿಕಾ, ಪತಿ ವೀರೇಂದ್ರಬಾಬು ವಿರುದ್ಧ ಕೊಲೆ ಬೆದರಿಕೆ, ವರದಕ್ಷಿಣೆ ಕಿರುಕುಳ ಆರೋಪ ಹೊರಿಸಿ, ದೂರು ದಾಖಲಿಸಿದ್ದಾರೆ. ಅತ್ತ ಹೈದರಾಬಾದ್, ತಿರುಪತಿ ಎಂದು ಸುತ್ತಾಡಿಕೊಂಡಿರುವ ವೀರೇಂದ್ರಬಾಬು ಪಾಪದ ಕೊಡ ತುಂಬಿದಂತೆ ಕಾಣುತ್ತಿದೆ. ಯಾವುದೇ ಕ್ಷಣ ಪೊಲೀಸರಿಂದ ಬಂಧನಕ್ಕೊಳಗಾಗುವ ಸಾಧ್ಯತೆಗಳು ನಿಚ್ಚಳವಾಗಿವೆ.












Click it and Unblock the Notifications