ಬಿಎಸ್ ವೈ ಕುಟುಂಬದ ಮೇಲೆ ಸಿಬಿಐ ತೂಗುಗತ್ತಿ

ಸಿಬಿಐ ತನಿಖೆಗೆ ಆಗ್ರಹಿಸಿ ಧಾರವಾಡ ಮೂಲದ ಸಮಾಜ ಪರಿವರ್ತನ ಸಮುದಾಯವು (ಎಸ್‌ಪಿಎಸ್) ಸಲ್ಲಿಸಿದ ಅರ್ಜಿಯನ್ನು ಗಂಭಿರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟು ಸಿಇಸಿ ವರದಿ ಆಧಾರದ ಮೇಲೆ ಸಿಬಿಐ ತನಿಖೆಗೆ ಆದೇಶಿಸುವ ಸಾಧ್ಯತೆ ನಿಚ್ಚಳವಾಗಿದೆ. ಪ್ರಕರಣದ ವಿಚಾರಣೆ ಮಾ.30 ರಿಂದ ಆರಂಭವಾಗಲಿದೆ.
ಯಡಿಯೂರಪ್ಪ ತಮ್ಮ ಪ್ರತಿನಿಧಿಯಾಗಿ ಅಶೋಕ್ ಹಾರ್ನಳ್ಳಿ ಹಾಗೂ ಸಂದೀಪ್ ಪಾಟೀಲ್ ಅವರನ್ನು ಸಿಇಸಿ ಕಚೇರಿಗೆ ವಿಚಾರಣೆಗೆ ಕಳುಹಿಸಿದ್ದರು.
ಸಿಇಸಿ ಶಿಫಾರಸ್ಸು: ಅಕ್ರಮ ಗಣಿಗಾರಿಕೆಯ ವಿಚಾರದಲ್ಲಿ ಸುಪ್ರೀಂಕೋರ್ಟ್ ಸಿಇಸಿ ಶಿಫಾರಸುಗಳನ್ನು ನಿರಾಕರಿಸುವುದು ಕಮ್ಮಿ. ಯಡ್ಡಿ ಕುಟುಂಬದ ಪ್ರೇರಣಾ ಟ್ರಸ್ಟ್ ಜಿಂದಾಲ್ ಕಂಪನಿಯಿಂದ 20 ಪ್ಲಸ್ ಕೋಟಿ ಪಡೆದಿರುವ ಪ್ರಕರಣ ಹೊಸ ತಿರುವು ಪಡೆಯಲಿದೆ.
ಯಡಿಯೂರಪ್ಪ ಪುತ್ರರ ಹೆಸರಿನಲ್ಲಿರುವ ಭಗತ್ ಹೋಮ್ಸ್ ಗೆ 2.5 ಕೋಟಿ, ಧವಳಗಿರಿ ಪ್ರಾಪರ್ಟೀಸ್ ಗೆ 3.5 ಕೋಟಿ ರು ಕಿಕ್ ಬ್ಯಾಕ್ ಹಣ ಸಂದಾಯವಾಗಿರುವುದು ಎರಡೂ ಕಂಪನಿಗಳ ಬ್ಯಾಲೆನ್ಸ್ ಶೀಟ್ ದಾಖಲಾಗಿದೆ. ಇದೇ ಮಾಹಿತಿಯನ್ನು ಸಿಇಸಿ ತಂಡ ಸುಪ್ರೀಂಕೋರ್ಟಿಗ ಸಲ್ಲಿಸಿದೆ.
ಪ್ರವೀಣ್ ಚಂದ್ರ ಎಂಬುವವರಿಂದ ಒಟ್ಟು 6 ಕೋಟಿ ಲಂಚ ಪಡೆದ ಆರೋಪ ಹೊರೆಸಲಾಗಿದ್ದು, ಬಾಕಿ ಕಿಕ್ ಬ್ಯಾಖ್ ಮೊತ್ತದ ಬಗ್ಗೆ ಹೆಚ್ಚಿನ ತನಿಖೆಗೆ ಕೋರ್ಟ್ ಆದೇಶಿಸಬಹುದು ಎಂದು ವರದಿಯಲ್ಲಿ ಹೇಳಲಾಗಿದೆ.
ಹಣ ಪಡೆದಿರುವುದನ್ನು ಸ್ವತಃ ಯಡಿಯೂರಪ್ಪ ಅವರೇ ಈ ಮುಂಚೆ ಬಹಿರಂಗವಾಗಿ ಒಪ್ಪಿಕೊಂಡಿದ್ದರು. ಆದರೆ, ಅದು ನನ್ನ ಮಕ್ಕಳ ವ್ಯವಹಾರ ನನಗೂ ಅವರಿಗೂ ಸಂಬಂಧ ಕಡೆದು ಹೋಗಿ ಸುಮಾರು ವರ್ಷ ಆಯಿತು ಎಂದು ಜಾಣತನ ಉತ್ತರ ನೀಡಿದ್ದರು. ಆದರೆ, ಈಗ ಎಲ್ಲರ ಕುತ್ತಿಗೆಗೆ ಸಿಇಸಿ ಉರುಳು ಹೆಣೆದಿದೆ.












Click it and Unblock the Notifications