ಕಾನೂನು ಪಂಡಿತ ಜೇಟ್ಲಿ ಕೈಗೆ ಯಡಿಯೂರಪ್ಪ ಜುಟ್ಟು

arun-jaitley-to-give-report-on-bsy-cases-advani
ಬೆಂಗಳೂರು, ಮಾ.26: ರಾಜ್ಯ ಬಿಜೆಪಿಯಲ್ಲಿನ ಅಂತಃಕಲಹಕ್ಕೆ ಅದರಲ್ಲೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಆಟಾಟೋಪವನ್ನು ಅಂತ್ಯ ಕಾಣಿಸಲು ನಿರ್ಧರಿಸಿರುವ ಬಿಜೆಪಿ
ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಅವರು ಯಡಿಯೂರಪ್ಪ ಜುಟ್ಟನ್ನು ಪಕ್ಷದ ಮತ್ತೊಬ್ಬ ಹಿರಿಯ ನಾಯಕ ಅರುಣ್ ಜೇಟ್ಲಿ ಕೈಗೆ ನೀಡಿದ್ದಾರೆ ಎನ್ನಲಾಗಿದೆ.

ಯಡಿಯೂರಪ್ಪ ವಿರುದ್ಧ ದಾಖಲಾಗಿರುವ ಕೋರ್ಟ್ ಕೇಸುಗಳ ಸಾಧಕ-ಬಾಧಕಗಳು ಏನು? ಪಕ್ಷದ ವರ್ಚಸ್ಸಿನ ಮೇಲೆ ಅದು ಬೀಳಬಹುದಾದ ಪರಿಣಾಮವೇನು? ಕೇಸು ಕ್ಲೋಸ್ ಆಗಲು ಎಷ್ಟು ಕಾಲಾವಧಿ ತೆಗೆದುಕೊಳ್ಳಬಹುದು ಇವೇ ಮುಂತಾದ ವಿಷಯಗಳ ಬಗ್ಗೆ ಪರಾಮರ್ಶಿಸುವಂತೆ ರಾಜ್ಯಸಭೆ ಪ್ರತಿಪಕ್ಷದ ನಾಯಕ, ಪ್ರಕಾಂಡ ಕಾನೂನು ಪಂಡಿತ ಅರುಣ್ ಜೇಟ್ಲಿಗೆ ಸ್ವತಃ ಅಡ್ವಾಣಿ ಅವರೇ ಸೂಚಿಸಿದ್ದಾರೆ ಎನ್ನಲಾಗಿದೆ.

ಈ ಮಾಸಾಂತ್ಯ ಜೇಟ್ಲಿ ವರದಿ ನೀಡಬಹುದು ಎಂದು ತಿಳಿದುಬಂದಿದೆ. ಆದರೆ ಬಿಜೆಪಿ ಹೈಕಮಾಂಡ್ ಇಂತಹ ಕ್ರಮ ಕೈಗೊಳ್ಳಲು ಇಷ್ಟು ವಿಳಂಬ ಮಾಡಿದ್ದೇಕೆ ಎಂಬುದು ಅರ್ಥವಾಗದ ಪ್ರಶ್ನೆಯಾಗಿದೆ. ಯಡಿಯೂರಪ್ಪ ವಿರುದ್ಧ ಒಂದೊಂದೇ ಕೇಸು ದಾಖಲಾಗುತ್ತಿದ್ದಂತೆ ಹೈಕಮಾಂಡ್ ಎಚ್ಚೆತ್ತು ಅವುಗಳನ್ನು ಪರಾಮರ್ಶಿಬಹುದಿತ್ತು ಎಂಬ ಟೀಕೆಗಳೂ ಕೇಳಿಬರುತ್ತಿವೆ.

ಅದೇನೇ ಇರಲಿ cross roadsನಲ್ಲಿರುವ ಯಡಿಯೂರಪ್ಪ ಜಾರಿಬಿದ್ದ ಜಾಣ ಆಗುತ್ತಾರೋ ಅಥವಾ ಸಿಎಂ ಖುರ್ಚಿಗೇರುವ ಗಮ್ಯ ಪೂರೈಸಿಕೊಳ್ಳುತ್ತಾರೋ ಎಂಬುದು ಕುತೂಹಲಕಾರಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+