ವಿಜಯವಾಣಿ ಏ.1 ಲೋಕಾರ್ಪಣೆ, ಏ.2 ಮನೆ ಮನೆಗೆ

Posted By:
Subscribe to Oneindia Kannada
Vijayavani Launch
ಬೆಂಗಳೂರು, ಮಾ.24: ವಿಜಯ ಸಂಕೇಶ್ವರ ಅವರ ಹೊಸ ಪತ್ರಿಕೆ 'ವಿಜಯವಾಣಿ' ಎಂಬ ಹೆಸರಿನಲ್ಲೇ ಹೊರಬರಲಿದೆ ಎಂದು ಒನ್ ಇಂಡಿಯಾ ಕನ್ನಡದಲ್ಲಿ ಪ್ರಕಟಿಸಿದ್ದ ಸುದ್ದಿ ನೀವೆಲ್ಲ ಓದಿರುತ್ತೀರಾ. ಈಗ ವಿಆರ್ ಎಲ್ ಮೀಡಿಯಾ ಲಿ ಕಡೆಯಿಂದ ಅಧಿಕೃತವಾಗಿ ಆಹ್ವಾನ ಬಂದಿದೆ. ವಿಆರ್ ಎಲ್ ಸಂಸ್ಥೆ ಚೇರ್ ಮನ್ ವಿಜಯ ಸಂಕೇಶ್ವರ ಅವರ ಕರೆಯೋಲೆ ಇಲ್ಲಿದೆ ಓದಿಕೊಳ್ಳಿ...

ಆದರದ ಆಹ್ವಾನ

ನಿಮ್ಮ ಬಹು ದಿನಗಳ ನಿರೀಕ್ಷೆ ಸಾಕಾರಗೊಳ್ಳುತ್ತಿದೆ...ಸುದ್ದಿಲೋಕದಲ್ಲಿ ಹೊಸ ಹೆಜ್ಜೆ ಇಡಲು ನಾವು ಸಜ್ಜಾಗಿದ್ದೇವೆ, ರಾಷ್ಟ್ರಹಿತದ ದೃಷ್ಟಿ, ಜನಪರ ಕಾಳಜಿ, ಸಮಾಜಮುಖಿ ಚಿಂತನೆಗಳೊಂದಿಗೆ 'ವಿಜಯವಾಣಿ' ಪತ್ರಿಕೆಯನ್ನು ಸಮಸ್ತ ಕನ್ನಡ ಕುಲಕೋಟಿಯ ಕೈಗಿಡಲು ಸಂಕಲ್ಪಿಸಿದ್ದೇವೆ. ಹೊಸ ರೂಪ, ನವೀನ ವಿನ್ಯಾಸದ ಪತ್ರಿಕೆ ಎಲ್ಲರ ಕೈಸೇರಲು ಮುನ್ನಡಿ ಬರೆಯುವ ಅಮೃತ ಘಳಿಗೆ ಶ್ರೀರಾಮನವಮಿ, ಏಪ್ರಿಲ್ 1 ಭಾನುವಾರ.

ಆ ದಿನ ಬೆಳಗ್ಗೆ 10 ರಿಂದ ಸಾಯಂಕಾಲ 7 ರವರೆಗೆ ನೀವು ನಿಮ್ಮ ಅನುಕೂಲದ ವೇಳೆಗೆ ನಮ್ಮ ಕಚೇರಿಗೆ ಆಗಮಿಸಿ ಶುಭ ಹಾರೈಸಿದರೆ ನಮಗದೇ ಶಕ್ತಿ, ನಾಡ ಜನರ ಪ್ರೀತಿ ವಿಶ್ವಾಸಕ್ಕೆ ನಾವು ಚಿರಋಣಿ. ಏಪ್ರಿಲ್ 2, 2012 ಸೋಮವಾರ ಮುಂಜಾವಿಗೆ ಮುನ್ನ ನಿಮ್ಮ ಮನೆ ಹೊಸ್ತಿಲಲ್ಲಿ ವಿಜಯವಾಣಿ.

ವಿಜಯ್ ಸಂಕೇಶ್ವರ- ಚೇರ್ ಮನ್
ಆನಂದ ಸಂಕೇಶ್ವರ-ವ್ಯವಸ್ಥಾಪಕ ನಿರ್ದೇಶಕ

ಕಚೇರಿ ವಿಳಾಸ: 24, ಶ್ರೀರಾಮ್ ಟವರ್ಸ್, 1 ನೇ ಮಹಡಿ, 5ನೇ ಮುಖ್ಯರಸ್ತೆ
ಕೆಪಿ ಪುಟ್ಟಣ್ಣ ಚೆಟ್ಟಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು-560 018
ದೂ: (080) 2661 8771
ಇಮೇಲ್ : vijayavani@vrlmedia.com

ಹುಬ್ಬಳ್ಳಿ, ಬಿಜಾಪುರ ಹಾಗೂ ಮಂಗಳೂರಿನಿಂದ ಏಕಕಾಲಕ್ಕೆ ನಾಲ್ಕು ಆವೃತ್ತಿಗಳು ಏ.1 ರಂದು ಓದುಗರ ಕೈ ಸೇರಲಿದೆ. ಸಂಕೇಶ್ವರ ಅವರ ಅಂದಿನ ವಿಜಯ ಕರ್ನಾಟಕವನ್ನು ಲೋಕಾರ್ಪಣೆ ಮಾಡಿದ್ದ ಖ್ಯಾತ ಸಾಹಿತಿ ಎಸ್ಎಲ್ ಭೈರಪ್ಪ ಅವರು 'ವಿಜಯವಾಣಿ' ಉದ್ಘಾಟನೆಗೂ ಬರುತ್ತಾರೋ ಇಲ್ಲವೋ ಸ್ಪಷ್ಟವಾಗಿಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Businessmen Vijay Sankeshwara's new venture VRL Media house's Vijyavani kannada daily is due to lunch on April 1. VRL Media has already posted invitation in social media netwroks about inauguration function.
Please Wait while comments are loading...