ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಳೆಕೊಯ್ಲು ಇರದ ಮನೆಗೆ ವಿದ್ಯುತ್, ನೀರು ಇಲ್ಲ!

By Mahesh
|
Google Oneindia Kannada News

Rainwater Harvesting Mandatory
ಬೆಂಗಳೂರು, ಮಾ.24: ಮಳೆ ನೀರು ಕೊಯ್ಲು ಪದ್ಧತಿ ಅಳವಡಿಸಿಕೊಳ್ಳದಿದ್ದರೆ ಏ.1 ರಿಂದ ನಿಮ್ಮ ಮನೆಗೆ ನೀರು, ವಿದ್ಯುತ್ ಸಂಪರ್ಕ ಸಿಗುವುದಿಲ್ಲ ಎಂದು ಬೆಂಗಳೂರು ಜಲ ಮಂಡಳಿ ಎಚ್ಚರಿಸಿದೆ. ಮಳೆ ಕೊಯ್ಲಿ ಕಡ್ಡಾಯವಾಗಿದ್ದರೂ ಜಾರಿಗೊಳಿಸಲು ವಿಫಲರಾಗಿರುವ ಮನೆ ಮಾಲೀಕರ ವಿರುದ್ಧ ಜಲಮಂಡಳಿ ಕಟ್ಟು ನಿಟ್ಟಿನ ಕ್ರಮ ಜರುಗಿಸಲು ಸಿದ್ಧತೆ ನಡೆಸಿದೆ.

ರಾಜ್ಯ ಸರ್ಕಾರ ಹೊರಡಿಸಿರುವ ನಿಯಮಾವಳಿಯ ಪ್ರಕಾರ ಬೆಂಗಳೂರಿನಲ್ಲಿ 60 X 40 ಅಡಿ ವಿಸ್ತೀರ್ಣದ ಮನೆ ಅಥವಾ ಅದಕ್ಕಿಂತಲೂ ದೊಡ್ಡ ಮನೆಗಳಲ್ಲಿ ಮಳೆಕೊಯ್ಲು ಪದ್ಧತೆ ಅಳವಡಿಸುವುದು ಕಡ್ಡಾಯವಾಗಿದೆ.

ಬೆಂಗಳೂರಿನಲ್ಲಿ 60 X 40 ಅಡಿ ವಿಸ್ತೀರ್ಣದ ಸುಮಾರು 55 ಸಾವಿರ ಮನೆಗಳಿದೆ. ಅವುಗಳಲ್ಲಿ 37,511 ಮನೆಗಳಲ್ಲಿ ಮಾತ್ರ ಮಳೆ ನೀರು ಕೊಯ್ಲು ಪದ್ಧತಿ ಅಳವಡಿಸಲಾಗಿದೆ.

ಉಳಿದ 17,480 ಮನೆಗಳ ಮಾಲೀಕರು ಮಳೆ ಕೊಯ್ಲು ಪದ್ಧತಿ ಅಳವಡಿಸಿಲ್ಲ ಎಂದು ಬಿಡಬ್ಲ್ಯೂ ಎಸ್ ಎಸ್ ಬಿ ಮುಖ್ಯ ಇಂಜಿನಿಯರ್ ವೆಂಕಟರಾಜು ಮಾಹಿತಿ ನೀಡಿದರು. [ಮಳೆಕೊಯ್ಲು ಮಾಡುವ ಸರಳ ವಿಧಾನ ಹೇಗೆ? ಓದಿ]

ನೀರಿಗಾಗಿ ಹಾಹಾಕಾರ : ಮಳೆಕೊಯ್ಲು ಬಗ್ಗೆ ಹಲವು ಬಾರಿ ಪ್ರಾತ್ಯಾಕ್ಷಿಕೆ ನೀಡಿ ಮನೆ ಮಾಲೀಕರನ್ನು ಒಲಿಸಲು ಯತ್ನಿಸಿ ನಮ್ಮ ಅಧಿಕಾರಿಗಳು ವಿಫಲರಾಗಿದ್ದಾರೆ. ಮುಂದಿನ ದಿನಗಳಲ್ಲಿ ನೀರನ ಬರ ಎದುರಿಸಲು ಮಳೆ ಕೊಯ್ಲು ಪದ್ಧತಿಯೊಂದೇ ಮಾರ್ಗ. ಏ.1 ರೊಳಗೆ ಮನೆ ಮಾಲೀಕರು ಎಚ್ಚೆತ್ತುಕೊಂಡು ಮಳೆಕೊಯ್ಲು ಪದ್ಧತಿ ಅಳವಡಿಕೆಗೆ ಮನಸ್ಸು ಮಾಡಿದರೆ ಅವರಿಗೆ ಕಾಲಾವಕಾಶ ನೀಡಲಾಗುವುದು.

ಇಲ್ಲದಿದ್ದರೆ ಏ.1 ರಿಂದಲೇ ನೀರು, ವಿದ್ಯುತ್, ಒಳಚರಂಡಿ ವ್ಯವಸ್ಥೆಗಳನ್ನು ಕಡಿತಗೊಳಿಸಲಾಗುತ್ತದೆ. ಹಾಗೂ ಪುನರ್ ಜೋಡಣೆ ವೆಚ್ಚವನ್ನು ಮನೆ ಮಾಲೀಕರೆ ಭರಿಸಬೇಕಾಗುತ್ತದೆ ಎಂದು ಅಧಿಕಾರಿ ವೆಂಕಟರಾಜು ಹೇಳಿದ್ದಾರೆ.

English summary
Rainwater Harvesting(RWH) in residential sites measuring (60X40) is made mandatory in Bangalore said BBMP officials today(March.24). The new rule will be applicable from April 1 and residents who fails to install RWH will attract heavy fine with no power, no water supply.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X