ಯಡಿಯೂರಪ್ಪ ಉಚ್ಚಾಟನೆಗೆ ಸಿಎಂ ಸದಾ ಲಿಖಿತ ದೂರು

ಈ ನಡುವೆ ಮುಖ್ಯಮಂತ್ರಿ ಸದಾನಂದ ಗೌಡ, ಪಕ್ಷದ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಅವರು ಪಕ್ಷದ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿಯನ್ನು ಅವರ ತೀನ್ ಮೂರ್ತಿ ಭವನದಲ್ಲಿ ಭೇಟಿ ಮಾಡಿ ತಮ್ಮ ಮನವಿ ಸಲ್ಲಿಸಿದ್ದಾರೆ.
ಯಡಿಯೂರಪ್ಪ ವಜಾಕ್ಕೆ ಆಗ್ರಹ: ಶಾಸಕರು, ಸಚಿವರನ್ನು ಹೈಜಾಕ್ ಮಾಡಿ ರೆಸಾರ್ಟ್ ಗೆ ಕರೆದುಕೊಂಡು ಹೋಗಿದ್ದು ತಪ್ಪು. ಪಕ್ಷದ ವಿರೋಧದ ನಡುವೆ ಪುಟ್ಟಸ್ವಾಮಿ ಅವರನ್ನು ರಾಜ್ಯಸಭೆ ಚುನಾವಣೆಗೆ ಇಳಿಸಿ ಪಕ್ಷ ವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಯಡಿಯೂರಪ್ಪ ಹಾಗೂ ಅವರ ಸಂಗಡಿಗರನ್ನು ಪಕ್ಷದಿಂದ ವಜಾಗೊಳಿಸಬೇಕು ಎಂದು ಸದಾನಂದ ಗೌಡ ಆಗ್ರಹಿಸಿದ್ದಾರೆ.
ಎಲ್ ಕೆ ಆಡ್ವಾಣಿ, ಸುಷ್ಮಾ ಸ್ವರಾಜ್, ರಾಜ್ ನಾಥ್ ಸಿಂಗ್, ಮುರಳಿ ಮನೋಹರ್ ಜೋಶಿಮುಂತಾದ ನಾಯಕರನ್ನು ಭೇಟಿ ಮಾಡುತ್ತೇವೆ ಎಂದು ಸದಾನಂದ ಗೌಡ ಹೇಳಿದರು.
ಬಜೆಟ್ ವರ್ಚಸ್ಸು ಹೆಚ್ಚಿಸಿದೆ: ಕರ್ನಾಟಕ ಬಜೆಟ್ 2012 ಪಕ್ಷದ ವರ್ಚಸ್ಸು ಹೆಚ್ಚಿಸಿದೆ. ಪ್ರತಿಪಕ್ಷ ಕೂಡಾ ಮೆಚ್ಚುಗೆ ಸೂಚಿಸಿದೆ. ವಿಶೇಷವಾಗಿ ಹಿಂದುಳಿದ ವರ್ಗದವರಿಗೆ ಆದ್ಯತೆ ನೀಡಲಾಗಿದೆ.
ಹಿಂದುಳಿದ ವರ್ಗದವರನ್ನು ಮುಖ್ಯವಾಹಿನಿ ಕರೆ ತರುವ ದೇವರಾಜ ಅರಸು ಅವರ ಕನಸು ನನಸು ಮಾಡಲು ಸಂಕಲ್ಪ ಕೈಗೊಳ್ಳಲಾಗಿದೆ ಎಂದರು.
ಕೆಎಸ್ ಈಶ್ವರಪ್ಪ,ಸುರೇಶ್ ಕುಮಾರ್, ರಾಮದಾಸ್ ಮುಂತಾದ ಮುಖಂಡರು ಸಿಎಂ ಸದಾನಂದ ಗೌಡರಿಗೆ ಸಾಥ್ ನೀಡುತ್ತಿದ್ದಾರೆ. ಸಿಎಂ ಪರ ಸದಾ ಬ್ಯಾಟಿಂಗ್ ಮಾಡುತ್ತಿರುವ ಜಾರಕಿಹೊಳಿ ಎಲ್ಲಿ? ಉತ್ತರ ಇಲ್ಲಿದೆ...












Click it and Unblock the Notifications