ಸದಾನಂದ ಗೌಡರಿಂದ ಚೊಚ್ಚಲ ರಾಜ್ಯ ಬಜೆಟ್ 2012-13

ಚುನಾವಣೆಯ ಕಣದಲ್ಲಿನ ಸೋಲು ಒಂದೆಡೆಯಾದರೆ, ತಮ್ಮ ಪಕ್ಷದಲ್ಲಿಯೇ ಬಜೆಟ್ ಮಂಡನೆ ಕುರಿತಂತೆ ಎದುರಿಸಿದ ಎಲ್ಲ ಅಡೆತಡೆಗಳು, ತಾತ್ಕಾಲಿಕವಾಗಿಯಾದರೂ ನಿವಾರಿಸಿಕೊಂಡಿರುವ ಸದಾನಂದ ಗೌಡರು ಬಜೆಟ್ ಮಂಡಿಸಲು ಈಗ ವಿಧಾನಸೌಧಕ್ಕೆ ಆಗಮಿಸಿದ್ದಾರೆ.
ಬಜೆಟ್ಟಿಗೆ ಸಂಬಂಧಿಸಿದಂತೆ ಬಲಗೈಯಂತಿದ್ದ ದಿ.ಡಾ. ಆಚಾರ್ಯ ಅವರ ಅನುಪಸ್ಥಿತಿಯಲ್ಲಿ ಗೌಡರು ಬಜೆಟ್ ಮಂಡಿಸುತ್ತಿದ್ದು, ಯಾವ ರೀತಿ ಮಂಡಿಸಲಿದ್ದಾರೆ, ಏನೇನು ಮಂಡಿಗೆ ತಿನ್ನಿಸಲಿದ್ದಾರೆ ಎಂದು ಜನರು ಮಾತ್ರವಲ್ಲ ರಾಜಕಾರಣಿಗಳು ಕೂಡ ಎದಿರುನೋಡುತ್ತಿದ್ದಾರೆ.
ಎಂದಿನಂತೆ ಒನ್ಇಂಡಿಯಾ ಕನ್ನಡ ಕರ್ನಾಟಕ ಬಜೆಟ್ 2012-13ರ ಮುಖ್ಯಾಂಶಗಳನ್ನು ಕ್ಷಣಕ್ಷಣಕ್ಕೆ ನೀಡಲಿದೆ. ಬಜೆಟ್ಟಿಗೆ ಸಂಬಂಧಿಸಿದಂತೆ ಎಲ್ಲ ವಿವರಗಳನ್ನು ನಿಮ್ಮ ಮುಂದೆ ನೀಡಲಿದ್ದೇವೆ. ನೋಡುತ್ತಿರಿ.












Click it and Unblock the Notifications