• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದೇಗುಲಗಳಿಗೆ ಅನುದಾನ; ಯಡ್ಡಿ ಹಾದಿಯಲ್ಲೇ ಸದಾ

By Mahesh
|
ಬೆಂಗಳೂರು, ಮಾ.21: 2008ರಿಂದ ಈವರೆಗೆ ರಾಜ್ಯದ ದೇವಾಲಯಗಳಿಗೆ ಸುಮಾರು 570 ಕೋಟಿ ರೂಗಳನ್ನು ದಯಪಾಲಿಸಿರುವ ಬಿಜೆಪಿ ಸರ್ಕಾರ, ಪ್ರಸಕ್ತ ನಲ್ಲೂ ಜನಸಾಮಾನ್ಯರಿಗಿಂತಲೂ ದೇವರುಗಳಿಗೇ ಹೆಚ್ಚು ಅನುದಾನ ನೀಡುವ ಮೂಲಕ ಸಾಧನೆ ಮೆರೆದಿದೆ.

ಯಡಿಯೂರಪ್ಪನವರ ಹಾದಿಯಲ್ಲೆ ನಡೆದ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಪ್ರಸಕ್ತ ಬಜೆಟ್ ನಲ್ಲೂ ದೇವಾಲಯಗಳ ನಿರ್ಮಾಣಕ್ಕೆ ದುರಸ್ತಿಗೆ ಮತ್ತಷ್ಟು ನೆರವು ಒದಗಿಸಿದ್ದಾರೆ. ಪರಿಶಿಷ್ಟ ಜಾತಿ ಪಂಗಡಗಳ ಅಭಿವೃದ್ಧಿಗೆ ಅನುದಾನ, ಹಿಂದುಳಿದ ವರ್ಗಗಳಿಗೆ ಅನುದಾನ, ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಅನುದಾನ ನೀಡುವಲ್ಲಿ ಕೂಡಾ ಯಡಿಯೂರಪ್ಪ ಅವರನ್ನೇ ಸದಾನಂದ ಅನುಸರಿಸಿದ್ದಾರೆ.

ದೇಗುಲ, ಮಠಗಳಿಗೆ ಅನುದಾನ ಪಟ್ಟಿ ಇಂತಿದೆ:
* ಕಾಗಿನೆಲೆ ಕನಕ ಪೀಠಕ್ಕೆ 6 ಕೋಟಿ, ಕನಕ ಭವನಕ್ಕೆ 1 ಕೋಟಿ.
* ಕನಕ ಅಧ್ಯಯನ ಪೀಠಕ್ಕೆ 1 ಕೋಟಿ.
* ಬಾಳೆಹೊನ್ನೂರಿನ ರಂಭಾಪುರಿ ಪೀಠಕ್ಕೆ 2 ಕೋಟಿ
* ತಿಪಟೂರಿನ ಕಾಡಸಿದ್ದೇಶ್ವರ ಮಠಕ್ಕೆ 1 ಕೋಟಿ
* ವಿಶ್ವಕರ್ಮ ಸಮುದಾಯ ಟ್ರಸ್ಟ್ ಗೆ 1 ಕೋಟಿ ರು
* ಬಲಿಜ ಸಮುದಾಯ ಅಭಿವೃದ್ಧಿಗೆ 1 ಕೋಟಿ ರು
* ಹಿಂದುಳಿದ ವರ್ಗಗಳ ಒಕ್ಕೂಟದ ದಶಮಾನೋತ್ಸವಕ್ಕೆ 50 ಲಕ್ಷ ರು
* ಗುಲ್ಬರ್ಗಾ ವಿವಿ ಹಡಪದ ಅಧ್ಯಯನ ಪೀಠಕ್ಕೆ 1 ಕೋಟಿ
* ಹೊಸದುರ್ಗದ ಉಪ್ಪಾರ ಜನಾಂಗ ಅಭಿವೃದ್ಧಿಗೆ 1 ಕೋಟಿ ರು
* ಕ್ಷತ್ರಿಯ ಸಮಾಜದ ಅಂಬಾಭವಾನಿನಿಲಯಕ್ಕೆ 2 ಕೋಟಿ
* ವಿಶ್ವಗಾಣಿಗರ ಕೇಂದ್ರಕ್ಕೆ 1 ಕೋಟಿ
* ಬೆಂಗಳೂರಿನ ಕನಕ ಸ್ಮಾರಕ ಭವನಕ್ಕೆ 1 ಕೋಟಿ
* ಹೇಮಾ ವೇಮಾ ಸದ್ಭಾವನಾ ಪೀಠ ಹಿರೇ ಹೊಸಹಳ್ಳಿ ಭವನಕ್ಕೆ 1 ಕೋಟಿ
* ಕೊರಟಗೆರೆ ಅನ್ನಪೂರ್ಣೇಶ್ವರಿ ಟ್ರಸ್ಟ್ ದೇಗುಲ 1 ಕೋಟಿ
* ಶಂಕರಾಚಾರ್ಯ ಮಹಾಸಂಸ್ಥಾನಕ್ಕೆ 2 ಕೋಟಿ ರು
* ಅಂಬಿಗರ ಚೌಡಯ್ಯ ಭವನಕ್ಕೆ 1ಕೋಟಿ
* ಜೇವರ್ಗಿ ಮರುಳ ಶಂಕರ ಪೀಠಕ್ಕೆ 1 ಕೋಟಿ
* ಮೈಸೂರು ಸಂದೇಶ ಭವನಕ್ಕೆ 2 ಕೋಟಿ
* ಬೆಂಗಳೂರಿನ ಭಗಿರಥ ಸಮಾಜಕ್ಕೆ 1 ಕೋಟಿ
* ನೆಲಮಂಗಲದ ಮಹಾಲಕ್ಷ್ಮಿ ಟ್ರಸ್ಟ್ ಗೆ 1 ಕೋಟಿ
* ತಿಗಳ ಸಮಾಜ ಅಭಿವೃದ್ಧಿಗೆ ಕ್ಕೆ 1 ಕೋಟಿ ರು
* ಸೊಮವಂಶ ಆರ್ಯ ಕ್ಷತ್ರೀಯ ವಿದ್ಯಾರ್ಥಿ ಭವನಕ್ಕೆ 50 ಲಕ್ಷ ರು
* ತೊಗಟವೀರ ಕ್ಷತ್ರಿಯ ಸಂಘಟನೆಗೆ 1 ಕೋಟಿ
* ಆರ್ಯ ಈಡಿಗ ಸಂಸ್ಥಾನ ಸೋಲೂರು 1 ಕೋಟಿ
* ರಾಜ್ಯ ಮಡಿವಾಳ ಸಮಾಜಕ್ಕೆ 1 ಕೋಟಿ
* ಕೊಪ್ಪಳ ನಗರದ ಗವಿಸಿದ್ದೇಶ್ವರ ಮಠಕ್ಕೆ 50 ಲಕ್ಷ ರೂ.ಗಳ ಅನುದಾನ
* ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಪೀಠಕ್ಕೆ 2 ಕೋಟಿ
* ತಿಪಟೂರು ತಾಲ್ಲೂಕಿನ ಕಾಡಸಿದ್ಧೇಶ್ವರ ಶ್ರೀ ಮಠಕ್ಕೆ 1 ಕೋಟಿ ರು
* ಬೆಂಗಳೂರಿನ ಕೆಂಗೇರಿ ಬಳಿ ಇರುವ ರಾಮೋಹಳ್ಳಿ ಶ್ರೀ ಸಿದ್ದಾರೂಢ ಪೀಠಕ್ಕೆ 2 ಕೋಟಿ ರು
* ಹೊರರಾಜ್ಯದ ಛತ್ರಗಳ ನಿರ್ವಹಣೆಗಾಗಿ 10 ಕೋಟಿ ರು.
* ರುದ್ರಭೂಮಿ ನಿರ್ವಹಣೆಗಾಗಿ 10 ಕೋಟಿ ರು.
* ಕೊಪ್ಪಳ ನಗರದ ಗವಿಸಿದ್ದೇಶ್ವರ ಮಠಕ್ಕೆ 50 ಲಕ್ಷ ರು.ಗಳ ಅನುದಾನ

ಪರಿಶಿಷ್ಟ ಜಾತಿ ಪಂಗಡಗಳ ಅಭಿವೃದ್ಧಿಗೆ ಅನುದಾನ: ಶ್ರೀ ಚಲವಾದಿ, ಶ್ರೀ ಆದಿಜಾಂಬವ, ಶ್ರೀ ಮಹರ್ಷಿ ವಾಲ್ಮೀಕಿ, ಶ್ರೀ ಮಾದಾರ ಚೆನ್ನಯ್ಯ, ಶ್ರೀ ಸಿದ್ಧರಾಮೇಶ್ವರ ಸ್ವಾಮಿ ಭೋವಿ, ಶ್ರೀ ಕೇತೇಶ್ವರ ಮೇದಾರ ಇತ್ಯಾದಿ ಸಮುದಾಯಗಳ ಕ್ಷೇಮಾಭಿವೃದ್ಧಿ ಮತ್ತು ಗುರುಪೀಠಗಳ ಶೈಕ್ಷಣಿಕ ಮೂಲಭೂತ ಸೌಕರ್ಯ ಒದಗಿಸಲು 20 ಕೋಟಿ ರೂ.ಗಳನ್ನು ಒದಗಿಸಲಾಗುವುದು.

ಹಿಂದುಳಿದ ವರ್ಗಗಳಿಗೆ ಅನುದಾನ: ಹಿಂದುಳಿದ ವರ್ಗಗಳ ಸಮುದಾಯಗಳಾದ ಕಮ್ಮಾರ, ಸವಿತಾ ಸಮಾಜ, ಗಾಣಿಗ ಸಮಾಜ, ಮಡಿವಾಳ ಸಮಾಜ(ಅಗಸ), ನೇಕಾರ, ಕುಂಬಾರ, ಬಡಗಿ ವಿಶ್ವಕರ್ಮ, ದರ್ಜಿ, ಕುರುಬ, ಉಪ್ಪಾರ, ಬಲಿಜ (ಕೈವಾರ ಶ್ರೀ ತಾತಯ್ಯ ಕ್ಷೇತ್ರ), ದೇವಾಂಗ, ವಹ್ನಿಕುಲ, ವೇಮನ(ರೆಡ್ಡಿ) ಸಂಸ್ಥಾನ, ಆರ್ಯ ಈಡಿಗ, ರಾಜು ಕ್ಷತ್ರಿಯ, ಮರಾಠ ಕ್ಷತ್ರಿಯ, ತೊಗಟವೀರ, ಪದ್ಮಸಾಲಿ, ಗಂಗಾಮತಸ್ಥರು, ಕುಂಚಟಿಗ, ಹೆಳವ, ಯಾದವ(ಗೊಲ್ಲ), ಇತ್ಯಾದಿ ಸಮುದಾಯಗಳ ವಿವಿಧ ಅಭಿವೃದ್ಧಿಗೆ ಹಾಗೂ ಗುರುಪೀಠಗಳ ಶೈಕ್ಷಣಿಕ ಮೂಲಭೂತ ಸೌಕರ್ಯಕ್ಕಾಗಿ 75 ಕೋಟಿ ರೂ.ಗಳನ್ನು
ನೀಡಲಾಗುವುದು.

ಅಲ್ಪಸಂಖ್ಯಾತರ ಕಲ್ಯಾಣ: ವಿವಿಧ ಚಟುವಟಿಕೆಗಳಿಗಾಗಿ ಒಟ್ಟು 235 ಕೋಟಿ ರೂ.ಗಳ ಅನುದಾನವನ್ನು ಕಲ್ಪಿಸಲಾಗಿದೆ.

* ಕ್ರಿಶ್ಚಿಯನ್ ಸಮುದಾಯದ ಕಲ್ಯಾಣ ಕಾರ್ಯಕ್ರಮಗಳ ಉತ್ತೇಜನಕ್ಕಾಗಿಯೇ 50 ಕೋಟಿ ರೂ.ಗಳನ್ನು ಪ್ರತ್ಯೇಕವಾಗಿ ಒದಗಿಸಲಾಗುತ್ತಿದೆ.
* ಅಲ್ಪಸಂಖ್ಯಾತರಿಗೆ ಸಂಬಂಧಿಸಿದ ಯಾತ್ರಾ ಸ್ಥಳಗಳಲ್ಲಿ ಮೂಲಸೌಲಭ್ಯಗಳನ್ನು ಉತ್ತಮಗೊಳಿಸುವುದಕ್ಕಾಗಿ 5 ಕೋಟಿ ರೂ.ಗಳ ಅನುದಾನವನ್ನು ಕಲ್ಪಿಸಲಾಗಿದೆ.

* ಶಾದಿ ಮಹಲ್ ಮತ್ತು ಸಮುದಾಯ ಭವನಗಳಿಗಾಗಿ 15 ಕೋಟಿ ರೂ. ಗಳನ್ನು, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಕಟ್ಟಡಕ್ಕಾಗಿ 55 ಕೋಟಿ ರೂಗಳನ್ನು ಹಾಗೂ ಕೌಶಲ್ಯ ಅಭಿವೃದ್ಧಿಗಾಗಿ 10 ಕೋಟಿ ರೂ.ಗಳ ಅನುದಾನವನ್ನು ಕಲ್ಪಿಸಲಾಗಿದೆ.
* ಹಜ್ ಘರ್ ನಿರ್ಮಾಣಕ್ಕಾಗಿ 10 ಕೋಟಿ ರೂ.ಗಳನ್ನು ಒದಗಿಸಲಾಗುವುದು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ದೇಗುಲ ಸುದ್ದಿಗಳುView All

English summary
Karnataka CM DV Sadananda Gowda treads Yeddyurappas Path. A comprehensive list of Temples, Mutts and Community centers which get grants in the Budget. Over all, it is an attempt to love all, please all budget by BJP leader DVS

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more