ಸೋತು ಗೆದ್ದ ಯಡಿಯೂರಪ್ಪ; ಹೈಕಮಾಂಡಿಗೆ ಮಾರಿಹಬ್ಬ

ಇನ್ನು ಆಚಾರ್ಯರಿಲ್ಲದೆ ಸೋತುಸುಣ್ಣವಾಗಿರುವ ಸದಾನಂದ ಗೌಡರು ಕ್ಷೀಣ ದನಿಯಲ್ಲಿ ಬಜೆಟ್ ಮಂಡನೆಯಲ್ಲಿ ತೊಡಗಿದ್ದಾರೆ. ಇದಕ್ಕೆ ಯಡಿಯೂರಪ್ಪ ಪಾಳಯ ಕಾರಣವೆನ್ನಬಹುದು. ಬಜೆಟ್ ಮಂಡನೆಗೆ 'ಸದಾ'ವಕಾಶ ಕಲ್ಪಿಸಿ, ತನ್ನ ಮೇಲೆ ಗದಾಪ್ರಹಾರವಾಗದಂತೆ ನೋಡಿಕೊಂಡಿರುವ ಯಡಿಯೂರಪ್ಪ ಮುಂದಿದೆ ಮಾರಿ ಹಬ್ಬ ಎಂದು ರಣಕಹಳೆ ಮೊಳಗಿದ್ದಾರೆ.
''ಈ ಸೋಲಿನ ಹುಮ್ಮಸ್ಸಿನೊಂದಿಗೆ'' ಯಡಿಯೂರಪ್ಪ ಬಿಜೆಪಿ ಹೈಕಮಾಂಡಿಗೆ ಈ ಬಾರಿ ಭಾರಿ ತಲೆನೋವು ತರುವುದರಲ್ಲಿ ಯಾವುದೇ ಅನುಮಾನವಿಲ್ಲ.
ಇದುವರೆಗೆ ರಾಜ್ಯದಲ್ಲಿ ನಡೆದ ಉಪಚುನಾವಣೆಗಳಲ್ಲಿ ಸ್ವತಃ ನಿರ್ಣಾಯಕರಾಗಿ ಪಕ್ಷಕ್ಕೆ ಗೆಲುವು ತಂದುಕೊಡುತ್ತಿದ್ದ ಯಡಿಯೂರಪ್ಪ ಮತ್ತೊಮ್ಮೆ ತಾನಿಲ್ಲದ ಬಿಜೆಪಿ ಶೂನ್ಯ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ತನ್ನ ಬದ್ಧವೈರಿ ಅನಂತಕುಮಾರ್ ಮೂಲಕ ಸದಾನಂದರು ಕಳಿಸಿದ್ದ ಸಂದೇಶವನ್ನು ನಿರ್ವೀರ್ಯಗೊಳಿಸಿರುವ ಯಡಿಯೂರಪ್ಪ, ಸದಾನಂದರಿಗೆ ಕಳೆದ ಚುನಾವಣೆಯಲ್ಲಿ ಗೆಲುವು ಸಂದಾಯವಾಗುವುದಕ್ಕೆ ತಮ್ಮ ಪ್ರಚಾರವೇ ಕಾರಣವಾಗಿತ್ತು ಎಂಬುದನ್ನೂ ಸಾಬೀತುಪಡಿಸಿದ್ದಾರೆ.












Click it and Unblock the Notifications