ಅಸೆಂಬ್ಲಿ ವಿಸರ್ಜಿಸಿ ಮನೆಗೆ ಹೋಗ್ರಿ: ಸಿದ್ದರಾಮಯ್ಯ

ವಿಧಾನ ಮಂಡಲ ಅಧಿವೇಶನ ಮಾ.20 ರಂದು ಆರಂಭಗೊಂಡಿದ್ದು, ಬಿಜೆಪಿಯ 34 ಶಾಸಕರು ಮಾತ್ರ ಹಾಜರಾಗಿರುವುದನ್ನು ಕಂಡ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಕೆಂಡಾಮಂಡಲವಾದರು.
ಸಿಎಂ ಸದಾನಂದ ಗೌಡ ಬಹುಮತ ಕಳೆದುಕೊಂಡಿದ್ದಾರೆ. ಬಿಜೆಪಿ ಮಾಜಿ ಸಿಎಂ ಅಗಲಿದ ನಾಯಕರಿಗೆ ರೆಸಾರ್ಟ್ ನಲ್ಲಿ ಕೂತು ಶ್ರದ್ಧಾಂಜಲಿ ಅರ್ಪಿಸುತ್ತಾರೆ ಎಂದು ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಎಂಥಾ ಗತಿ ಬಂತು ರಾಜ್ಯಕ್ಕೆ ಛೇ ಎಂದು ಸಿದ್ದು ಹಲುಬಿದರು.
ಪ್ರಶ್ನೋತ್ತರ ವೇಳೆಗೂ ಕೊಕ್ಕೆ: ಅಸೆಂಬ್ಲಿ ಸೆಷನ್ ನಡೆಸುವ ಬಗ್ಗೆ ನಿಯಮದ ಪ್ರಕಾರ 15 ದಿನ ಮುಂಚಿತವಾಗಿ ನೋಟಿಸ್ ನೀಡಬೇಕು. ಬಹುತೇಕ ಶಾಸಕರಿಗೆ ನೋಟಿಸ್ ತಲುಪಿಲ್ಲ.
ಇವರ ಅನುಕೂಲಕ್ಕೆ ತಕ್ಕಂತೆ ಅಧಿವೇಶನ ಕರೆಯುವುದು ಎಷ್ಟು ಸರಿ? ರಾಜ್ಯದಲ್ಲಿನ ಸಮಸ್ಯೆಗಳ ಬಗ್ಗೆ ಪ್ರಶ್ನಿಸಲು ಕಾಲಾವಕಾಶವೇ ನೀಡಂತೆ ಪ್ರಶ್ನೋತ್ತರ ವೇಳೆಯನ್ನೂ ನುಂಗಲು ಬಿಜೆಪಿ ಶಾಸಕರು ಸಿದ್ಧತೆ ನಡೆಸಿದ್ದಾರೆ ಎಂದು ಸಿದ್ದು ಗುಡುಗಿದರು.












Click it and Unblock the Notifications