ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪಗೆ ಯಾವುದೇ ಸ್ಥಾನಮಾನ ಇಲ್ಲ: ಅಡ್ವಾಣಿ

By Srinath
|
Google Oneindia Kannada News

bjp-battle-no-party-position-for-bsy-advani
ಬೆಂಗಳೂರು, ಮಾ.20: ರಾಜ್ಯ ಬಿಜೆಪಿಯಲ್ಲಿನ ಆಂತರಿಕ ಕಲಹ ಹತ್ತಲ್ಲ ಹರಿಯಲ್ಲ ಎನ್ನುವಂತಾಗಿದೆ. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಯಾವುದೇ ಸ್ಥಾನಮಾನ ನೀಡುವುದಕ್ಕೆ ನಿರೀಕ್ಷೆಯಂತೆ ಪಕ್ಷದ ವರಿಷ್ಠ ನಾಯಕ ಲಾಲಕೃಷ್ಣ ಅಡ್ವಾಣಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರು ಒಂದೋ ಪಕ್ಷದ ವರಿಷ್ಠರ ಸಲಹೆ ಕೇಳಿಕೊಂಡು ಪಕ್ಷದಲ್ಲಿ ಸುಮ್ಮನಿರಬೇಕು. ಇಲ್ಲವೇ ಪಕ್ಷ ತೊರೆಯುವ ಮೂಲಕ ತಮ್ಮ ಮುಂದಿನ ಹಾದಿ ಕಂಡುಕೊಳ್ಳಬೇಕು. ಇವೆರಡು ಬಿಟ್ಟರೆ ಯಡಿಯೂರಪ್ಪ ಅವರಿಗೆ ಅನ್ಯಮಾರ್ಗವಿಲ್ಲದಂತಾಗಿದೆ.

ಈ ನಡುವೆ ತಕ್ಷಣವೇ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಒತ್ತಾಯಿಸಿ ರೆಸಾರ್ಟ್‌ನಲ್ಲಿ ಠಿಕಾಣಿ ಹೂಡಿರುವ ಸುಮಾರು 67 ಶಾಸಕರು ತಮ್ಮ ಸಹಿ ಮಾಡಿರುವ ಪತ್ರವನ್ನು ಸೋಮವಾರ ರಾತ್ರಿ ಹೈಕಮಾಂಡ್‌ಗೆ ಕಳುಹಿಸಿಕೊಟ್ಟಿದ್ದಾರೆ. ಮಂಗಳವಾರ ಆ ಕಡೆಯ ಪ್ರತಿಕ್ರಿಯೆಯನ್ನು ಗಮನಿಸಿ ಅಧಿವೇಶನಕ್ಕೆ ಹಾಜರಾಗುವ ಬಗ್ಗೆ ಸ್ಪಷ್ಟ ನಿಲವು ಕೈಗೊಳ್ಳಲು ಯಡಿಯೂರಪ್ಪ ಬೆಂಬಲಿಗರು ತೀರ್ಮಾನಿಸಿದ್ದಾರೆ.

ಸದ್ಯದ ಮಾಹಿತಿ ಅನುಸಾರ ಬಿಜೆಪಿ ಹೈಕಮಾಂಡ್‌ ಮಂಗಳವಾರ ಸಭೆ ಸೇರಿ ಸಮಾಲೋಚನೆ ನಡೆಸುವ ಸಾಧ್ಯತೆಯಿರುವುದರಿಂದ ಬೆಳಗ್ಗೆ ಅಧಿವೇಶನಕ್ಕೆ ಗೈರು ಹಾಜರಾಗುವ ಬಗ್ಗೆಯೇ ಯಡಿಯೂರಪ್ಪ ಪಾಳೆಯ ಒಲವು ವ್ಯಕ್ತಪಡಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಈ ಹಿನ್ನೆಲೆಯಲ್ಲಿ ಬುಧವಾರ ರಾಜ್ಯದ 2012-13ನೇ ಸಾಲಿನ ಬಜೆಟ್‌ ಮಂಡನೆಯಾಗಲಿದೆಯೇ ಅಥವಾ ಅಡ್ಡಿ ಉಂಟಾಗಲಿದೆಯೇ ಎಂಬುದರ ಸಾಕಷ್ಟು ಕುತೂಹಲ ಕೆರಳಿಸಿದ್ದು, ಮಂಗಳವಾರ ಸಂಜೆ ವೇಳೆಗೆ ಸ್ಪಷ್ಟ ಚಿತ್ರಣ ಹೊರಬೀಳುವ ನಿರೀಕ್ಷೆಯಿದೆ.

ಸಂಜೆ ವೇಳೆಗೆ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವ ಬಗ್ಗೆ ಸ್ಪಷ್ಟ ಸಂದೇಶ ಹೈಕಮಾಂಡ್‌ನಿಂದ ಬರದಿದ್ದರೆ ಯಡಿಯೂರಪ್ಪ ಸೇರಿದಂತೆ ಅವರ ಬೆಂಬಲಿಗ ಸಚಿವರು ಹಾಗೂ ಶಾಸಕರು ರಾಜಿನಾಮೆ ನೀಡುವ ಮೂಲಕ ಬಿಕ್ಕಟ್ಟು ಉಲ್ಬಣಗೊಳಿಸುವ ತಂತ್ರ ರೂಪಿಸುತ್ತಿದ್ದಾರೆ ಎನ್ನಲಾಗಿದೆ. ಈಗಾಗಲೇ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್‌ ರಾಜ್ಯಪಾಲರಿಗೆ ದೂರು ನೀಡುವುದಾಗಿ ಎಚ್ಚರಿಕೆಯನ್ನೂ ನೀಡಿದೆ.

English summary
It seems Karnataka BJP battle will be a long drawn battle. According to sources party senior leader LK Advani is in a no mood to dole out any party position for BS Yeddyurappa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X