ರೆಸಾರ್ಟಿನಲ್ಲೆ ಆಚಾರ್ಯರಿಗೆ ಯಡಿಯೂರಪ್ಪ ಸಂತಾಪ!

ಏನಾಯಿತೆಂದರೆ ಪಕ್ಷದ ಹೈಕಮಾಂಡ್ ಆದೇಶದಂತೆ ಬಜೆಟ್ ಅಧಿವೇಶನ ಮಂಗಳವಾರ ಅಬಾಧಿತವಾಗಿ ಆರಂಭವಾಗಿದೆ. ಅಧಿವೇಶನದ ಮೊದಲ ದಿನ ರೂಢಿಯಂತೆ ನಿಧನರಾದವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುವುದು. ಅದರಂತೆ ಇತ್ತೀಚೆಗೆ ನಿಧನರಾದ ವಿಎಸ್ ಆಚಾರ್ಯರಿಗೆ ಇಂದು ಸದನದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಆ ವೇಳೆ ಆಡಳಿತಾರೂಢ ಸದಸ್ಯರ ಪೈಕಿ ಕೇವಲ 34 ಮಂದಿ ಸದನದಲ್ಲಿ ಹಾಜರಿದ್ದರು.
ಗಮನಾರ್ಹವೆಂದರೆ ಸೂಕ್ತ ಸ್ಥಾನಮಾನ ಸಿಗಲಿಲ್ಲವೆಂದು ಸೆಟೆದುಕೊಂಡಿರುವ ಯಡಿಯೂರಪ್ಪ ಪಟಾಲಂ ಶಿಸ್ತಾಗಿ ತಾವು ಉಳಿದುಕೊಂಡಿರುವ ಗೋಲ್ಡನ್ ಪಾಮ್ ರೆಸಾರ್ಟಿನಲ್ಲೇ ಅಗಲಿದ ಹಿರಿಯ ಚೇತನಕ್ಕೆ ಶ್ರದ್ಧಾಂಜಲಿ ಸಲ್ಲಿಸಿ, ಧನ್ಯರಾದರು. ಆ ಮೂಲಕ ಹೊಸ ಸಂಪ್ರದಾಯದಕ್ಕೂ ನಾಂದಿ ಹಾಡಿದರು. ಈ ಮಧ್ಯೆ, ಯಡಿಯೂರಪ್ಪನವರ 'ವರದಿಗಾರರಾಗಿ' ಉದಾಸಿ ಮತ್ತು ಜಗದೀಶ್ ಶೆಟ್ಟರ್ ಅಧಿನೇಶನದಲ್ಲಿ ಪಾಲ್ಗೊಂಡು ಅಚ್ಚರಿ ಮೂಡಿಸಿದರು. ಇವರಿಬ್ಬರನ್ನು ಹೊರತುಪಡಿಸಿ ಯಡಿಯೂರಪ್ಪ ಬಣದಿಂದ ಮತ್ಯಾರೂ ಅಧಿವೇಶನದಲ್ಲಿ ಪಾಲ್ಗೊಂಡಿಲ್ಲ.












Click it and Unblock the Notifications