67 ಶಾಸಕರ ಸಹಿ ಪತ್ರ ಹೈಕಮಾಂಡಿಗೆ ರವಾನೆ

67-mla-sign-for-yeddyurappa-basavaraj-bommai
ಬೆಂಗಳೂರು, ಮಾ.20: ಕೆಳಮನೆಯಿಂದ ಹೊರಗಾಗಿ ರೆಸಾರ್ಟಿನಲ್ಲಿ ಬೀಡುಬಿಟ್ಟಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಅವರ ಪಟಾಲಂ ಎರಡು ದಿನದಿಂದ ಬೀಡುಬಿಟ್ಟಿರುವುದು ಇಡೀ ಜಗತ್ತಿಗೆ ತಿಳಿದ ವಿಷಯ. ಇಂತಿಪ್ಪ ಯಡಿಯೂರಪ್ಪ ತಂಡಕ್ಕೆ ಮಂಗಳವಾರ ಬೆಳಗ್ಗೆ ಪಕ್ಷದ ಹೈಕಮಾಂಡ್ ನವದೆಹಲಿಯಿಂದ ಖಡಕ್ ವಾರ್ನಿಂಗ್ ನೀಡಿದ್ದೇ ತಡ, ಎಲ್ಲ ಶಾಸಕ, ಸಚಿವ ಮಹಾಶಯರು ದುಃಸ್ವಪ್ನ ಕಂಡವರಂತೆ ಬೆಚ್ಚಿಬಿದ್ದಿದ್ದಾರೆ.

ಆದರೂ ಯಡಿಯೂರಪ್ಪಗೆ ಅಖಂಡ ನಿಷ್ಠೆ ತೋರಿ ಬರೋಬ್ಬರಿ 67 ಶಾಸಕರು ಪತ್ರವೊಂದಕ್ಕೆ ಸಹಿ ಹಾಕಿದ್ದಾರೆ. 'ತಕ್ಷಣ ಶಾಸಕಾಂಗ ಸಭೆ ಕರೆಯಬೇಕು. ಯಡಿಯೂರಪ್ಪ ಅವರಿಗೆ ನಾಯಕತ್ವ ನೀಡಬೇಕು' ಎಂದು ಕೋರುವ ಆ ಪತ್ರವನ್ನು ಪಕ್ಷದ ವರಿಷ್ಠರಿಗೆ ಕಳಿಸಲಾಗಿದೆ ಎಂದು Team Yeddyurappa ವಕ್ತಾರ ಬಸವರಾಜ ಬೊಮ್ಮಾಯಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಈ ಮಧ್ಯೆ, ದೆಹಲಿ ಹೈಕಮಾಂಡ್ ಪರವಾಗಿ ಪ್ರಧಾನ್ ಸದ್ಯದಲ್ಲೇ ಬೆಂಗಳೂರಿಗೆ ಧಾವಿಸಿ ಬರುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+