ಸದಾ 'ಸಿಎಂ' ಪೀಠ ಮುಟ್ಟಿದರೆ ಹುಷಾರ್ : ಜಾರಕಿಹೊಳಿ
ಬೆಂಗಳೂರು,
ಮಾ.18: 'ಬಿಜೆಪಿ ವರಿಷ್ಠರೇ ಸದಾನಂದ ಗೌಡರ ಹೆಸರು ಸೂಚಿಸಿರುವಾಗ ಬೇರೊಬ್ಬರು ಬಜೆಟ್ ಮಂಡಿಸುವುದು ಸರಿಯಲ್ಲ. ಬಿಜೆಪಿ ಶಾಸಕರಿಂದ ಸಾಂವಿಧಾನಿಕ ಬಿಕ್ಕಟ್ಟು ಬೇಡ. ಮುಖ್ಯಮಂತ್ರಿ ಸ್ಥಾನವನ್ನು ಅನಗತ್ಯವಾಗಿ ಅಲುಗಾಡಿಸಲು ಬಯಸಿದರೆ ಪರಿಣಾಮ ನೆಟ್ಟಗಿರುವುದಿಲ್ಲ' ಎಂದು ಪೌರಾಡಳಿತ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದ್ದಾರೆ. id="toptextpromo">ಯಡಿಯೂರಪ್ಪ
ಅವರ ಕಿರುಕುಳ ಸಹಿಸೋದು ಅಸಾಧ್ಯ. ಬಜೆಟ್ ಅಧಿವೇಶನದ ನಂತರ ವಿಧಾನಸಭೆ ವಿಸರ್ಜಿಸುವುದು ಒಳಿತು. ನಾವು 20 ಜನ ಶಾಸಕರು ರಾಜೀನಾಮೆ ಸಲ್ಲಿಸಲು ತಯಾರಿದ್ದೇವೆ. ಆದ್ರೆ ಬಿಜೆಪಿ ಬಿಡುವುದಿಲ್ಲ. ಸದಾನಂದ ಗೌಡ, ಈಶ್ವರಪ್ಪ, ಅನಂತ್ ಕುಮಾರ್ ಅವರ ನಿರ್ದೇಶನದಂತೆ ಮುಂದಿನ ನಡೆ ಇಡುತ್ತೇವೆ ಎಂದು ಜಾರಕಿಹೊಳಿ ಹೇಳಿದರು. id='are-slot-1' class='oiad oi-axt oiadv'> id='top-searched-articles'>ಈ
ಮಧ್ಯೆ ಬಿಜೆಪಿ ಬಿಕ್ಕಟ್ಟಿನ ಹೊಸ ತಿರುವಿನ ಬಗ್ಗೆ ಪ್ರತಿಕ್ರಿಯಿಸಿರುವ ಡಿಬಿ ಚಂದ್ರೇಗೌಡ, 'ಬಿಜೆಪಿ ಶಾಸಕರು ಆತುರದ ನಿರ್ಧಾರ ಕೈಗೊಂಡು ಸಾಂವಿಧಾನಿಕ ಬಿಕ್ಕಟ್ಟು ನಿರ್ಮಾಣ ಮಾಡುವುದು ಸರಿಯಲ್ಲ. ಸದಾನಂದ ಗೌಡರು ಬಜೆಟ್ ಮಂಡಿಸುವುದು ಸೂಕ್ತ' ಎಂದಿದ್ದಾರೆ.











Click it and Unblock the Notifications