ಇನ್ಫಂಟ್‌ರಿಂದ ಹೈಕೋರ್ಟಲ್ಲಿ ಕೇವಿಯಟ್ ಅರ್ಜಿ
ಬೆಂಗಳೂರು,
ಮಾ. 17 : ರಾಜ್ಯದ ಪೊಲೀಸ್ ಮಹಾನಿರ್ದೇಶಕ ಶಂಕರ್ ಎಂ. ಬಿದರಿ ಅವರ ನೇಮಕಾತಿಯನ್ನು ಕೇಂದ್ರ ಆಡಳಿತ ನ್ಯಾಯಮಂಡಳಿ ರದ್ದುಪಡಿಸಿದ್ದು, ಬಿದರಿಯವರು ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇರುವುದರಿಂದ, ಸೇವಾಹಿರಿತನದಲ್ಲಿ ಅವರಿಗಿಂತ ಹಿರಿಯರಾಗಿರುವ ಎಆರ್ ಇನ್ಫಂಟ್ ಅವರು ಕರ್ನಾಟಕ ಹೈಕೋರ್ಟಿನಲ್ಲಿ ಕೇವಿಯಟ್ ಅರ್ಜಿ ಸಲ್ಲಿಸಿದ್ದಾರೆ. id="toptextpromo">ಡಿಜಿ
ಐಜಿಪಿಯಾಗಿದ್ದ ನೀಲಂ ಅಚ್ಯುತರಾವ್ ಅವರು ನ.30, 2011ರಂದು ನಿವೃತ್ತಿಯಾದನಂತರ, ಬಿದರಿಯವರಿಗಿಂತ ಸೇವೆಯಲ್ಲಿ ಹಿರಿಯರಾಗಿದ್ದ ಇನ್ಫಂಟ್ ಅವರನ್ನು ಕಡೆಗಣಿಸಿ ಯಡಿಯೂರಪ್ಪ ಸರಕಾರ ಬಿದರಿಯವರನ್ನು ಡಿಜಿ ಐಜಿಪಿಯಾಗಿ ನೇಮಿಸಿತ್ತು. ಈ ನೇಮಕಾತಿಯನ್ನು ಪ್ರಶ್ನಿಸಿ ಇನ್ಫಂಟ್ ಅವರು ನ್ಯಾಯಮಂಡಳಿಯ ಮೊರೆ ಹೋಗಿದ್ದರು. id='are-slot-1' class='oiad oi-axt oiadv'> id='top-searched-articles'>ಬಿದರಿ
ನೇಮಕಾತಿ ಆದಾಗ ಅವರ ಬಗ್ಗೆ ಕೇಂದ್ರ ಲೋಕಸೇವಾ ಆಯೋಗದಲ್ಲಿ ಸಂಪೂರ್ಣ ಮಾಹಿತಿ ಇರಲಿಲ್ಲ ಎಂಬ ಕಾರಣ ನೀಡಿ ನ್ಯಾಯಮಂಡಳಿ ಅವರ ನೇಮಕಾತಿಯನ್ನು ರದ್ದುಪಡಿಸಿ ಶುಕ್ರವಾರ, ಮಾ.16ರಂದು ಆದೇಶ ಹೊರಡಿಸಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಶಂಕರ್ ಬಿದರಿಯವರು, ತಾವು ಖಂಡಿತವಾಗಿ ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದ್ದು, ನ್ಯಾಯಮಂಡಳಿಯ ತಪ್ಪು ಗ್ರಹಿಕೆ ಮತ್ತು ತಪ್ಪು ತಿಳಿವಳಿಕೆಯ ಕುರಿತು ಹೈಕೋರ್ಟಿಗೆ ಮನವರಿಕೆ ಮಾಡಿಕೊಡುವುದಾಗಿ ಹೇಳಿದರು.











Click it and Unblock the Notifications