ರೈಲುದರ ನಿಯಂತ್ರಣ ಮಂಡಳಿಯೇ ತಕ್ಕ ಔಷಧ

rail-passenger-fares-tarrif-regulatory-authority-mooted
ನವದೆಹಲಿ, ಮಾ.15: ಹತ್ತು ವರ್ಷದ ನಂತರ ಏರಿಸಲಾಗಿದ್ದ ರೈಲು ಪ್ರಯಾಣ ದರವು ಅದಕ್ಕೆ ಕಾರಣಕರ್ತರಾದ ಸಚಿವರನ್ನೇ ಆಪೋಶನ ತೆಗೆದುಕೊಂಡಿದೆ. ಗಮನಾರ್ಹವೆಂದರೆ ಈ ಸಚಿವರು ಹೇಳಿದಂತೆ ತೀವ್ರ ನಿಗಾ ಘಟಕದಲ್ಲಿದ್ದ ರೈಲ್ವೆ ಇಲಾಖೆಗೆ ದರ ಏರಿಕೆ ಟಾನಿಕ್ ಅನಿವಾರ್ಯವಾಗಿತ್ತು.

ಈ ಮಧ್ಯೆ, ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜಿದ್ದಿಗೆ ಬಿದ್ದು ರಾಜೀನಾಮೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಹೊರೆಯನ್ನು ದೀರ್ಘಾವಧಿಯಲ್ಲಿ ಹೊರಬೇಕಾಗಿರುವುದು ಪ್ರಯಾಣಿಕರೇ ಹೊರತು ಮಮತಾ ಬ್ಯಾನರ್ಜಿ ಅಲ್ಲ ಎಂಬುದು ಕಟುವಾಸ್ತವ.

ರೈಲ್ವೆಗೆ ಚಿಕಿತ್ಸೆ ನೀಡಲು ಬೇರೆ ಮೂಲಗಳು ಇಲ್ಲವೇ ಇಲ್ಲವಾ ಎಂಬುದು ಬೇರೆ ವಿಚಾರ. ಆದರೆ ಸ್ವಲ್ಪಸ್ವಲ್ಪವೇ ಆದರೂ ಪ್ರಯಾಣ ದರ ಏರಿಕೆ ಔಚಿತ್ಯಪೂರ್ಣ ಎಂಬುದು ಆರ್ಥಿಕ- ಸಾಮಾಜಿಕ ತಜ್ಞರ ಅಭಿಮತ.

ಆದರೆ ದಿನೇಶ್ ತ್ರಿವೇದಿ ತಮ್ಮ ನಿರ್ಗಮನವನ್ನು ಮುಂದಾಲೋಚಿಸಿದ್ದರು ಎಂಬಂತೆ ಹೋಗುವ ಮುನ್ನ ರೈಲು ಪ್ರಯಾಣ ದರ ಏರಿಕೆ ಪದ್ಧತಿಯನ್ನು ನ್ಯಾಯಸಮ್ಮತಗೊಳಿಸಲು ವ್ಯವಸ್ಥೆ ಮಾಡಿಟ್ಟೇ ಹೋಗಿದ್ದಾರೆ. ರೈಲು ಪ್ರಯಾಣ ದರ ನಿಯಂತ್ರಣ ಮಂಡಳಿ ಸ್ಥಾಪನೆಯನ್ನು ಅವರು ಪ್ರಸ್ತಾಪಿಸಿದ್ದಾರೆ.

ಹಾಗೆ ನೋಡಿದರೆ ವಿದ್ಯುತ್, ದೂರವಾಣಿ ಮುಂತಾದ ಅಗತ್ಯ ಸೇವೆಗಳಿಗೆ ದರ ನಿಗದಿಪಡಿಸಲು ಪ್ರಾಧಿಕಾರಗಳು ಇವೆ. ಅದೇ ರೀತಿ ಇಡೀ ದೇಶವನ್ನು ಹಾಸುಹೊಕ್ಕಿರುವ ಅಗಾಧ ರೈಲು ಪ್ರಯಾಣದ ಬಗ್ಗೆಯೂ ಖಡಕ್ ನಿರ್ಧಾರ ತೆಗೆದುಕೊಂಡು ಆ ಪ್ರಯಾಣದ ದರ ನಿಗದಿಪಡಿಸಲು ಒಂದು ಪ್ರಾಧಿಕಾರ ಬೇಡವಾ? ಮೊದಲು ಆ ನಿಟ್ಟಿನಲ್ಲಿ ಯೋಚಿಸಿ ಎಂದು ದಿನೇಶ್ ತ್ರಿವೇದಿ ಸಾಹೇಬರು ತಮ್ಮ ಬಜೆಟ್ಟಿನಲ್ಲಿಯೇ ಕೇಂದ್ರ ಸರಕಾರಕ್ಕೆ ಎಚ್ಚರಿಸಿ ಹೋಗಿದ್ದಾರೆ.

ಸೋ, ಮಮತಾ ರಾಜಕೀಯವನ್ನು ಬದಿಗೊತ್ತಿ, ದಿನೇಶ್ ನೀಡಿರುವ ಸಮಂಜಸ ಸಲಹೆಯನ್ನು ಕೇಂದ್ರ ಸರಕಾರ ಅಂಗೀಕರಿಸಲಿದೆಯಾ? ಎಂಬ ಕುತೂಹಲ ಮೂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+