• search

ಅಖಿಲೇಶ್ ಉ.ಪ್ರದೇಶದಲ್ಲಿ ಮೈಸೂರು ಪಾಕ್ ಕಲರವ

By Srinath
Subscribe to Oneindia Kannada
For Quick Alerts
ALLOW NOTIFICATIONS
For Daily Alerts
  up-cm-akhilesh-yadav-mysore-engineer-mysore-pak
  ಮೈಸೂರು, ಮಾ.15: 'ಮೈಸೂರು ಇಂಜಿನಿಯರ್' ಅಖಿಲೇಶ್ ಯಾದವ್ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಇದೀಗ ತಾನೆ ಪದಗ್ರಹಣ ಮಾಡಿದ್ದಾರೆ. ಈ ಸಂದರ್ಭದಲ್ಲಿ ಅಖಿಲೇಶ್ ಯಾದವ್ ಮತ್ತು ಅವರ ಬೆಂಬಲಿಗರ ಬಾಯಿಯನ್ನು ಸಿಹಿ ಗೊಳಿಸಿದ್ದು ವಿಶ್ವವಿಖ್ಯಾತ ಮೈಸೂರು ಪಾಕ್!

  ಅದಕ್ಕೂ ಮುನ್ನ ದೇಶದ ಅತ್ಯಂತ ಕಿರಿಯ ವ್ಯಕ್ತಿಯೊಬ್ಬರು ಮುಖ್ಯಮಂತ್ರಿಯಾಗಿ ಅಧಿಕಾರದ ಗದ್ದುಗೆಗೇರುವುದನ್ನು ಕಣ್ತುಂಬಿಸಿಕೊಳ್ಳಲು ಮೈಸೂರು ರಾಜಮನೆತನದ ದಶರಥ ರೈ, ಅನಿಲ್ ಪ್ರಧಾನ್ ಮತ್ತು ಅವರ ತಂಡ ಲಖ್ನೋಗೆ ಆಗಮಿಸಿದೆ. ಅವರನ್ನು ಅಖಿಲೇಶ್ ರಾಜೋಪಚಾರದೊಂದಿಗೆ ಬರ ಮಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಮೈಸೂರಿನ ಶ್ರೀ ಜಯಚಾಮರಾಜೇಂದ್ರ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ದಿನಗಳನ್ನು (1990-94) ಅಖಿಲೇಶ್ ಮೆಲುಕುಹಾಕಿದರು ಎನ್ನಲಾಗಿದೆ.

  'ಲಖ್ನೋದ ವಿಕ್ರಮಾದಿತ್ಯ ಮಾರ್ಗ್ ನಲ್ಲಿರುವ ಅಖಿಲೇಶ್ ಮನೆಗೆ ಬುಧವಾರ ಸಂಜೆ ಹೋದಾಗ ಸಮಾಜವಾದಿ ಪಕ್ಷದ ನಾಯಕರು, ಕಾರ್ಯಕರ್ತರು ನಮಗೆ ಆತ್ಮೀಯ ಸ್ವಾಗತ ನೀಡಿದರು. ನಮ್ಮನ್ನು ಗಣ್ಯಾತಿಗಣ್ಯ ವ್ಯಕ್ತಿಗಳೆಂದು ಗುರುತಿಸಿ, ಆದರಾತಿಥ್ಯ ನೀಡಿದರು. ಸುಮಾರು ಅರ್ಧ ಗಂಟೆ ಕಾಲ ಅವರ ಜತೆಗಿದ್ದವು. ಆ ಸಂದರ್ಭದಲ್ಲಿ ಅವರಿಗಾಗಿ ತೆಗೆದುಕೊಂಡು ಹೋಗಿದ್ದ ವಿಶೇಷ ಮೈಸೂರ್ ಪಾಕ್ ನೀಡಿದೆವು' ಎಂದು ದಶರಥ ಹೇಳಿದ್ದಾರೆ.

  ಈ ಮಧ್ಯೆ, ಶ್ರೀ ಜಯಚಾಮರಾಜೇಂದ್ರ ಕಾಲೇಜಿನ ಹಾಲಿ ಪ್ರಿನ್ಸಿಪಾಲ್ ಡಾ. ಬಿ.ಜಿ. ಸಂಗಮೇಶ್ವರ್ ಮತ್ತು ಉಪ ಪ್ರಿನ್ಸಿಪಾಲ್ ಸೈಯದ್ ಶಕೀಬ್ ಉರ್ ರೆಹಮಾನ್ ಅವರು ಲಖ್ನೋಗೆ ಭೇಟಿ ನೀಡುವ ಕಾರ್ಯಕ್ರಮವಿದ್ದು, ತಮ್ಮ ಹಳೆಯ ವಿದ್ಯಾರ್ಥಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರನ್ನು ಮೈಸೂರಿಗೆ ಭೇಟಿ ನೀಡಲು ಆಹ್ವಾನಿಸುವರು ಎಂದು ತಿಳಿದುಬಂದಿದೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Akhilesh Yadav who is sworn in as Uttar Pradesh CM a short while ago has a Bachelor of Engineering degree from Sri Jayachamarajendra College of Engineering, Mysore. As such he was given Mysore Pak by his former classmates from Mysore.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more