ಕೋರ್ಟ್ ಆವರಣದಲ್ಲಿ ಚಟುವಟಿಕೆ ಮತ್ತೆ ಶುರು

City Civil court, Bangalore
ಬೆಂಗಳೂರು, ಮಾ.15: ವಕೀಲರು, ಪೊಲೀಸರು ಹಾಗೂ ಮಾಧ್ಯಮದವರ ನಡುವೆ ನಡೆದ ದೊಂಬಿ, ಗಲಭೆ, ಘರ್ಷಣೆಗೆ ತುತ್ತಾಗಿ ಮಂಕಾಗಿದ್ದ ಸಿಟಿ ಸಿವಿಲ್ ಕೋರ್ಟ್ ಆವರಣ ಗುರುವಾರ(ಮಾ.15) ಜನಜಂಗುಳಿಯಿಂದ ತುಂಬಿ ಹೋಗಿತ್ತು.

ಕಲಾಪ ಬಹಿಷ್ಕರಿಸಿ ಸುಮಾರೂ 12 ದಿನಗಳಿಂದ ಮುನಿಸಿಕೊಂಡಿದ್ದ ವಕೀಲರು ಗುರುವಾರ ಮತ್ತೆ ಕೋರ್ಟ್ ಆವರಣದಲ್ಲಿ ಕಾಣಿಸಿಕೊಂಡರು. ಸಿಟಿ ಸಿವಿಲ್ ಕೋರ್ಟ್ ನಲ್ಲಿ ವಕೀಲರು, ಕಕ್ಷಿದಾರರ ದಂಡು ಹರಿದು ಬಂದಿತ್ತು. ಕೋರ್ಟ್ ಕಲಾಪ ಎಂದಿನಂತೆ ಕಾರ್ಯಾರಂಭವಾಗಿದ್ದು ಸಾರ್ವಜನಿಕರಿಗೆ ಸಂತಸ ತಂದಿದೆ.

ಕಳೆದ 12 ದಿನಗಳಿಂದ ಕೋರ್ಟ್ ಕಾಯುತ್ತಿದ್ದ ಪೊಲೀಸರು ಇಂದು ಕಂಡು ಬರಲಿಲ್ಲ. ಖಾಕಿಮಯವಾಗಿದ್ದ ಕೋರ್ಟ್ ಆವರಣ ಇಂದು ಕರಿಕೋರ್‍ ಮಯವಾಗಿತ್ತು. ವಕೀಲರ ಪದಾಧಿಕಾರಿಗಳ ಆಕ್ಷೇಪದ ಮೇರೆಗೆ ಕಾವಲು ಕಾಯಲು ನಿಯೋಜನೆಗೊಂಡಿದ್ದ ಪೊಲೀಸರ ಸಂಖ್ಯೆ ಕಡಿಮೆಮಾಡಲಾಗಿದೆ.

ವಕೀಲರ ಪ್ರತಿಭಟನೆಯ ಫಲಕ, ಕಟೌಟ್, ಭಿತ್ತಿಪತ್ರ, ಪೆಂಡಾಲ್ ಗಳನ್ನು ತೆರವುಗೊಳಿಸಲಾಗಿದೆ. ಆದರೆ, ಮಫ್ತಿಯಲ್ಲಿ ಪೊಲೀಸರು ಕೋರ್ಟ್ ಆವರಣದಲ್ಲಿ ಗಸ್ತು ತಿರುಗುತ್ತಿದ್ದಾರೆ. ಕೋರ್ಟ್ ಮತ್ತೆ ಆರಂಭಗೊಂಡಿದ್ದು ಕಕ್ಷಿದಾರರಿಗೆ ಖುಷಿ ಕೊಟ್ಟಿದೆ.

ಇದಕ್ಕೂ ಮುನ್ನ 5,000 ಕ್ಕೂ ಅಧಿಕ ಪೊಲೀಸರು, ಗೃಹ ರಕ್ಷಕ ದಳ, ಕೆಎಸ್ ಆರ್ ಪಿ, ಕ್ಷಿಪ್ರ ಕಾರ್ಯ ಪಡೆ(RAF) ಕೋರ್ಟ್ ಆವರಣದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಯಲು ನಿಯೋಜನೆಗೊಂಡಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+