ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಂದನ್ ನಿಲೇಕಣಿ ವಿಶ್ವ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ?

By Srinath
|
Google Oneindia Kannada News

infosys-nilekani-may-be-world-bank-chief
ನವದೆಹಲಿ, ಮಾ. 12: ಇನ್ಫೋಸಿಸ್ ಕಂಪನಿಯ ಮಾಜಿ ಬಾಸ್ ನಂದನ್ ನಿಲೇಕಣಿ ಅವರು ವಿಶ್ವ ಬ್ಯಾಂಕ್ ಅಧ್ಯಕ್ಷರಾಗಿ ನೇಮಕವಾಗಲಿದ್ದಾರೆಯೇ? ಹೀಗೊಂದು ಸುದ್ದಿ ಕಾರ್ಪೊರೇಟ್ ವಲಯದಲ್ಲಿ ಹಬ್ಬಿದೆ. ಆದರೆ ನಿಲೇಕಣಿ ಅವರನ್ನು ವಿಶ್ವ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಭಾರತದ ಅಭ್ಯರ್ಥಿಯನ್ನಾಗಿಸುವುದಕ್ಕೆ ಭಾರತ ಸರಕಾರ ಇನ್ನೂ ಯಾವುದೇ ಸಿದ್ಧತೆ ಮಾಡಿಕೊಂಡಿಲ್ಲ.

ಎಸ್ಎಂ ಕೃಷ್ಣ ಒಲವು: ಭಾರತದ ಮಹತ್ವಾಕಾಂಕ್ಷಿ ಆಧಾರ್ ಗುರುತಿನ ಚೀಟಿ ಯೋಜನೆಗೆ ಎಳ್ಳುನೀರು ಬಿಟ್ಟು ಅಂತಾರಾಷ್ಟ್ರೀಯ ಮಹತ್ವದ ಸ್ಥಾನ ಅಲಂಕರಿಸುತ್ತಾರಾ ಎಂಬ ಮಾತೂ ಕೇಳಿಬಂದಿದೆ. ಈ ಮಧ್ಯೆ, ನಿಲೇಕೇಣಿ ವಿಶ್ವ ಬ್ಯಾಂಕ್ ಅಧ್ಯಕ್ಷರಾಗಿ ನೇಮಕವಾಗುವುದಕ್ಕೆ ವಿದೇಶಾಂಗ ಸಚಿವ ಎಸ್ಎಂ ಕೃಷ್ಣ ಒಲವು ತೋರಿದ್ದಾರೆ ಎನ್ನಲಾಗಿದೆ. ವಿಶ್ವಮಟ್ಟದ ಬ್ಯಾಂಕಿಂಗ್ ಯಜಮಾನಿಕೆಗಾಗಿ ಅಮೆರಿಕದಾಚೆಗೂ ಅಭ್ಯರ್ಥಿಯ ಹುಡುಕಾಟ ನಡೆಸಬೇಕು ಎಂದು ಕೃಷ್ಣ ಅಭಿಪ್ರಾಯಪಟ್ಟಿದ್ದಾರೆ.

ಪ್ರಸ್ತುತ ವಿಶ್ವ ಬ್ಯಾಂಕ್ ಅಧ್ಯಕ್ಷರಾಗಿರುವ ರಾಬರ್ಟ್ ಜೋಲಿಕ್ ಅವರ ಅಧಿಕಾರವಾದಿ ಜೂನ್ ಗೆ ಮುಕ್ತಾಯವಾಗಲಿದೆ. ಆದ್ದರಿಂದ ಬ್ಯಾಂಕ್ ತನ್ನ 165 ಸದಸ್ಯ ರಾಷ್ಟ್ರಗಳಿಂದ ಸೂಕ್ತ ಅಭ್ಯರ್ಥಿಯನ್ನು ಹೆಸರಿಸುವಂತೆ ಸೂಚಿಸಿದೆ. ಮಾರ್ಚ್ 23 ಇದಕ್ಕೆ ಕೊನೆಯ ದಿನ.

English summary
Is Nandan Nilekani's possible candidate for World Bank presidentship? But the Indian government has not taken any decision in this regard and has so far not sounded out the former Infosys CEO who now heads the country's ambitious unique identity number (UID) project.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X