ನರೇಂದ್ರ ಐಪಿಎಸ್ ಕೊಂದ ಗಣಿಗಾರಿಕೆಗೆ ಧಿಕ್ಕಾರ

2009ನೇ ಸಾಲಿನ ಐಪಿಎಸ್ ಅಧಿಕಾರಿಯಾದ ನರೇಂದ್ರ, ಇನ್ನೂ ಪ್ರೊಬೇಷನ್ ಅವಧಿಯಲ್ಲಿದ್ದರು. ಅವರ ಪತ್ನಿ ಮಧುರಾಣಿ ತೆವಾಟಿ ಅವರು ಗ್ವಾಲಿಯರ್‌ನಲ್ಲಿ ಐಪಿಎಸ್ ಅಧಿಕಾರಿಯಾಗಿದ್ದಾರೆ. ಪ್ರಸ್ತುತ ಹೆರಿಗೆ ರಜೆಯ ಮೇಲೆ ದೆಹಲಿಗೆ ತೆರಳಿರುವ ಮಧುರಾಣಿ ತಮ್ಮ ಪತಿ ಸಾವಿನ ಶಾಕ್ ನಿಂದ ಹೊರಬಂದಿಲ್ಲ.
ಟ್ರ್ಯಾಕ್ಟರ್ ಚಾಲಕ ಮನೋಜ್ ಗುರ್ಜರ್‌ನನ್ನು ಬಂಧಿಸಲಾಗಿದೆ. ತನಿಖೆ ಮುಂದುವರೆಸಲಾಗುತ್ತಿದೆ ಎಂದು ರಾಜ್ಯದ ಗೃಹ ಸಚಿವ ಉಮಾಶಂಕರ್ ಗುಪ್ತ ಮತ್ತು ರಾಜ್ಯ ಪೊಲೀಸ್ ಮಹಾನಿರ್ದೇಶಕ ನಂದನ್ ದುಬೆ ಹೇಳಿದ್ದಾರೆ.
ಒಂದು ತಿಂಗಳ ಹಿಂದೆ ಬನ್ಮೋರ್‌ಗೆ ನಿಯೋಜಿತರಾಗಿದ್ದ ನರೇಂದ್ರ ಅವರು ಅಧಿಕಾರ ವಹಿಸಿಕೊಂಡ ಕೆಲ ಕಾಲದಲ್ಲೇ ಗಣಿ ಮಾಫಿಯಾ ವಿರುದ್ಧ ಸಮರ ಸಾರಿದ್ದರು. ಗಣಿ ಅಕ್ರಮದಲ್ಲಿ ತೊಡಗಿದ್ದ ಹಲವಾರು ಲಾರಿಗಳು ಮತ್ತು ಟ್ರ್ಯಾಕ್ಟರ್‌ಗಳನ್ನು ವಶಪಡಿಸಿಕೊಂಡಿದ್ದರು. ಇದರಿಂದ ಸಿಟ್ಟಿಗೆದಿದ್ದ ಗಣಿ ಮಾಲೀಕರು ನರೇಂದ್ರ ಅವರ ವಿರುದ್ಧ ಕತ್ತಿ ಮಸೆದಿತ್ತು.
ನರೇಂದ್ರ ಅವರ ಸಾವಿನ ನಂತರ ನನ್ನ ಸೊಸೆ ಮಧುರಾಣಿಗೂ ಜೀವ ಭಯವಿದ್ದು, ನಮ್ಮ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡುವಂತೆ ನರೇಂದ್ರ ಅವರ ತಂದೆ ಪೊಲೀಸರ ಮೊರೆ ಹೊಕ್ಕಿದ್ದಾರೆ.












Click it and Unblock the Notifications