ಡಿವಿಎಸ್ ವಿರುದ್ಧ ತಿರುಗಿ ಬಿದ್ದ ಬಿಎಸ್ ವೈ ಬೆಂಬಲಿಗರು

ಸಭೆಯ ತುಂಬಾ ಮುಂದಿನ ಕಾರ್ಯತಂತ್ರ, ಸಿಎಂ ಡಿವಿಎಸ್ ಹೇಳಿಕೆಗೆ ಪ್ರತಿಹೇಳಿಕೆ ನೀಡುವುದು ಹೇಗೆ, ಹೈಕಮಾಂಡ್ ಬಳಿಗೆ ತೆರಳಬೇಕೇ? ಅಥವಾ ಮತ್ತೆ ಹೈಕಮಾಂಡ್ ಅನ್ನು ಇಲ್ಲಿಗೆ ಕರೆಸಿಕೊಳ್ಳಬೇಕೇ? ಎಂಬ ವಿಚಾರಗಳು ಚರ್ಚೆ ಆಯಿತು.
ಸಭೆಯಿಂದ ಹೊರಬಿದ್ದ ರೇಣುಕಾಚಾರ್ಯ ಅವರು, 'ನೋಡ್ರಿ, ಕೋರ್ಟ್ ಕ್ಲೀನ್ ಚಿಟ್ ನೀಡಿದೆ. ಹೈಕಮಾಂಡ್ ಯಡಿಯೂರಪ್ಪ ಅವರಿಗೆ ಸಿಎಂ ಸ್ಥಾನ ಕೊಡಬೇಕು ಅಷ್ಟೇ. ಸದಾನಂದ ಗೌಡರ ಹೇಳಿಕೆಯಿಂದ ಏನು ಆಗಲ್ಲ' ಎಂದರು.
ಇದೇ ಮಾತನ್ನು ಬೇಳೂರು ಗೋಪಾಲಕೃಷ್ಣ, ಬಿಪಿ ಹರೀಶ್ ಪುನರುಚ್ಚರಿಸಿದರು. ಮಾ.11ರಂದು ಹುಬ್ಬಳ್ಳಿಯಲ್ಲಿ ಶಕ್ತಿ ಪ್ರದರ್ಶನವೋ, ಸಂಭ್ರಮಾಚರಣೆಯೋ ಎಂಬ ಪ್ರಶ್ನೆಗೆ ಕಾದು ನೋಡಿ ಎಂದಷ್ಟೇ ಹೇಳಿದರು.
ಒಟ್ಟಿನಲ್ಲಿ ಈಶ್ವರಪ್ಪ, ಆರ್ ಅಶೋಕ್ ಮುಂತಾದ ಸೇನಾನಿಗಳು ತೆಕ್ಕೆಗೆ ಹಾಕಿಕೊಂಡಿರುವ ಬಿಎಸ್ ವೈ ಬಣ ಈಗ ಸಿಎಂ ಸದಾನಂದ ವಿರುದ್ಧ 'ಕೆಂಪು ಬಾವುಟ' ತೋರಿಸುತ್ತಿದೆ.
ಸದಾನಂದ ಅವರು ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದು ಹೇಳುತ್ತಿದ್ದರೂ ಒಳಗೊಳಗೇ ನಾನ್ಯಾಕೆ ಬಿಡಬೇಕು ಪಟ್ಟ ಎಂಬ ಮನಸ್ಥಿತಿಯನ್ನು ಗಟ್ಟಿ ಮಾಡಿಕೊಂಡಿದ್ದಾರೆ. ,ಮತ್ತೆ ಒಳ ಜಗಳಗಳ ಕಾರಣದಿಂದ ಉಡುಪಿ-ಚಿಕ್ಕಮಗಳೂರು ಕ್ಷೇತ್ರ ಕಳೆದುಕೊಳ್ಳುವ ಭೀತಿ ಎದುರಾಗಿದೆ.











Click it and Unblock the Notifications