ಸದಾನಂದ ಗೌಡರೇ ನಮ್ಮ ಮುಖ್ಯಮಂತ್ರಿ: ವರ್ತೂರ್

ಪಕ್ಷದಿಂದ ಪಕ್ಷಕ್ಕೆ ನೆಗೆದು ಈಗ ಬಿಜೆಪಿಗೆ ಗಂಟುಬಿದ್ದಿರುವ ಪಕ್ಷೇತರ ಶಾಸಕ ವರ್ತೂರು ಪ್ರಕಾಶ್, ತಮಗೆ ಬೇಕಾದ ಖಾತೆ ಸಿಗದಿದ್ದರೂ ತಮ್ಮ ಕ್ಯಾತೆ ಬುದ್ಧಿ ಮುಂದುವರೆಸಿದ್ದಾರೆ.
ಯಡಿಯೂರಪ್ಪ ಹಾಗೂ ಅವರ ಬೆಂಬಲಿಗರು ರೊಚ್ಚಿಗೆದ್ದು ಶಕ್ತಿ ಪ್ರದರ್ಶನಕ್ಕೆ ಮುಂದಾದರೆ, ಸಿಎಂ ಡಿವಿಎಸ್ ಪರ ನಿಂತು ಹೋರಾಟ ನಡೆಸಲು ವರ್ತೂರು ಸಿದ್ಧತೆ ನಡೆಸಿದ್ದಾರೆ.
ವರ್ತೂರು ಅವರ ಬೆಂಬಲಕ್ಕೆ ಇತರೆ ಪಕ್ಷೇತರರಾದ ವೆಂಕಟರಮಪ್ಪ ಕೂಡಾ ಸೇರಿದ್ದಾರೆ. ಗೂಳಿಹಟ್ಟಿ ಶೇಖರ್ ಹಾಗೂ ಡಿ ಸುಧಾಕರ್ ಅವರು ಕೂಡಾ ಅವಕಾಶಕ್ಕೆ ಕಾದಿದ್ದಾರೆ.
ಸದಾನಂದ ಗೌಡರು ಕೂಡಾ ಸಿಎಂ ಪಟ್ಟಕ್ಕೆ ಅಂಟಿಕೊಂಡು ಗಟ್ಟಿಯಾಗಿ ನಿಲ್ಲುವ ಸೂಚನೆ ನೀಡಿದ್ದಾರೆ. ಬಿಜೆಪಿ vs ಯಡಿಯೂರಪ್ಪ ಕದನದಲ್ಲಿ ಹೈಕಮಾಂಡ್ ಅಂಪೈರ್ ಆಗುತ್ತದೋ, ಜೋಕರ್ ಆಗುತ್ತದೋ ಕಾದು ನೋಡಬೇಕಿದೆ.












Click it and Unblock the Notifications