ಕ್ಲೀನ್ ಚಿಟ್: ತುಮಕೂರಿನಲ್ಲಿ ಯಡಿಯೂರಪ್ಪ ಫುಲ್ ಖುಷ್

ತುಮಕೂರಿನಲ್ಲಿ ಸಮಾರಂಭವೊಂದರಲ್ಲಿ ಭಾಗವಹಿಸಿದ್ದ ಯಡಿಯೂರಪ್ಪ 'ಎಲ್ಲ ದೈವೇಚ್ಛೆ. ನಾನೇನು ಅಕ್ರಮ ಎಸಗಿಲ್ಲ. ನ್ಯಾಯಕ್ಕೆ ಜಯ ಸಿಕ್ಕಿದೆ' ಎಂದು ಭಾರಿ ಹರ್ಷ ವ್ಯಕ್ತಪಡಿಸಿದ್ದಾರೆ. ಹೆಚ್ಚು ಹುರುಪಿನಿಂದ ಜನ ಸೇವೆ ಮಾಡಲು ಆನೆ ಬಲ ಬಂದಂತಿದೆ. ನನಗೆ ಕೋರ್ಟಿನಿಂದ ನ್ಯಾಯ ಸಿಕ್ಕಿದೆ' ಎಂದಿದ್ದಾರೆ.
ಮುಂದೇನು ಮಾಡುತ್ತೀರಿ? ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ತುಂಟನಗೆ ಬೀರಿದ ಯಡಿಯೂರಪ್ಪ 'ನೀವು (ಪತ್ರಕರ್ತರು) ಏನು ಮಾಡಬೇಕು ಅಂತ ಹೇಳಿದರೆ ಹಾಗೆ ಮಾಡುತ್ತೇನೆ' ಎಂದು ಉತ್ತರಿಸಿದರು.
ಯಡಿಯೂರಪ್ಪ ಅವರು ಸುರೇಶ್ ಗೌಡ, ರೇಣುಕಾಚಾರ್ಯ, ಸೋಮಣ್ಣ ಸೇರಿದಂತೆ ಬೆಂಬಲಿಗರೊಂದಿಗೆ ಬುಧವಾರ (ಮಾ.7) ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದಾರೆ. ಕೋರ್ಟ್ ತೀರ್ಪಿನ ಬಗ್ಗೆ ಎಲ್ಲರೂ ಸಹಜವಾಗಿ ಹರ್ಷ ವ್ಯಕ್ತಪಡಿಸಿದ್ದಾರೆ.












Click it and Unblock the Notifications