ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳೂರು ಮೇಯರ್ ಸ್ಥಾನವನ್ನು ಕೈಗೆ ಒಪ್ಪಿಸಿದ ಬಿಜೆಪಿ

|
Google Oneindia Kannada News

ಮಂಗಳೂರು, ಮಾ 7: ಅತ್ಯಂತ ನಾಟಕೀಯ ಬೆಳವಣಿಗೆಯೊಂದರಲ್ಲಿ ಆಡಳಿತಾರೂಢ ಬಿಜೆಪಿ ತನ್ನ ಮೇಯರ್ ಸ್ಥಾನದ ಉಮೇದುವಾರಿಕೆಯನ್ನು ಕಳೆದುಕೊಂಡು ಎದುರಾಳಿ ಕಾಂಗ್ರೆಸ್ ಪಕ್ಷದ ಪಾಲಾಗುವಂತೆ ಮಾಡಿದೆ. ಮಂಗಳೂರು ಮಹಾನಗರ ಪಾಲಿಕೆಯ ಆಡಳಿತ ಚುಕ್ಕಾಣಿ ಹಿಡಿದಿದ್ದ ಬಿಜೆಪಿ, ಮೇಯರ್ ಸ್ಥಾನಕ್ಕೆ ತನ್ನ ಅಭ್ಯರ್ಥಿಯನ್ನಾಗಿ ರೂಪಾ ಬಂಗೇರಾ ಅವರನ್ನು ಆಯ್ಕೆ ಮಾಡಿ ನಾಮಪತ್ರ ಸಲ್ಲಿಸಿತ್ತು.

ಆದರೆ ಬಂಗೇರಾ ಅವರು ತನ್ನ ನಾಮಪತ್ರದ ಜೊತೆಗೆ ಅಭ್ಯರ್ಥಿಯ ಅರ್ಹತೆಯನ್ನು ಸಾಬೀತುಗೊಳಿಸುವ ಜಾತಿ ಪ್ರಮಾಣಪತ್ರವನ್ನು ಸಲ್ಲಿಸಿರಲಿಲ್ಲ. ಇದನ್ನು ಗಮನಿಸಿದ ಅಧಿಕಾರಿಯವರು ನಾಮಪತ್ರ ದೋಷಪೂರಿತವಾಗಿದೆ ಎಂದು ಹತ್ತು ನಿಮಿಷದ ಕಾಲಾವಧಿ ನೀಡಿ ಸರಿಯಾಗಿ ನಾಮಪತ್ರ ಸಲ್ಲಿಸಲು ಸೂಚಿಸಿದರು.

ಆದರೆ ಈ ಹತ್ತು ನಿಮಿಷದ ಅವಧಿಯಲ್ಲಿ ಬೇರೆ ನಾಮಪತ್ರ ಸಲ್ಲಿಸಲು ರೂಪಾ ಬಂಗೇರಾ ವಿಫಲರಾದರು. ಇದೇ ಸಂದರ್ಭದಲ್ಲಿ ಬಿಜೆಪಿ ಬೇರೆ ಅಭ್ಯರ್ಥಿಯನ್ನು ನೇಮಿಸುವಲ್ಲೂ ವಿಫಲರಾದ ಕಾರಣ ಮೇಯರ್ ಪಟ್ಟವನ್ನು ಕಾಂಗ್ರೆಸ್ ಪಕ್ಷಕ್ಕೆ ನೀಡಿತು.

ಕಾಟಿಪಳ್ಳ ಪ್ರದೇಶದ ಕಾರ್ಪೊರೇಟರ್‌ ಕಾಂಗ್ರೆಸ್ ಪಕ್ಷದ ಗುಲ್ಜಾರ್‌ ಭಾನು ಅವರು ಮಂಗಳೂರು ಮೇಯರ್‌ ಆಗಿ ಅವಿರೋಧವಾಗಿ ಆಯ್ಕೆಯಾದರು. ಗುಲ್ಜಾರ್‌ ಭಾನು ಅವರು ಮಂಗಳೂರು ನಗರ ಪಾಲಿಕೆಯ 26ನೆಯ ಮೇಯರ್‌ ಆಗಿದ್ದಾರೆ.

English summary
Congress candidate Gulzar Banu elected as Mayor of Mangalore City Corporation. BJP candidate Roopa Bangera's application has been rejected since she failed to produce caste certificate on time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X