ಕೋರ್ಟಿಗೆ ಹಾಜರಾಗದ ಬಿಎಸ್‌ವೈ ವಿರುದ್ಧ ಅರೆಸ್ಟ್ ವಾರಂಟ್

ಯಡಿಯೂರಪ್ಪ ಜೊತೆಗೆ ಅವರ ಮಕ್ಕಳಾದ ಸಂಸದ ಬಿವೈ ರಾಘವೇಂದ್ರ, ಬಿವೈ ವಿಜಯೇಂದ್ರ, ಅಳಿಯ ಸೋಹನ್ ಕುಮಾರ್ ಮತ್ತು ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಅವರು ಕೂಡ ಖುದ್ದಾಗಿ ನ್ಯಾಯಾಲಯದ ಮುಂದೆ ಹಾಜರಾಗಬೇಕೆಂದು ನ್ಯಾಯಾಧೀಶ ಎನ್.ಕೆ. ಸುಧೀಂದ್ರ ರಾವ್ ಅವರು ತಾಕೀತು ಮಾಡಿದ್ದಾರೆ.
ವಕೀಲರು ಸೋಮವಾರದ ನ್ಯಾಯಾಲಯದ ಕಲಾಪಗಳನ್ನು ಬಹಿಷ್ಕರಿಸಿದ್ದರಿಂದ ಯಡಿಯೂರಪ್ಪನವರ ವಕೀಲರು ಕೂಡ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ನ್ಯಾಯವಾದಿಯೂ ಇಲ್ಲ, ಕಕ್ಷಿಗಾರನೂ ಇಲ್ಲದ್ದರಿಂದ ಕೋಪಗೊಂಡ ನ್ಯಾಯಮೂರ್ತಿಗಳು ಎಲ್ಲರ ವಿರುದ್ಧ ಜಾಮೀನುರಹಿತ ವಾರಂಟ್ ಜಾರಿಮಾಡಿದ್ದು, ಮಾ.24ರಂದು ಹಾಜರಾಗಲೇಬೇಕೆಂದು ಆದೇಶಿಸಿದ್ದಾರೆ.
ಈ ನಡುವೆ, ರಾಜಕೀಯ ಸನ್ಯಾಸದ ಮಾತನ್ನಾಡಿರುವ ಯಡಿಯೂರಪ್ಪ ಅವರು ಇದ್ದಕ್ಕಿದ್ದಂತೆ ಸೋಮವಾರ ನವದೆಹಲಿಗೆ ಹಾರಿದ್ದಾರೆ. ಭಾನುವಾರ ನಡೆದ ಸಮಾರಂಭವೊಂದರಲ್ಲಿ ರಾಜಕೀಯದಿಂದ ದೂರಸರಿಯುವ ಮಾತನ್ನು ಯಡಿಯೂರಪ್ಪ ಆಡಿದ್ದರು. ದೆಹಲಿಗೆ ತೆರಳಿರುವ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಬಿಜೆಪಿ ವರಿಷ್ಠರೊಡನೆ ಯಡಿಯೂರಪ್ಪ ಮಾತುಕತೆ ನಡೆಸುವ ಸಾಧ್ಯತೆಯೂ ಇದೆ.












Click it and Unblock the Notifications