ಉತ್ತರಪ್ರದೇಶದಲ್ಲಿ ಸೈಕಲ್ ಗುದ್ದಿ ಆನೆ ಸಾವು

ಎಸ್ ಪಿಗೆ ಸ್ಪಷ್ಟ ಬಹುಮತ ಸಿಗಲು 202 ಸೀಟುಗಳ ಗೆಲುವಿನ ಅಗತ್ಯವಿದೆ. 164 ಸೀಟುಗಳನ್ನು ಗೆದ್ದಿರುವ ಎಸ್ ಪಿ, 61 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ಮತ ಎಣಿಕೆ ಲೈವ್ ಸುದ್ದಿಗಾಗಿ ಅಯಾ ರಾಜ್ಯದ ಮೇಲೆ ಕ್ಲಿಕ್ ಮಾಡಿ : ಉತ್ತರ ಪ್ರದೇಶದ 403, ಪಂಜಾಬ್ 117, ಉತ್ತರಾಖಂಡ್ 70, ಮಣಿಪುರ 60, ಗೋವಾ 40
ಬಹುಜನಸಮಾಜವನ್ನು ಕೆಡವಿದ ಸಮಾಜವಾದ : ಅಖಿಲೇಶ್ ಯಾದವ್ ನೇತೃತ್ವದ ಸೈಕಲ್ ಸವಾರರ ತಂಡ ಗುದ್ದಿದ ರಭಸಕ್ಕೆ ಬಿಎಸ್ ಪಿಯ ಆನೆ ನೆಲಕ್ಕುರಳಿದೆ. ಬ್ರಾಹ್ಮಣರನ್ನು ನೆಚ್ಚಿಕೊಂಡ ದಲಿತರ ನಾಯಕಿಗೆ ಭಾರಿ ಮುಖಭಂಗವಾಗಿದೆ.
ಪ್ರತಿಷ್ಠೆ ಕಣ ಉಳಿಸಿಕೊಳ್ಳದೆ ಕಾಂಗ್ರೆಸ್ ಸೋಲೊಪ್ಪಿಕೊಂಡಿದೆ ಹಾಗೂ ಮತ್ತೆ ಹಿಂದೂತ್ವ ಬೀಜ ಬಿತ್ತಲು ಹೋದ ಬಿಜೆಪಿ ಪಕ್ಷ ಕೂಡಾ ಹೀನಾಯವಾಗಿ ಸೈಕಲ್ ಸವಾರರ ದಾಳಿಗೆ ತುತ್ತಾಗಿದೆ.
ಮುಖ್ಯಮಂತ್ರಿ ಯಾರು?: 200ಕ್ಕೂ ಅಧಿಕ ಸೀಟುಗಳ ಲೆಕ್ಕಾಚಾರದಲ್ಲಿರುವ ಎಸ್ಪಿಗೆ ಈ ಪರಿ ಗೆಲುವು ತಂದುಕೊಟ್ಟ ಸ್ಟಾರ್ ಅಖಿಲೇಶ್ ಯಾದವ್ ಈಗ ಎಲ್ಲರ ಕಣ್ಮಣಿ. ಆದರೂ ಸಿಎಂ ಸ್ಥಾನಕ್ಕ ಅಪ್ಪ ಮುಲಾಯಂ ಸಿಂಗ್ ಯಾದವ್ ಅವರೇ ಸೂಕ್ತ ಎಂದು ಅಖಿಲೇಶ್ ಹೇಳಿದ್ದಾರೆ.
ಇಂದೇ ಹೋಳಿ ಹಬ್ಬ ಆಚರಣೆ: ಲಖ್ನೋದ ವಿಕ್ರಮಾದಿತ್ಯ ಮಾರ್ಗ್ ನಲ್ಲಿರುವ ಸಮಾಜವಾದಿ ಪಕ್ಷದ ಕಚೇರಿಯಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ.
"Jiska Jalwa Kayam hai, Uska Naam Mulayam hai" (Whose kingdom is thriving, His name is Mulayam) and "Desh ki Shaan Mulayam Singh" (The pride of the nation is Mulayam Singh) ಎಂದು ಘೋಷಣೆಗಳು ಕೇಳಿ ಬರುತ್ತಿದ್ದು, ಸೈಕಲ್ ಸವಾರರು ಎಲ್ಲೆಡೆ ಜೈತ್ರಯಾತ್ರೆ ಹೊರಟಿದ್ದು, ಉತ್ತರ ಪ್ರದೇಶದಲ್ಲಿ ಇಂದೇ ಹೋಳಿ ಹಬ್ಬ ಆಚರಿಸಲಾಗುತ್ತಿದೆ.












Click it and Unblock the Notifications