ಟೆಕ್ಕಿ ಪತ್ನಿಯ ಹತ್ಯೆ: ಇನ್ಫಿ ಟೆಕ್ಕಿ ಪರಾರಿ

ಶಾಮಿಲಿ ತಂದೆ ಕೋಟೇಶ್ವರರಾವ್ ಸಿಕಂದರಾಬಾದ್ ಮೀಸಲು ಪೊಲೀಸ್ ಪಡೆಯಲ್ಲಿ ಮುಖ್ಯ ಪೇದೆಯಾಗಿದ್ದಾರೆ. ಕಳೆದ ಮೇ ತಿಂಗಳಲ್ಲಿ ಶೋಭನ್ ಜತೆ ತಮ್ಮ ಪುತ್ರಿಯ ವಿವಾಹಬಂಧ ನೆರವೇರಿಸಿದಾಗ ಕೋಟೇಶ್ವರರಾವ್, 10 ಲಕ್ಷ ರೂ. ನಗದು ಮತ್ತು 10 ತೊಲ ಬಂಗಾರ ನೀಡಿದ್ದರು.
ಶಾಮಿಲಿ ತಲೆಗೆ ತೀವ್ರ ಗಾಯಗಳಾಗಿದ್ದರಿಂದ ಪತಿಯೇ ಹತ್ಯೆ ಮಾಡಿದ್ದಾನೆ. ಸೋಮವಾರ ರಾತ್ರಿ 9 ಗಂಟೆಗೆ ಫೋನ್ ಮಾಡಿ, ಶಾಲಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಶೋಭನ್ ತಿಳಿಸಿದ್ದಾಗಿ ಕೋಟೇಶ್ವರರಾವ್ ದೂರಿದ್ದಾರೆ.
'ಮೈಯಲ್ಲಿ ಹುಷಾರಿಲ್ಲವೆಂದರೂ ಕೆಲಸಕ್ಕೆ ಹೋಗು ಅಂತ ತನ್ನ ಗಂಡ ಪೀಡಿಸುತ್ತಿದ್ದಾನೆ. ನೀನು ನನಗೆ ಸಮ ಅಲ್ಲ. ನಾನು ಮತ್ತೆ ಮದುವೆಯಾದರೂ ಭಾರಿ ವರದಕ್ಷಿಣೆ ಸಿಗುತ್ತದೆ. ನೀನೇ ಇನ್ನೂ ಜಾಸ್ತಿ ಹಣ ತಗೊಂಬಾ' ಅಂತ ಹೇಳ್ತಿದ್ದಾನೆ ಎಂದು ಶಾಲಿನಿ ಭಾನುವಾರವಷ್ಟೇ ತಮ್ಮ ತಾಯಿಗೆ ಫೋನ್ ಮಾಡಿ ತಿಳಿಸಿದ್ದರಂತೆ.












Click it and Unblock the Notifications