ಎಸ್ ಪಿ ಜೊತೆ ಮೈತ್ರಿ ಮಾಡಿಕೊಳ್ಳಲ್ಲ :ಬಿಜೆಪಿ

ಎಸ್ ಪಿ ಮುನ್ನಡೆಯಲ್ಲಿದ್ದರೂ, ಅಧಿಕಾರಕ್ಕೆ ಬಂದರೂ ನಾವು ಅವರ ಜೊತೆ ಕೈ ಜೋಡಿಸುವುದಿಲ್ಲ ಎಂದು ಬಿಜೆಪಿ ವಕ್ತಾರ ರವಿಶಂಕರ್ ಪ್ರಸಾದ್ ಹೇಳಿದ್ದಾರೆ. ಜೊತೆಗೆ ಪಂಜಾಬ್, ಉತ್ತರಾಖಂಡ್ ಸ್ಥಿತಿ ಗತಿ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ.
ರವಿಶಂಕರ್ ಪ್ರಸಾದ್ ಅವರ ಮಾತನ್ನೇ ಪುನರುಚ್ಚರಿಸಿದ ಮತ್ತೊಬ್ಬ ವಕ್ತಾರ ಮುಖ್ತಾರ್ ಅಬ್ಬಾಸ್ ನಕ್ವಿ ಅವರು, ಬಿಜೆಪಿ ಯಾವುದೇ ಪಕ್ಷಕ್ಕೆ ಬೆಂಬಲ ನೀಡುವುದಿಲ್ಲ ಎಂದಿದ್ದಾರೆ.
ಮತ ಎಣಿಕೆ ಲೈವ್ ಸುದ್ದಿಗಾಗಿ ಅಯಾ ರಾಜ್ಯದ ಮೇಲೆ ಕ್ಲಿಕ್ ಮಾಡಿ : ಉತ್ತರ ಪ್ರದೇಶದ 403, ಪಂಜಾಬ್ 117, ಉತ್ತರಾಖಂಡ್ 70, ಮಣಿಪುರ 60, ಗೋವಾ
ಉತ್ತರ ಪ್ರದೇಶದಲ್ಲಿ ಸ್ಪಷ್ಟ ಬಹುಮತದ ನಿರೀಕ್ಷೆಯಿತ್ತು. ನಮಗೆ ಗೆಲುವು ಸಿಗದಿದ್ದರೂ ನಾವು ವಿಪಕ್ಷವಾಗಿ ಉಳಿಯಲು ಸಿದ್ಧರಿದ್ದೇವೆ. ಮೈತ್ರಿ ಸರ್ಕಾರದ ಬಗ್ಗೆ ಬಿಜೆಪಿ ಚಿಂತಿಸಿಲ್ಲ ಎಂದು ನಕ್ವಿ ಹೇಳಿದ್ದಾರೆ.
ಈ ಹಿಂದೆ ಬಹುಜನ ಸಮಾಜ ಪಕ್ಷ(ಬಿಎಸ್ ಪಿ)ಗೆ ಮೂರು ಬಾರಿ ಬೆಂಬಲ ನೀಡಿ ಅನುಭವಿಸಿತ್ತು ಸಾಕು. ಮತ್ತೊಮ್ಮೆ ಅದೇ ತಪ್ಪನ್ನು ಮಾಡುವುದಿಲ್ಲ ಎಂದು ನಕ್ವಿ ಹೇಳಿದ್ದಾರೆ.












Click it and Unblock the Notifications